Video: ಡ್ಯಾನ್ಸ್ ಮಾಡುವಾಗ ವ್ಯಕ್ತಿಯೊಬ್ಬ ನಡುವೆ ಬಂದನು, ತದನಂತರ ಈ ಯುವಕನು ಮಾಡಿದ್ದನ್ನು ನೀವು ನೋಡಿದರೆ ನಗದೆ ಇರಲಾರಿರಿ!!!!
ಇಂದು ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ತಾವು ಫೇಮಸ್ ಆಗಬೇಕು ಎಂದು ಬಯಸುತ್ತಾರೆ. . ಅಲ್ಲದೆ ಫೇಮಸ್ ಆಗುವ ಸಲುವಾಗಿ ಸದಾ ಏನಾದರೂ ವಿಚಿತ್ರವಾದದನ್ನು ಮಾಡಿ ತೋರಿಸುತ್ತಾರೆ. ಆದರೆ ಹೀಗೆ ಮಾಡುವದರಿಂದ ಕೆಲವರಿಗೆ ಯಶಸ್ಸು ದೊರೆತರೆ ಇನ್ನೂ ಕೆಲವರಿಗೆ ಯಶಸ್ಸು ದೊರೆಯುವದಿಲ್ಲ. ಅಲ್ಲದೆ ಕೆಲವೊಂದು ಅವರು ಮಾಡಿರುವ ಕೃತಿ ನಗೆಗೆ ಗುರಿಯಾಗುತ್ತದೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಹ ಏನೋ ಮಾಡಲು ಹೋಗಿ ಬೇರೇ ಏನೋ ಆಗಿದೆ ಅದನ್ನು ನೋಡಿದರೆ ಪ್ರತಿಯೊಬ್ಬರು ನಗದೆ ಇರಲಾರರು.
ಈ ವೈರಲ್ ಆಗುತ್ತಿರುವ ವಿಡಿಯೋ ಕೆಲವು ಸೆಕೆಂಡ್ ಗಳ ವೀಡಿಯೋ ಇದಾಗಿದ್ದು. ಇದೊಂದು ಕಾರ್ಯಕ್ರಮದಲ್ಲಿ ನಡೆದ ಘಟನೆಯಾಗಿದೆ. ಸದ್ಯಕ್ಕೆ ಮದುವೆಯ ಸೀಸನ್ ಸ್ಟಾರ್ಟ್ ಆಗಿದೆ ಹೀಗಾಗಿ ಯಾವ ಮದುವೆಯಲ್ಲಿ ಯಾವ ವೀಡಿಯೋ ನಿರ್ಮಾಣವಾಗುತ್ತೋ ಅಂತ ಹೇಳಲು ಬರುವದಿಲ್ಲ. ಮದುವೆಯ ಮಾತ್ರವಲ್ಲದೆ ಇಂದು ಪ್ರತಿಯೊಂದು ಕಾರ್ಯಕ್ರಮದಲ್ಲಿ ಡಾಲ್ಬಿ ಹಚ್ಚಿಕೊಂಡು ಕುಣಿದು ಕುಪ್ಪಳಿಸುವ ರಿವಾಜು ನಡೆದಿದೆ.
ಪ್ರಸ್ತುತ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನು ಡ್ಯಾನ್ಸ್ ಮಾಡುತ್ತಿರುತ್ತಾನೆ. ಆತನು ಡ್ಯಾನ್ಸ್ ನಲ್ಲಿ ಎಷ್ಟೊಂದು ಮಗ್ನ ನಾಗಿದ್ದಾನೆ ಎಂದರೆ ತನ್ನಷ್ಟಕ್ಕೆ ತಾನು ಮರೆತು ಬಿಟ್ಟಿದ್ದನು ಅಂತಹ ಪರಿಯಲ್ಲಿ ಆತ ಡ್ಯಾನ್ಸ್ ಮಾಡುತ್ತಿದ್ದನು. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಬೇರೇನೇ ಡ್ಯಾನ್ಸ್ ಮಾಡುತ್ತಾ ಈತನ ಎದುರು ಬರುತ್ತಾನೆ. ಈತನ ಮುಂದೆ ನಿಂತು ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. ಇದನ್ನು ನೋಡಿದ ಈ ಯುವಕ ತನ್ನ ಡ್ಯಾನ್ಸ್ ಗೆ ತೊಂದರೆ ನೀಡುತ್ತಿದ್ದಾನೆ ಎಂದುಕೊಂಡು ಆ ವ್ಯಕ್ತಿಯನ್ನು ಮೇಲಕ್ಕೆ ಎತ್ತಿ ದೂರಕ್ಕೆ ಎಸೆಯುತ್ತಾನೆ. ಆಗ ಆ ವ್ಯಕ್ತಿ ದೂರ ಹೋಗಿ ನೆಲಕ್ಕೆ ಬೀಳುತ್ತಾನೆ ಇದನ್ನು ನೋಡಿದ ಅಲ್ಲಿಯ ಎಲ್ಲ ಜನರು ನಗಲು ಶುರು ಮಾಡುತ್ತಾರೆ. ಏಕೆಂದರೆ ಈ ವೀಡಿಯೋ ಅಷ್ಟೊಂದು ಕಾಮಿಡಿಯಾಗಿದೆ ನೀವು ಸಹ ವಿಡಿಯೋ ನೋಡಿ.
ವೀಡಿಯೋ ನೋಡಿ.
ಈ ವೀಡಿಯೋ ನೋಡಿದ ಪ್ರತಿಯೊಬ್ಬ ನೆಟ್ಟಿಗ ನಗದೆ ಇರಲಾರನು. ಆದ್ದರಿಂದ ಈ ವೀಡಿಯೋಗೆ ಅನೇಕ ಕಾಮೆಂಟ್ ಮಾಡಿರುವದನ್ನು ನಾವು ಕಾಣಬಹುದು. ವೀಡಿಯೋ ಗೆ ಕಾಮೆಂಟ್ ಮಾಡುತ್ತ ಒಬ್ಬ ಯುಜರ್ಸ್ ” ಅಣ್ಣ ಆ ವ್ಯಕ್ತಿ ನಿಂಗೇನು ಮಾಡಿದ್ದನು” ಎಂದು ಬರೆದಿದ್ದಾನೆ. ಈ ವೀಡಿಯೋ ಯುಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ.