ಸಸ್ಯಾಹಾರಿ ಫಿಶ್ ಫ್ರೈ ವಿಡಿಯೋ ಆಗುತ್ತಿದೆ ವೈರಲ್! ನೇಟಿಜನ್ಸ್ ಗಳು ಹೇಳುತ್ತಿದ್ದಾರೆ, ಈ ಹಣದಲ್ಲಿ ಎರಡು ಕಿಲೋ ಮೀನುಗಳು ಬರುತ್ತವೆ.

ನೀವು ಎಂದಾದರೂ ಸಸ್ಯಹಾರಿ ಫಿಶ್ ಫ್ರೈ ಬಗ್ಗೆ ಕೇಳಿದ್ದೀರಾ? ಇಲ್ಲವಾದರೆ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ಸಸ್ಯಹಾರಿ ಫಿಶ್ ಫ್ರೈ ನ ವಿಡಿಯೋ ನೋಡಿ. ದಿಲ್ಲಿ ನಿವಾಸಿ ಮತ್ತು ಫುಡ್ ಬ್ಲಾಗರ್ ಈ ವಿಚಿತ್ರ ಡಿಶ್ ವಿಡಿಯೋದಲ್ಲಿ ಶೇರ್ ಮಾಡಿದ್ದಾನೆ.

ಇಲ್ಲಿಯವರೆಗೆ ನೀವು ಅನೇಕ ರೀತಿಯ ಸಸ್ಯಹಾರಿ ಪದಾರ್ಥಗಳನ್ನು ಸೇವಿಸಿದ್ದೀರಿ. ಆದರೆ ಕಾಣಲು ಮಾಂಸಾಹಾರಿ ಪದಾರ್ಥದ ಹಾಗೆ ಕಾಣುವ ಈ ಸಸ್ಯಹಾರಿ ಪದಾರ್ಥವನ್ನು ಎಂದಿಗೂ ತಿನ್ನಲಿಕ್ಕಿಲ್ಲ. ಫುಡ್ ಬ್ಲಾಗರ್ ಅಮರ್ ತಿರೋಹಿ ಅವರ ಈ ಸಸ್ಯಹಾರಿ ಮೀನಿನ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಡಿಶ್ ನ್ನು ಪೂರ್ವ ದಿಲ್ಲಿಯ ಖನ್ನಾ ತಂದೂರಿ ಜಂಕ್ಷನ್ ನಲ್ಲಿ ಟ್ರೈ ಮಾಡಲಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ಅಮರ್ ಅವರು ಸಸ್ಯಹಾರಿ ಫಿಶ್ ಫ್ರೈ ತಯಾರಿಸುವವನ ಜೊತೆಗೆ ಸಂದರ್ಶನ ಮಾಡಿದ್ದಾರೆ. ಈ ವಿಡಿಯೋದಲ್ಲಿ ಫಿಶ್ ಫ್ರೈ ತಯಾರಿಸುವವನು ಪಲ್ಲೆಯಲ್ಲಿ ವೆಜ್ ಫಿಶ್ ಫ್ರೈ ತಯಾರಿಸಿ ಕೊಡುತ್ತೇನೆಂದು ಹೇಳುತ್ತಾನೆ. ಅದಕ್ಕೆ ಫುಡ್ ಬ್ಲಾಗರ್ ಈ ಮೀನುಗಳು ಯಾವಾಗಿನಿಂದ ಸಸ್ಯಾಹಾರಿ ಆದವು? ಎಂದು ಕೇಳುತ್ತಾನೆ. ಆಗ ಅದನ್ನು ತಯಾರಿಸುವ ರೀತಿಯನ್ನು ಫಿಶ್ ಫ್ರೈ ಮಾಡುವವನು ಹೇಳುತ್ತಾನೆ ಮತ್ತು ಮಾಡಿ ತೋರಿಸುತ್ತಾನೆ. ಇನ್ನು ಆ ಫಿಶ್ ಫ್ರೈ ಎಷ್ಟೊಂದು ಸ್ವಾದಿಷ್ಟವಾಗಿದೆ ಎಂಬುದನ್ನು ತಿಳಿಯಲು ವಿಡಿಯೋ ನೋಡಬೇಕಾಗುತ್ತದೆ.

ಸೋಯಾಬೀನ್ ಮತ್ತು ಹಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಳಕೆ.

ಈ ವೆಜ್ ಫಿಶ್ ಫ್ರೈ ತಯಾರಿಸಲು ಮಾರಾಟಗಾರ ಮುಖ್ಯವಾಗಿ ಸೋಯಾಬೀನ್ ಮತ್ತು ಹಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ನ್ನು ಬಳಕೆ ಮಾಡಿದ್ದಾನೆ. ಫುಡ್ ಬ್ಲಾಗರ್ ಅಮರ್ ತಿರೋಹಿ ಮಾತ್ರ ಇದರ ಟೆಸ್ಟ್ ಇಷ್ಟವಾಗಿದೆ ಮತ್ತು ಅವರು ಅದನ್ನು ತಿನ್ನುವ ಸಲಹೆಯನ್ನು ಸಹ ನೀಡಿದ್ದಾರೆ. ಒಟ್ಟಿನಲ್ಲಿ ನಾನು ತಿಂದ ನಂತರ ಈ ಫಿಶ್ ಫ್ರೈ ಟೆಸ್ಟ್ ನನಗಂತೂ ಇಷ್ಟವಾಗಿದೆ ಎಂದು ಫುಡ್ ಬ್ಲಾಗರ್ ಹೇಳುತ್ತಾರೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ foodie_incarnate ಈ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಕ್ಯಾಪ್ಷನ್ ನಲ್ಲಿ ಅಮರ್ ಅವರು ಶುದ್ಧ ಸಸ್ಯಾಹಾರಿ ಫಿಶ್ ಫ್ರೈ ಎಂದು ಬರೆದಿದ್ದಾರೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ ಎಂದು ತಿಳಿದುಬರುತ್ತದೆ. ಕಾರಣ ಈ ವಿಡಿಯೋವನ್ನು ಇಲ್ಲಿಯವರೆಗೆ 4 ಲಕ್ಷ ಜನ ವೀಕ್ಷಿಸಿದ್ದಾರೆ. ಈ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೇಟಿಜನ್ಸ್ ಗಳು ಕಾಮೆಂಟ್ನಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಅಂದರ್ ಫಿಶ್ ಸೊಯಾ ಹೈ ಕ್ಯಾ?

ಈ ವಿಡಿಯೋ ನೋಡಿದ ಯೂಸರ್ ನೊಬ್ಬ ತನ್ನ ಕಾಮೆಂಟ್ನಲ್ಲಿ ತುಂಬಾ ತಮಾಷೆಯಾಗಿ ‘ಅಂದರ್ ಫಿಶ್ ಸೊಯಾ ಹೈ ಕ್ಯಾ?’ ಎಂದು ಕೇಳಿದ್ದಾನೆ. ಇನ್ನೊಬ್ಬ ಒಳಗಿರುವ ಮುಳ್ಳುಗಳನ್ನು ತೆಗೆದು ಸರಿಯಾಗಿ ನೋಡಿ ತಿನ್ನಿ ಎಂದಿದ್ದಾನೆ. ಇನ್ನೊಬ್ಬ ಯೂಸರ್ ಈ ಬೆಲೆಯಲ್ಲಿ (250 ₹) ಮಾರ್ಕೆಟ್ ನಲ್ಲಿ ಎರಡು ಕಿಲೋ ಮೀನುಗಳು ಬರುತ್ತದೆ ಎಂದು ಹೇಳಿದ್ದಾರೆ.