OMG! ಕೋಳಿ ಹವೆಯಲ್ಲಿ ದೂರದವರೆಗೆ ಹಾರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೋ ನೋಡಿದರೆ ಬೆರಗಾಗುವಿರಿ!!!

ರೆಕ್ಕೆಗಳನ್ನು ಹೊಂದಿರುವ ಅಥವಾ ಗಾಳಿಯಲ್ಲಿ ಹಾರುವ ಹೆಚ್ಚಿನ ಜೀವಿಗಳನ್ನು ಪಕ್ಷಿಗಳು ಎಂದು ಕರೆಯಲಾಗುತ್ತದೆ. ಪಕ್ಷಿಗಳು ಎತ್ತರದ ಪರ್ವತಗಳನ್ನು ಸಹ ಸುಲಭವಾಗಿ ದಾಟಬಹುದು. ಆದರೆ, ಕೆಲವು ಪಕ್ಷಿಗಳು ರೆಕ್ಕೆಗಳನ್ನು ಹೊಂದಿದ್ದರೂ ಸಹ ಎತ್ತರಕ್ಕೆ ಹಾರಲು ಸಾಧ್ಯವಿಲ್ಲ ಅಥವಾ ಸ್ವಲ್ಪ ಸಮಯದವರೆಗೆ ಮಾತ್ರ ಹಾರಬಲ್ಲವು. ಈ ಪಕ್ಷಿಗಳು ತಮ್ಮ ರೆಕ್ಕೆಗಳ ಸಹಾಯದಿಂದ ಹೆಚ್ಚು ದೂರ ಹಾರಲು ಸಾಧ್ಯವಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ಎಲ್ಲರನ್ನೂ ಬೆರಗುಗೊಳಿಸಿದೆ. ಈ ವಿಡಿಯೋ ಕೋಳಿಯದ್ದಾಗಿದೆ. ಈ ವಿಡಿಯೋದಲ್ಲಿ ಕೋಳಿಯನ್ನು ಹವೆಯಲ್ಲಿ ದೂರದವರೆಗೆ ಹಾರುತ್ತಿರುವುದನ್ನು ಕಾಣಬಹುದು. ಹವೆಯಲ್ಲಿ ಕೋಳಿ ಹಾರುವುದನ್ನು ನೀವು ನೋಡಿರಬಹುದು.

ವೀಡಿಯೊದಲ್ಲಿ ಕೋಳಿ ಸ್ವಲ್ಪ ದೂರ ಓಡುತ್ತಿರುವುದನ್ನು ನೀವು ನೋಡಬಹುದು. ತದನಂತರ ಅದು ಹಾರಲು ತಯಾರಾಗುತ್ತದೆ. ಸ್ವಲ್ಪ ಸಮಯದಲ್ಲಿ, ಕೋಳಿ ತನ್ನ ರೆಕ್ಕೆಗಳ ಸಹಾಯದಿಂದ ಗಾಳಿಯಲ್ಲಿ ಹಾರುತ್ತದೆ. ಇದು ತುಂಬಾ ಎತ್ತರಕ್ಕೆ ಹಾರುವುದಿಲ್ಲ, ಆದರೆ ಇದು ತುಂಬಾ ದೂರದ ವರೆಗೆ ಹಾರುತ್ತದೆ, ಈ ಕೋಳಿಯ ಸಾಹಸ ತುಂಬಾ ಅದ್ಭುತವಾಗಿದೆ. ಕೋಳಿಗಳು ಸಾಮಾನ್ಯವಾಗಿ ಕೆಲವು ಮೀಟರಗಳಷ್ಟು ಹಾರುತ್ತವೆ. ಆದರೆ ಈ ವೀಡಿಯೊದಲ್ಲಿ ಕೋಳಿ ಮಾತ್ರ ಬಹಳ ದೂರದ ವರಗೆ ಹವೆಯಲ್ಲಿಯೇ ಪ್ರಯಾಣಿಸುತ್ತದೆ.

ವೀಡಿಯೋ ನೋಡಿ

ಈಅದ್ಭುತವಾದ ವೀಡಿಯೊವನ್ನು @buitengebieden_ ಎಂಬ ಖಾತೆಯಿಂದ ಸಾಮಾಜಿಕ ಮಾಧ್ಯಮ Twitter ನಲ್ಲಿ ಹಂಚಿಕೊಳ್ಳಲಾಗಿದೆ. ‘ಕೋಳಿ ಇಷ್ಟು ದೂರ ಹಾರುತ್ತದೆ ಎಂದು ನನಗೆ ಗೊತ್ತಿರಲಿಲ್ಲ’ ಎಂದು ವಿಡಿಯೋದ ಶೀರ್ಷಿಕೆ ಬರೆಯಲಾಗಿದೆ. 52 ಸೆಕೆಂಡುಗಳ ವೀಡಿಯೊವನ್ನು ಇದುವರೆಗೆ 2.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಲ್ಲದೆ 13,000ಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಈ ವಿಡಿಯೋಗೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಯುಜರ್ಸ್ ವೀಡಿಯೊದಲ್ಲಿ ‘ ಇದು ನನಗೆ ಗೊತ್ತೇ ಇರಲಿಲ್ಲ’ ಅಂತ ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬ ಬಳಕೆದಾರರು, “ತುಂಬಾ ಸುಂದರವಾಗಿದೆ, ನನ್ನ ಹತ್ತಿರವಿರುವ ಕೋಳಿ ಎಷ್ಟೊಂದು ದೊಡ್ಡದಾಗಿದೆ ಎಂದರೆ ಅದು ಇಷ್ಟು ದೂರ ಹಾರಲು ಸಾಧ್ಯವೇ ಇಲ್ಲ.” ಆ ಇದರ ಹೊರತಾಗಿಯೂ ಹಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.