ಈ ನಾಗಿನ್ ಡ್ಯಾನ್ಸರ್ ಗೆ ಮೊದಲು ಕಂಟ್ರೋಲ್ ಮಾಡಿಪ್ಪಾ! ಇಲ್ಲಾಂದ್ರೆ ಇದು ನಮಗೂ ಕಚ್ತದೆ! ವೈರಲ್ ಆಯ್ತು ವಿಚಿತ್ರ ಡ್ಯಾನ್ಸ್.

ಇಂಟರ್ನೆಟ್ ಜಗತ್ತು ವಿಧ ವಿಧ ನಮೂನೆಯ ಲಕ್ಷಾವಧಿ ವಿಡಿಯೋ ಮತ್ತು ಫೋಟೋಗಳಿಂದ ತುಂಬಿ ಹೋಗಿದೆ. ಅವುಗಳಲ್ಲಿ ಕೆಲವಂತೂ ಅಪ್ಲೋಡ್ ಮಾಡಿದ ಕ್ಷಣವೇ ವೈರಲ್ ಆಗಿ ಬಿಡುತ್ತವೆ. ಅದರಲ್ಲೂ ಸಭೆ ಸಮಾರಂಭಗಳಲ್ಲಿ ಯುವಕ ಯುವತಿಯರು ಮಾಡುವ ವಿಚಿತ್ರ ಡ್ಯಾನ್ಸ್ ಗಳಂತೂ ನೇಟಿಜನ್ಸ್ ಗಳು ಹುಚ್ಚೆದ್ದು ನೋಡುತ್ತಾರೆ ಮತ್ತು ಇಷ್ಟವಾದರೆ ನಂತರ ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಾರೆ. ಹೀಗಾಗಿ ಅಂಥ ವಿಡಿಯೋ ಅಥವಾ ಫೋಟೋಗಳು ಬೇಗನೆ ವೈರಲ್ ಆಗುತ್ತವೆ.

ಸದ್ಯ ಈಗಲೂ ಒಬ್ಬ ಮಹಾರಾಯ ಮದುವೆ ಸಮಾರಂಭದಲ್ಲಿ ಮನಸೋ ಇಚ್ಛೆ ನಾಗಿನ್ ಡ್ಯಾನ್ಸ್ ಮಾಡಿದ್ದಾನೆ. ಇದೇ ಡ್ಯಾನ್ಸ್ ನೆಟ್ಟಿಗರಿಗೆ ತುಂಬಾನೇ ಇಷ್ಟವಾಗಿದೆ. ಕಾರಣವೂ ಸಹ ಅಷ್ಟೇ ಸ್ಪಷ್ಟವಾಗಿದೆ, ಏನೆಂದರೆ ಈ ಡ್ಯಾನ್ಸ್ ನೋಡಿದಾಗ ನಿಮಗೆ ನಗು ತಡೆದು ಕೊಳ್ಳುವುದು ಅಸಾಧ್ಯ.

ಈ ಡ್ಯಾನ್ಸ್ ಮಾಡುವಾಗ ಯುವಕನು ತುಂಬಾ ಕ್ಯಾರೆಕ್ಟರ್ ನ ಒಳಗಡೆ ಸೇರಿದ್ದಾನೆ ಎಂದೇ ಹೇಳಬಹುದು. ನಾಗರ ಹಾವಿನ ಹಾಗೆ ಡ್ಯಾನ್ಸ್ ಮಾಡುವಾಗ ಆತನ ಜೊತೆಯಲ್ಲಿ ಕುಣಿಯಲು ಬರುವವರನ್ನು ಬೆನ್ನಟ್ಟಿ ಕೈಯಿಂದಲೇ ಕಡಿಯಲು ಪ್ರಯತ್ನಿಸಿದ್ದಾನೆ. ಮತ್ತು ಈತ ತುಂಬಾ ಸೀರಿಯಸ್ಸಾಗಿಯೇ ಕುಣಿಯುತ್ತಿದ್ದಾನೆ. ಆತನ ರೌದ್ರರೂಪ ನೋಡಿ ಜೊತೆಗಾರರು ತನ್ನಷ್ಟಕ್ಕೆ ತಾವೇ ಬದಿಗೆ ಸರಿದಿದ್ದಾರೆ. ಡ್ಯಾನ್ಸ್ ನ ರೋಲ್ ಪ್ಲೆ ಮಾಡುವಾಗ ಎಲ್ಲರ ಮೇಲೂ ನಿಜವಾಗಿಯೇ ಹಲ್ಲೆ ಮಾಡುವಂತೆ ಅಟ್ಯಾಕ್ ಮಾಡುತ್ತಿದ್ದಾನೆ. ಈತ ಯಾರಿಗಾದರೂ ಕಚ್ಚಿದ ಮೇಲೆಯೇ ಬಹುಶಃ ಶಾಂತವಾಗುವನೇನೋ ಎಂಬಂತೆ ಕಂಡು ಬರುತ್ತಿದೆ.

ನೋಡಿ ನೀವು ಈ ವಿಡಿಯೋವನ್ನು…

ಈ ವೀಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ giedde ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ಡ್ಯಾನ್ಸ್ ನೆಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾದಂತೆ ಕಂಡುಬರುತ್ತಿದೆ.