ವ್ಯಕ್ತಿಯೊಬ್ಬ ತನ್ನನ್ನು ಬೇಟೆಯಾಡಲು ಬಂದ ಸಾವನ್ನೇ ಸೋಲಿಸಿದನು ಕ್ಷಣಾರ್ಧದಲ್ಲಿ! ನೋಡಿ ಅದ್ಭುತ ವೈರಲ್ ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಅಪಘಾತಗಳ ಅನಾಹುತ ಘಟನೆಗಳು ದಿನಂಪ್ರತಿ ವೈರಲ್ ಆಗುವುದು ನೋಡೇ ನೋಡುತ್ತೇವೆ. ಆದರೆ ಈಗ ಇಲ್ಲಿ ನೋಡುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕ್ಷಣಾರ್ಧದಲ್ಲಿ ಮುತ್ತಿಕ್ಕಲು ಬಂದ ಸಾವಿನಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ವಿಶೇಷವೆಂದರೆ ಈ ಅಪಘಾತದಲ್ಲಿ ವ್ಯಕ್ತಿಗೆ ಸ್ವಲ್ಪವೂ ಗಾಯವಾಗದೆ ಒಂದು ಚಮತ್ಕಾರದಂತೆ ಬದುಕುಳಿದಿದ್ದಾನೆ.
ವ್ಯಕ್ತಿಯು ಬೈಕ್ ನಡೆಸುತ್ತಿರುವಾಗ ಮಳೆಯ ಕಾರಣದಿಂದಾಗಿ ಬೈಕ್ ಜಾರಿ ರೋಡ್ ಮೇಲೆ ಬಿದ್ದಿದ್ದಾನೆ. ಪ್ರಸ್ತುತ ವಿಡಿಯೋ 21 ಸೆಕೆಂಡಿನದ್ದಾಗಿದೆ. ವಿಡಿಯೋದಲ್ಲಿ ಕಾಣುವ ಹಾಗೆ ವ್ಯಕ್ತಿಯು ಆಕಸ್ಮಿಕವಾಗಿ ಬೈಕ್ ಜಾರಿದ ಕಾರಣದಿಂದ ಕೆಳಗೆ ದಾರಿಯ ಮೇಲೆ ಬೀಳುತ್ತಾನೆ. ಅದೇ ಸಮಯದಲ್ಲಿ ಹಿಂದಿನಿಂದ ವೇಗದಲ್ಲಿ ಟ್ರಕ್ ಒಂದು ಬರುತ್ತದೆ. ಬೈಕ್ ಸವಾರ ಜಾರಿ ಬಿದ್ದ ನಂತರ ಹಿಂದೆ ಬರುತ್ತಿರುವ ಟ್ರಕ್ಕಿನ ಕೆಳಗೆ ಇನ್ನೇನು ಸಿಕ್ಕಿಬೀಳುತ್ತಾನೆ ಎನ್ನುವಷ್ಟರಲ್ಲಿ ತಕ್ಷಣ ಹಾಗೋ ಹೀಗೋ ಬ್ಯಾಲೆನ್ಸ್ ಮಾಡಿಕೊಂಡು ಪಾರಾಗಿ ಬದಿಗೆ ಬಂದಿದ್ದಾನೆ.
ಈ ಅವಘಡದಲ್ಲಿ ಟ್ರಕ್ ಚಾಲಕನು ಸಹ ಟ್ರಕ್ಕಿನ ವೇಗ ಸ್ವಲ್ಪಾದರೂ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಆತನ ಜೀವ ಉಳಿಯಲು ಮಾತ್ರ ಕ್ಷಣಾರ್ಧದ ಸಮಯವಷ್ಟೇ ಬೇಕಾಗಿತ್ತು. ಈ ಘಟನೆಯು ಜನವರಿ 24 ರಂದು ನಡೆದಿದೆ.
ವಿಡಿಯೋ ನೋಡಿ
ಈ ವಿಡಿಯೋವನ್ನು VairalHog ಹೆಸರಿನ ಇನ್ಸ್ಟಾಗ್ರಾಂ ಅಕೌಂಟ್ ಮುಖಾಂತರ ಶೇರ್ ಮಾಡಲಾಗಿದೆ. ವಿಡಿಯೋ ವೀಕ್ಷಿಸುವಾಗ ನೋಡುಗರ ದೇಹ ಕಂಪಿಸುವುದು ನಿಜ. ಈ ದೃಶ್ಯವು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿರುವ ಕ್ಯಾಮೆರಾದಿಂದ ಸೆರೆಯಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ ಲಕ್ಷಕ್ಕೂ ಮೀರಿ ವ್ಯೂವ್ಸ್ ಗಳು ದೊರಕಿವೆ. ನೇಟಿಜನ್ಸ್ ಗಳು ದೇವರ ದಯೆಯ ಕಾರಣದಿಂದ ಈತ ಬದುಕಿದ ಎಂದು ಕಾಮೆಂಟ್ ಮಾಡಿದ್ದಾರೆ.