ಒಂದು ಕಾಲದಲ್ಲಿ ಕ್ರಿಕೆಟ್ ನಲ್ಲಿಯ ದಿಗ್ಗಜ; ಇಂದು ನಿರ್ಗತಿಕ, ಕಂಪನಿಯೊಂದರಲ್ಲಿ ಲೇಬರ್ ನೆಂದು ಕೆಲಸ ಮಾಡುತ್ತಾನೆ.

ನ್ಯೂಜಿಲ್ಯಾಂಡ್ ದೇಶ ಕ್ರಿಕೆಟ್ ಗೆ ಮಾರ್ಟಿನ್ ಕ್ರೋ, ಸ್ಟೀಫನ್ ಫ್ಲೆಮಿಂಗ್, ನಥೇನ್ ಆಸ್ಟೇಲ್, ಖ್ರಿಸ್ ಕೇನ್ಸ್, ಬ್ರ್ಯಾಂಡನ್ ಮೆಕ್ಕುಲಮ್, ಟಾಮ್ ಲೇಥಮ್ ರಂತಹ ಸ್ಫೋಟಕ ಆಟಗಾರರನ್ನು ಒಪ್ಪಿಸಿದೆ. ಇವರ ಹೊರತಾಗಿಯೂ ಇನ್ನು ಒಳ್ಳೊಳ್ಳೆಯ ಆಟಗಾರರು ಸಹ ಈ ದೇಶದ ಪರವಾಗಿ ಆಡಿದ್ದಾರೆ. ಅದರಲ್ಲಿ ಕೆಲವರು ತಪ್ಪು ಮಾರ್ಗವನ್ನು ಅನುಸರಿಸಿ ತಮ್ಮ ವೃತ್ತಿ ಜೀವನವನ್ನು, ಕರಿಯರ್ ನ್ನು ಹಾಳು ಮಾಡಿಕೊಂಡರು. ಅವರಲ್ಲಿಯೇ ಒಬ್ಬರಾದ ಬಲಗೈ ಬ್ಯಾಟ್ಸ್ ಮನ್ ಲೂ ವಿನ್ಸೆಂಟ್.

ತಂದೆ ರಿಪೋರ್ಟರ್; ಮಗ ಕ್ರಿಕೆಟ್ ಆಟಗಾರ.

ಲೂ ವಿನ್ಸೆಂಟ್ ಅವರ ಜನ್ಮ ನ್ಯೂಜಿಲ್ಯಾಂಡ್ ದ ವಾರ್ಕವರ್ತ ದಲ್ಲಾಯಿತು. ತಂದೆ ಮೈಕ್ ವಿನ್ಸೆಂಟ್ ಪ್ರಸಿದ್ಧ ಕ್ರೀಡಾ ಪತ್ರಕಾರರಿದ್ದರು. ಆದ್ದರಿಂದಲೇ ಲೂ ಅವರಿಗೆ ಆಟದ ಬಗ್ಗೆ ಆಸಕ್ತಿ ಹೆಚ್ಚಾಯಿತು. ವಿನ್ಸೆಂಟ್ 15 ವರ್ಷದವರಿದ್ದಾಗಲೇ ತಂದೆ ತಾಯಿಯ ಘಟಸ್ಫೋಟವಾಯಿತು.

ಆನಂತರ ಲೂ ಅವರು ಎಡಿಲೆಡ್ (ಆಸ್ಟ್ರೇಲಿಯಾ) ಗೆ ಬಂದರು. ಅಲ್ಲಿ ಅವರಿಗೆ ಕ್ರಿಕೆಟ್ ನಲ್ಲಿ ಅವಕಾಶ ದೊರೆಯದ ಕಾರಣ ಮತ್ತೆ ಮರಳಿ ನ್ಯೂಜಿಲ್ಯಾಂಡ್ ಗೆ ವಾಪಸಾದರು. ಸುದೈವದಿಂದ ಅವರಿಗೆ ನ್ಯೂಜಿಲ್ಯಾಂಡ್ ನಲ್ಲಿ 19 ವರ್ಷದ ಕಿರಿಯರ ವಿಶ್ವ ಕಪ್ ಟೂರ್ನಿಯಲ್ಲಿ ಸ್ಥಾನ ದೊರಕಿತು.

ಕೌಂಟಿ ಕ್ರಿಕೆಟ್ ನಲ್ಲಿ ಭರ್ಜರಿ ಪ್ರದರ್ಶನ.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಭರ್ಜರಿ ಆಟದ ಪ್ರದರ್ಶನ ಮಾಡಿದ ನಂತರ 2001 ರಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ನಲ್ಲಿ ಸ್ಥಾನ ದೊರೆಯಿತು, ಅದೃಷ್ಟ ಬದಲಾಯಿತು. ಮೊದಲ ಪಂದ್ಯದಲ್ಲಿಯೇ ಸ್ಫೋಟಕ ಆಟ ಪ್ರದರ್ಶಿಸಿ ದೇಶಕ್ಕೆ ಗೆಲ್ಲಿಸಿ ಕೊಟ್ಟರು.

