ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿರುವ ಮೂರು ಮುಖದ ಅದ್ಭುತ, ಅಪರೂಪದ ಚಿರತೆಯ ವೈರಲ್ ಸತ್ಯವೇನು? ಗೊತ್ತಾ..?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ವೀಡಿಯೋ ಮತ್ತು ಫೋಟೋಗಳು ಎಷ್ಟೋ ಸಲ ನೇಟಿಜನ್ಸ್ ಗಳಿಗೆ ತುಂಬಾ ಕನ್ಫ್ಯೂಸ್ ಮಾಡುತ್ತವೆ. ಎಷ್ಟೋ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಸತ್ಯಕ್ಕಿಂತ ಸುಳ್ಳು ಸುದ್ದಿಗಳೇ ಹೆಚ್ಚಾಗಿ ಹರಡುತ್ತವೆ, ಮತ್ತು ಅದನ್ನೇ ನಿಜವೆಂದು ತಿಳಿದುಕೊಳ್ಳುತ್ತೇವೆ.
ಈಗ ಇದೇ ರೀತಿಯ ಕನ್ಫ್ಯೂಸ್ ಚಿತ್ರ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾರಣ ಈ ಚಿತ್ರದಲ್ಲಿ ಚಿರತೆಯ ಮೂರು ಮುಖಗಳು ಕಂಡು ಬರುತ್ತಿವೆ. ಸಹಜವಾಗಿ ನೋಡುವಾಗ ಒಂದು ಚಿರತೆಗೆ ಮುಖಗಳು ಮೂರು ಕಂಡು ಬರುತ್ತಿವೆ.
ಈ ಫೋಟೋ ಹಿಂದೆ ಒಬ್ಬ ಫೋಟೋಗ್ರಾಫರ್ ನ ಕರಾಮತ್ತು ಇದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಫೋಟೋವನ್ನು ಕ್ಯಾಮೆರಾ ಮ್ಯಾನ್ ಅದ್ಭುತವಾದ ಟೈಮಿಂಗ್ ನಲ್ಲಿ ಕ್ಲಿಕ್ ಮಾಡಿದ್ದಾನೆ.
ಸದ್ಯ ಸಂಪೂರ್ಣ ಜಗತ್ತಿನಲ್ಲಿ ದಕ್ಷಿಣ ಆಫ್ರಿಕಾದ ಕಾಡಿನಲ್ಲಿಯೇ ಚಿರತೆಗಳು ಬಾಕಿ ಉಳಿದಿವೆ. ಭಾರತ ಸಹ ಏಷಿಯಾದಲ್ಲಿಯ ಪ್ರತಿಯೊಂದು ದೇಶದಲ್ಲಿಯ ಚಿರತೆಗಳು ಅಳಿವಿನ ಅಂಚಿನಲ್ಲಿವೆ.
ಇಂಥದ್ದರಲ್ಲಿಯೇ ಒಬ್ಬ ಫೋಟೋಗ್ರಾಫರ್ ತನ್ನ ಕ್ಯಾಮೆರಾದಲ್ಲಿ ಚಿರತೆಯ ಅದ್ಭುತವಾದ ಫೋಟೋ ಸೆರೆ ಹಿಡಿದಿದ್ದಾನೆ. ಈ ಫೋಟೋ ನಿಜಕ್ಕೂ ಅದ್ಭುತವಾದ ಹಾಗೂ ನೋಡಲು ಲಾಯಕ್ಕಾದ ಫೋಟೋ ಆಗಿದೆ. ಇದೇ ಕಾರಣದಿಂದ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಬಗ್ಗೆ ತುಂಬಾ ಚರ್ಚೆ ನಡೆದಿದೆ.
ಪ್ರಸ್ತುತ ಫೋಟೋವನ್ನು ವಿಂಬಲ್ಡನ್ ನ ವಾಯಿಲ್ಡ್ ಲೈಫ್ ಫೋಟೋಗ್ರಾಫರ್ ಪಾಲ್ ಗೋಲ್ಡ್ ಸ್ಟೀನ್ ಅವರು ಕೇನಿಯಾದ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನದಲ್ಲಿಂದ ಕ್ಯಾಚ್ ಮಾಡಿದ್ದಾರೆ. ಅವರೇ ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿ “ಮಳೆಯಲ್ಲಿ ಕಳೆದ ಆ 7 ಗಂಟೆಗಳು ನಿಜಕ್ಕೂ ಲಾಭದಾಯಕವಾಗಿದ್ದವು, ಈ ರೀತಿಯ ಕ್ಷಣಗಳು ಮಂತ್ರಮುಗ್ಧ ಮಾಡುವಂತಹವು ಇರುತ್ತವೆ” ಎಂದು ಬರೆದಿದ್ದಾರೆ. ಪಾಲ್ ಅವರ ಈ ಪೋಸ್ಟ್ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದ್ದು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮೂಲಕ ಹೊರಹಾಕುತ್ತಿದ್ದಾರೆ.