Video: ನಾಯಿಯ ಮುಂದೆ ದೊಡ್ಡ ಕನ್ನಡಿ ಇಟ್ಟಾಗ, ನಾಯಿ ಮಾಡಿದ್ದೇನು ನೋಡಿ ವೈರಲ್ ವಿಡಿಯೋ!!!

ನಾಯಿ ಇದೊಂದು ಸಾಕು ಪ್ರಾಣಿಯಾಗಿದೆ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಈ ಪ್ರಾಣಿಯಷ್ಟು ನಿಯತ್ತು ಈ ಜಗತ್ತಿನಲ್ಲಿ ಯಾವುದೇ ಪ್ರಾಣಿಗೆ ಇಲ್ಲ ಒಮ್ಮೆ ನೀವು ಪ್ರೀತಿ ನೀಡಿದರೆ ನಾಯಿ ನಿಮ್ಮನ್ನೂ ಜೀವನಪೂರ್ತಿ ಪ್ರೀತಿಸುತ್ತದೆ. ಇಂದು ಪ್ರತಿಯೊಬ್ಬರೂ ನಾಯಿಯನ್ನು ಸಾಕಬೇಕು ಎಂದು ಆಸೆ ಪಡುತ್ತಾರೆ. ನಾಯಿಗಳಲ್ಲಿ ಅನೇಕ ಪ್ರಜಾತಿಗಳಿವೆ. ಈ ಪ್ರಾಣಿಯನ್ನು ಪೊಲೀಸರು ತಮ್ಮ ಪಡೆಯಲ್ಲಿ ಸೇರಿಸಿಕೊಂಡು ಹಲವಾರು ಕೇಸುಗಳನ್ನು ಪರಿಹಾರ ಮಾಡುತ್ತಾರೆ. ಏಕೆಂದರೆ ನಾಯಿ ಒಂದು ಸಾರಿ ಯಾವುದೇ ವ್ಯಕ್ತಿಯ ವಾಸನೆ ಬಿದ್ದರೆ ಆ ವ್ಯಕ್ತಿ ಎಲ್ಲಿದ್ದಾನೆ ಎಂಬುದು ಕಂಡು ಹಿಡಿಯಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯಕ್ಕೆ ಒಂದು ಟ್ರೆಂಡ್ ನಡೆದಿದೆ ಅದೇನೆಂದರೆ ಫ್ರ್ಯಾಂಕ್ ಮಾಡುವದು. ಫ್ರ್ಯಾಂಕ್ ಅಂದರೆ ಆ ವ್ಯಕ್ತಿಗೆ ಅಥವಾ ಪ್ರಾಣಿಗೆ ಗೊತ್ತಿರದ ಹಾಗೆ ಅವರ ಜೊತೆಗೆ ವಿಚಿತ್ರವಾಗಿ ನಡೆದುಕೊಳ್ಳುವದು. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಪಪ್ರಸ್ತುತ ವಿಡಿಯೋದಲ್ಲಿ ಎರಡು ನಾಯಿಗಳಿಗೆ ಫ್ರ್ಯಾಂಕ್ ಮಾಡುವ ಸಲುವಾಗಿ ಆ ನಾಯಿಗಳು ಕುಳಿತುಕೊಂಡ ಜಾಗದಲ್ಲಿ ಒಂದು ಮೋಟಾರ್ ಸೈಕಲ್ ನಿಲ್ಲಿಸುತ್ತಾರೆ ತದನಂತರ ಅದರ ಬದಿಯಲ್ಲಿ ಅಂದರೆ ನಾಯಿಗಳ ಎದುರಿಗೆ ಒಂದು ದೊಡ್ಡದಾದ ಕನ್ನಡಿಯನ್ನು ಇಡುತ್ತಾರೆ. ಇದರಿಂದ ಕನ್ನಡಿಯ ಹಿಂದೆ ನಿಂತ ಬೈಕ್ ಸಹ ಕಾಣುವದಿಲ್ಲ. .

ಕನ್ನಡಿಯನ್ನು ಇಟ್ಟ ನಂತರ ಅಲ್ಲಿಯ ಒಂದು ನಾಯಿಯ ಗಮನ ಕನ್ನಡಿಯತ್ತ ಹೋಗುತ್ತದೆ. ನಾಯಿ ತನ್ನ ಪ್ರತಿಮೆಯನ್ನು ಕನ್ನಡಿಯಲ್ಲಿ ಕಂಡಾಗ ಆ ಬದಿಗೆ ಮತ್ತೊಂದು ನಾಯಿಯಿದೆ ಎಂದು ಭಾವಿಸಿ. ಅದನ್ನು ಹುಡುಕಲು ಸಾವಕಾಶವಾಗಿ ಕನ್ನಡಿಯ ಬಳಿಗೆ ಹೋಗುತ್ತದೆ. ಈ ನಾಯಿ ಹೋಗುತ್ತಿರುವಾಗ ಕನ್ನಡಿಯಲ್ಲಿ ಸಹ ನಾಯಿ ಬರುವ ಹಾಗೆ ಕಾಣುತ್ತೆ ಆಗ ಈ ನಾಯಿ ತುಂಬಾ ಹೆದರುತ್ತೆ. ಹೆದರಿ ನಾಯಿಗೆ ಬೊಗಳಲು ಶುರು ಮಾಡುತ್ತದೆ. ತಕ್ಷಣ ಕನ್ನಡಿಯ ಹಿಂದೆ ಹೋಗುತ್ತದೆ ಹೋಗಿದಾಗ ಅಲ್ಲಿ ನಾಯಿ ಕಾಣುವದಿಲ್ಲ. ಮತ್ತೆ ಕನ್ನಡಿಯ ಮುಂದೆ ಬರುತ್ತದೆ ಅಷ್ಟರಲ್ಲಿ ಅಲ್ಲಿ ಕುಳಿತಿದ್ದ ಮತ್ತೊಂದು ನಾಯಿ ಎದ್ದು ನಿಲ್ಲುತ್ತದೆ ನಿಂತಾಕ್ಷಣ ಅದರ ಪ್ರತಿಮೆ ಕನ್ನಡಿಯಲ್ಲಿ ಕಾಣುತ್ತದೆ ಎರಡು ನಾಯಿ ಇವೆ ಎಂದು ಜೋರಾಗಿ ಬೊಗಳುತ್ತದೆ ಆಗ ಪಾಪ ಅಲ್ಲಿದ್ದ ನಾಯಿ ತುಂಬಾ ಹೆದರಿ ಅಲ್ಲಿಂದ ಓಡಿ ಹೋಗುತ್ತದೆ. ಈ ವೀಡಿಯೋ ನೋಡಿದರೆ ನಿಮ್ಮ ನಗು ಉಕ್ಕಿ ಬರುತ್ತದೆ ಅಲ್ಲದೆ ನೀವು ನಗದೆ ಇರಲಾರಿರಿ ಒಂದು ವೇಳೆ ನೀವು ನಕ್ಕರೆ ಈ ವಿಡಿಯೋವನ್ನು ನಿಮ್ಮ ಮಿತ್ರರಿಗೆ ಶೇರ್ ಮಾಡಿ.

ವಿಡಿಯೋ ನೋಡಿ.

 
 
 
 
 
View this post on Instagram
 
 
 
 
 
 
 
 
 
 
 

A post shared by ਜੱਟ ਬੂਟ⚠️ (@jatt_boott)