ಮ್ಯಾಚ್ ಫಿಕ್ಸಿಂಗ್ ದ ಗ್ರಹಣ.

ಮುಂದೆ ಲೂ ವಿನ್ಸೆಂಟ್ ಅವರ ಕ್ರಿಕೆಟ್ ಜೀವನಕ್ಕೆ ಮ್ಯಾಚ್ ಫಿಕ್ಸಿಂಗ್ ಗ್ರಹಣ ತಗುಲಿತು. ಕೌಂಟಿ ಕ್ರಿಕೆಟ್ ಹಾಗೂ ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಶಾಮೀಲಾದ ಬಗ್ಗೆ ಒಪ್ಪಿಕೊಂಡರು. ಆನಂತರ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡಲು ನಿರ್ಬಂಧ ಹೇರಲಾಯಿತು. ಆಗ ಮತ್ತೆ ಇಂಗ್ಲೆಂಡ್ ನಿಂದ ನ್ಯೂಜಿಲ್ಯಾಂಡ್ ಗೆ ಮರಳಿದರು. ಮ್ಯಾಚ್ ಫಿಕ್ಸಿಂಗ್ ನಿಂದ ಒಬ್ಬ ಒಳ್ಳೆಯ ಆಟಗಾರನನ್ನು ನ್ಯೂಜಿಲ್ಯಾಂಡ್ ಕಳೆದುಕೊಳ್ಳಬೇಕಾಯಿತು. ಈಗ ಅವರಿಗೆ ಯಾವುದೇ ಪ್ರಕಾರದ ಕ್ರಿಕೆಟ್ ಆಡಲು, ಕೋಚಿಂಗ್ ಮಾಡಲು ಮತ್ತು ಸ್ಟೇಡಿಯಂನಲ್ಲಿ ಕಾಲಿಡಲು ಸಹಿತ ಬ್ಯಾನ್ ಮಾಡಲಾಗಿದೆ.

ನ್ಯೂಜಿಲ್ಯಾಂಡ್ ಹೆರಾಲ್ಡ್ ನ ರಿಪೋರ್ಟ್ ಪ್ರಕಾರ ಸದ್ಯಕ್ಕೆ ಅವರು ಒಂದು ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಲೇಬರ್ ಎಂದು ಕೆಲಸ ಮಾಡುತ್ತಿದ್ದಾರೆ. ಒಂದು ಸಮಯದಲ್ಲಿ ಲಕ್ಷಾವಧಿ ರೂಪಾಯಿಗಳನ್ನು ಗಳಿಸುವ ವ್ಯಕ್ತಿ ಈಗ ಕಂಗಾಲಾಗಿ ಕೆಲಸಗಾರನೆಂದು ದುಡಿಯುತ್ತಿದ್ದಾನೆ.

ಚೊಚ್ಚಲ ಪಂದ್ಯದಲ್ಲಿಯೇ ನೂರು ರನ್ ಗಳಿಸಿದ ಸಾಧನೆ.

ಲೂ ವಿನ್ಸೆಂಟ್ ಅವರು ಆಕ್ರಮಣಕಾರಿ ಆಟಗಾರರಾಗಿದ್ದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ಜಗತ್ತಿನ ಎಲ್ಲಕ್ಕೂ ವೇಗದ ಗ್ರೌಂಡ್ ನಲ್ಲಿ ಶತಕವನ್ನು ಸಿಡಿಸಿದ್ದರು. ಮುಂದೆ ಜಿಂಬಾಬ್ವೆ ವಿರುದ್ಧ172 ರನ್ ಗಳ ಭರ್ಜರಿ ಆಟವನ್ನು ಪ್ರದರ್ಶಿಸಿದ್ದರು. ಅದರಲ್ಲಿಯ 118 ರನ್ ಗಳು ಬರೀ ಸಿಕ್ಸ್ ಮತ್ತು ಫೋರ್ ಗಳಿಂದ ಬಂದಿದ್ದವು. ಲೂ ಅವರು ನ್ಯೂಜಿಲ್ಯಾಂಡ್ ಪರವಾಗಿ 23 ಟೆಸ್ಟ್, 9 T ಟ್ವೆಂಟಿ ಹಾಗೂ 102 ಒನ್ ಡೇ ಪಂದ್ಯಗಳನ್ನು ಆಡಿದ್ದಾರೆ. ಅವರು ಒಟ್ಟು 6 ಶತಕಗಳನ್ನು ದಾಖಲಿಸಿದ್ದಾರೆ.