ಭಕ್ಷ್ಯದ ಬೇಟೆಗಾಗಿ ಚಿರತೆ ಇಳಿಯಿತು ನೀರಿನಲ್ಲಿ… ನೀರಿನಲ್ಲಿಯೇ ಚಿರತೆ ಬೇಟೆಯಾಡಿದ ದೃಶ್ಯದ ವಿಡಿಯೋ ಆಯಿತು ವೈರಲ್!
ಚಿರತೆಯು ಜನವಸತಿಯಲ್ಲಿ ನುಗ್ಗಿ ನಾಯಿ ಮತ್ತು ಇನ್ನೂ ಬೇರೆ ಬೇರೆ ಸಾಕುಪ್ರಾಣಿಗಳ ಹಾಗೂ ಮನುಷ್ಯರ ಬೇಟೆಯಾಡಿದ ಅನೇಕ ಸಿಸಿಟಿವಿ ಫುಟೇಜ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನೋಡಿದ್ದೇವೆ. ಚಿರತೆ ಬೇಟೆಯಾಡುವುದರಲ್ಲಿ ತುಂಬಾ ನಿಸ್ಸೀಮವಾಗಿರುತ್ತದೆ. ಇದು ಯಾವಾಗ ಎಲ್ಲಿ ಯಾರ ಮೇಲೆ ಹೇಗೆ ಅಟ್ಯಾಕ್ ಮಾಡಿ ಕಥೆ ಖತಮ್ ಮಾಡುತ್ತದೆ ಹೇಳಲಿಕ್ಕೆ ಸಾಧ್ಯವಿಲ್ಲ. ಈಗ ಚಿರತೆಯೊಂದು ನೀರಿನೊಳಗೆ ಇಳಿದು ಬೇಟೆಯಾಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಚಿರತೆಯು ನೀರಿನ ತಳದಲ್ಲಿ ಇಳಿದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಮೊದಮೊದಲು ಈ ಚಿರತೆಯು ನೀರಿನಲ್ಲಿ ಇಜಾಡುತ್ತಿರುವಂತೆ ಕಂಡುಬರುತ್ತದೆ. ಆದರೆ ನಿಧಾನವಾಗಿ ಅದು ತನ್ನ ಭಕ್ಷ್ಯದ ಕಡೆಗೆ ಸರಿಯುತ್ತಿರುವುದು ಕಂಡುಬರುತ್ತದೆ. ಹಾಗೂ ತನ್ನ ಉಗುರುಗಳಿಂದ ಅದರ ಮೇಲೆ ಹಲ್ಲೆ ಮಾಡಿ ತಿನ್ನಲು ಶುರು ಮಾಡುತ್ತದೆ. 15 ಸೆಕೆಂಡಿನ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ Amazing Nature ಈ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.
ನೋಡಿ ಈ ವಿಡಿಯೋ…
Jaguars are excellent swimmers. @ Andru Edwards pic.twitter.com/2RwbADybH5
— Amazing Nature (@AmazingNature00) January 31, 2022