Cutest band : ಮುದ್ದು ಮಕ್ಕಳ ಕ್ಯೂಟ್ ಬ್ಯಾಂಡ್! ಮೀಡಿಯಾದಲ್ಲಿ ಗಿಟ್ಟಿಸಿದರು ವ್ಹಾ! ವ್ಹಾ! ಒಮ್ಮೆ ನೋಡಿ ಬಿಡಿ ಈ ಸೂಪರ್ ಟೀಮ್ ನ ಭರ್ಜರಿ ಹಾಡು.
ಮಕ್ಕಳು ಎಷ್ಟು ಮುಗ್ಧರಾಗಿರುತ್ತಾರೆ ಅಷ್ಟೇ ತುಂಟರೂ ಆಗಿರುತ್ತಾರೆ. ಅದರಲ್ಲೂ ಮಕ್ಕಳಲ್ಲಿ ಅನುಕರಣೀಯ ಶಕ್ತಿ ಅಗಾಧವಾಗಿರುತ್ತದೆ. ತನ್ನ ಸುತ್ತ ಮುತ್ತ ನಡೆಯುತ್ತಿರುವ ಪ್ರತಿಯೊಂದು ಚಲನವಲನದ ಮೇಲೆ ತುಂಬಾ ಸೂಕ್ಷ್ಮವಾದ ದೃಷ್ಟಿ ಇಟ್ಟಿರುತ್ತಾರೆ. ಹೀಗಾಗಿ ತಾವು ಮಾಡುವ ಕೆಲಸ ಯಾವುದು ತಪ್ಪು ಯಾವುದು ಸರಿ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ತಮಗೆ ಸರಿ ಎನಿಸಿದ್ದನ್ನು ಮಾಡಲು ಹೋಗೆ ಹೋಗುತ್ತಾರೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಮೂವರು ತುಂಟ ಮಕ್ಕಳ ಹಾಡಿನ ವೀಡಿಯೋ ಒಂದು ನೇಟಿಜನ್ಸ್ ಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಮೂವರು ಮಕ್ಕಳು ಇದ್ದಾರೆ ಒಬ್ಬರಿಗಿಂತ ಒಬ್ಬರು ತುಂಟ…
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮೂವರು ಚಿಕ್ಕ ಮಕ್ಕಳಿದ್ದು ಗಿಟಾರ್ ಬಾರಿಸುತ್ತಾ ಹಾಡೊಂದನ್ನು ಹಾಡುತ್ತಿದ್ದಾರೆ. ಅವರ ಸ್ವಂತದ್ದು ಒಂದು ಬ್ಯಾಂಡ್ ಟೀಮ್ ಇದೆಯೇನೋ ಎಂಬಂತೆ ಅವರ ಕಡೆಗೆ ನೋಡುವಾಗ ಭಾಸವಾಗುತ್ತದೆ. ಅಷ್ಟೊಂದು ಈ ಕೆಲಸದಲ್ಲಿ ಮಗ್ನರಾಗಿ ಖುಷಿಯಲ್ಲಿ ಹಾಡುತ್ತಿದ್ದಾರೆ. ಒಬ್ಬನು ಪುಟ್ಟ ಬಾಯಿಯಿಂದ ಮ್ಯೂಸಿಕ್ ಶುರು ಮಾಡುತ್ತಲೇ ಉಳಿದಿಬ್ಬರು ಆತನ ಜೊತೆಗೆ ಹಾಡಲು ಪ್ರಾರಂಭಿಸುತ್ತಾರೆ. ಮಧ್ಯದಲ್ಲಿರುವ ಹುಡುಗನ ಕೈಯಲ್ಲಿ ಒಂದು ಕೋಲಿದೆ. ಅದರ ಉಪಯೋಗ ಆತನು ಗಿಟಾರ್ ಬಾರಿಸಲು ಮಾಡುತ್ತಿದ್ದಾನೆ. ಇನ್ನಿಬ್ಬರು ಖಾಲಿ ಕೈಯಿಂದಲೇ ಗಿಟಾರ್ ಬಾರಿಸುವ ಆಕ್ಷನ್ ಮಾಡುತ್ತಿದ್ದಾರೆ. ಮಧ್ಯದಲ್ಲಿಯ ಹುಡುಗನಂತೂ ದೊಡ್ಡ ಗಾಯಕನಿರುವ ಹಾಗೆ ಬಿಲ್ಡಪ್ ಕೊಡ್ತಾ ಇದ್ದಾನೆ.
ನೋಡಿ ಈ ವಿಡಿಯೋ…
Cutest Band 🤗
— Dr. M V Rao, IAS (@mvraoforindia) January 28, 2022
Vintage Clip pic.twitter.com/7RuJAV6nUs
ನೇಟಿಜನ್ಸ್ ಗಳು ವ್ಯಕ್ತ ಮಾಡುತ್ತಿದ್ದಾರೆ ಕಾಳಜಿ…
ಪ್ರಸ್ತುತ ವಿಡಿಯೋವನ್ನು ಐಎಎಸ್ ಅಧಿಕಾರಿ ಡಾ. ಎಂ ವಿ ರಾವ್ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದು ಕ್ಯಾಪ್ಶನ್ ನಲ್ಲಿ ತುಂಬಾ ಕ್ಯೂಟ್ ಬ್ಯಾಂಡ್ ಎಂದು ಉಲ್ಲೇಖಿಸಿದ್ದಾರೆ. ಬರೀ 30 ಸೆಕೆಂಡ್ ಗಳ ಈ ವೀಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ನೂರಾರು ಜನರು ಲೈಕ್ ಮಾಡಿದ್ದಾರೆ. ಮತ್ತು ತುಂಬಾ ಸುಂದರ ಹಾಗೂ ಅದ್ಭುತವಾದ ಟೀಮ್ ಎಂದು ವರ್ಣಿಸುವದರ ಜೊತೆಗೆ ಕೈಯಲ್ಲಿ ಗಿಟಾರ್ ಎಂದು ಯೂಸ್ ಮಾಡುತ್ತಿರುವ ಹುಡುಗನ ಕೈಯಲ್ಲಿಯ ಕೋಲು ಬದಿಯಲ್ಲಿ ನಿಂತ ಹುಡುಗನ ಕಣ್ಣಿಗೆ ಏನಾದರೂ ಚುಚ್ಚಿದರೆ ದೊಡ್ಡ ಅನಾಹುತವಾಗುತ್ತದೆ ಎಂದು ಕಾಳಜಿ ವ್ಯಕ್ತ ಮಾಡುತ್ತಿದ್ದಾರೆ.