ಪಕ್ಷಿಗಳಲ್ಲಿಯೇ ಕಾಗೆಗೆ ಬುದ್ಧಿವಂತ ಪಕ್ಷಿ ಎನ್ನಲು ಕಾರಣವಿಲ್ಲಿದೆ; ಬೆಕ್ಕಿಗೆ ಸರಿಯಾಗಿ ಮಂಗ ಮಾಡಿದ ಎರಡು ಕಾಗೆಗಳ ಬುದ್ಧಿವಂತಿಕೆಯ ವೈರಲ್ ವಿಡಿಯೋ ನೋಡಿ..
ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ವೈರಲ್ ಆಗುವ ಫೋಟೋ ಮತ್ತು ವಿಡಿಯೋಗಳಿಗೆ ಏನು ಕಮ್ಮಿ ಇಲ್ಲ. ಇಲ್ಲಿ ನೋಡುತ್ತಾ ಹೋದಂತೆ ವಿಶೇಷತೆಗಳು ಹಾಗೆಯೇ ಕಾಣುತ್ತಾ ಹೋಗುತ್ತದೆ. ನೆಟ್ಟಿಗ ನೋಡಿ ನೋಡಿ ಸುಸ್ತಾಗುತ್ತಾನೆ ಹೊರತು ಇಲ್ಲಿ ಕಾಣುವ ಫೋಟೋಗಳು ಮತ್ತು ವಿಡಿಯೋಗಳು ಎಂದಿಗೂ ಮುಗಿಯುವುದಿಲ್ಲ.
ಈಗ ಕಾಗೆಯ ಬುದ್ಧಿವಂತಿಕೆಯನ್ನು ತೋರಿಸುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಭರ್ಜರಿಯಾಗಿ ಸಂಚಲನ ಮೂಡಿಸಿದೆ. ವಿಡಿಯೋದಲ್ಲಿ ಕಾಣುವ ಹಾಗೆ ಒಂದು ಪಾರ್ಕಿಂಗ್ ಸ್ಥಳವಿದೆ. ಅಲ್ಲಿ ಒಂದು ಬೆಕ್ಕು ಹಾಗೂ ಎರಡು ಕಾಗೆಗಳು ಕಂಡುಬರುತ್ತಿವೆ. ಅಲ್ಲಿ ಕಾಣುವ ಬೆಕ್ಕು ಆಹಾರಪದಾರ್ಥ ಒಂದನ್ನು ತಿನ್ನಲು ಪ್ರಯತ್ನಿಸುವಾಗ ಒಂದು ಕಾಗೆಯು ಬೆಕ್ಕಿನ ಹಿಂದೆ ಹೋಗಿ ಅದಕ್ಕೆ ಸತಾಯಿಸಿದೆ. ಆಗ ಬೆಕ್ಕು ತನ್ನ ಬಾಯಿಯಲ್ಲಿಯ ಆಹಾರವನ್ನು ಬಿಟ್ಟು ಸತಾಯಿಸಿದ ಕಾಗೆ ಹಿಂದೆ ಹಿಡಿಯಲು ಓಡಿದೆ. ಆಗ ತಕ್ಷಣ ಎರಡನೆಯ ಕಾಗೆಯು ಬೆಕ್ಕು ಬಿಟ್ಟ ಆಹಾರವನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಅಲ್ಲಿಂದ ಪರಾರಿಯಾಗುತ್ತದೆ. ಈ ವಿಡಿಯೋ ನಿಜಕ್ಕೂ ನೋಡಲು ತುಂಬಾ ತಮಾಷೆಯಾಗಿದೆ, ಜೊತೆಗೆ ಕಾಗೆಗಳಲ್ಲಿರುವ ಬುದ್ಧಿವಂತಿಕೆಯನ್ನು ಸಹ ಪ್ರದರ್ಶಿಸುವಂತಿದೆ.
ವೀಡಿಯೋ ನೋಡಿ
What a Trick. 😀😂❤ pic.twitter.com/CWgBcVdwlW
— Amazing Nature (@AmazingNature00) February 1, 2022
ಈ ವಿಡಿಯೋವನ್ನು @amazingNature00 ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಮೂರುವರೆ ಲಕ್ಷ ಜನರು ವೀಕ್ಷಿಸಿದ್ದಾರೆ.