ಮನೇಲಿ ನುಸುಳುತ್ತಿದ್ದ ಕೋಬ್ರಾ ನೋಡಿ, ಮಹಿಳೆಯು ಮಾಡಿದ ಕೃತಿ ಮೆಚ್ಚಿದ ನೆಟ್ಟಿಗರು; ಅಷ್ಟಕ್ಕೂ ಆಕೆ ಮಾಡಿದ್ದೇನು? ನೋಡಿ ಈ ವೈರಲ್ ವೀಡಿಯೋದಲ್ಲಿ…
ಸೋಶಿಯಲ್ ಮೀಡಿಯಾ ಎಂದರೆ ವೈರಲ್ ಫೋಟೋ ಮತ್ತು ವೀಡಿಯೊಗಳ ಅದ್ಭುತ ಖಜಾನೆ. ಸದ್ಯ ಮಹಿಳೆಯೊಬ್ಬಳು ವಿಷ ಸರ್ಪದ ಜೊತೆಗೆ ನಡೆದುಕೊಂಡ ರೀತಿಯ ಬಗ್ಗೆ ಚರ್ಚೆ ಇದೆ.
ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ನಾಗರ ಹಾವೊಂದು ಮನೆಯಲ್ಲಿ ನುಸುಳುತ್ತಿರುವುದನ್ನು ಮಹಿಳೆಯೊಬ್ಬಳು ನೋಡುತ್ತಾಳೆ. ಬರೀ ಹಾವು ನೋಡಿದರೆ ಸಾಕು ಮೈಲಿಗಟ್ಟಲೆ ದೂರ ಓಡಿ ಹೋಗುವ ಜನರಿದ್ದಾರೆ, ಇಲ್ಲವೇ ಜೋರು ಜೋರಾಗಿ ಕೂಗು ಹಾಕಿ ಊರ ಜನರೆಲ್ಲರನ್ನು ಕೂಡಿಸಿ ಬಿಡುತ್ತಾರೆ. ಆದರೆ ಇಲ್ಲಿ ಕಾಣುವ ಮಹಿಳೆಯು ಹಾವಿನ ಜೊತೆಗೆ ನಡೆದುಕೊಂಡ ರೀತಿಯೇ ಬೇರೆಯಾಗಿದೆ. ಮಹಿಳೆಯ ಈ ಕೃತಿಯನ್ನು ನೋಡಿದ ನೇಟಿಜನ್ಸ್ ಗಳು ಆಕೆಗೆ ತುಂಬಾ ಹೊಗಳುತ್ತಿದ್ದಾರೆ.
ಕಣ್ಣುಮುಂದೆ ವಿಷಸರ್ಪ ಕಾಣಿಸಿದರೂ ಮಹಿಳೆಯು ಮಾತ್ರ ತುಂಬಾ ಶಾಂತವಾಗಿ ಕಾಣುತ್ತಿದ್ದಾಳೆ. ಆಕೆಯ ಮುಖದ ಮೇಲೆ ಭೀತಿಯ ಲವಲೇಶವೂ ಕಾಣಿಸುತ್ತಿಲ್ಲ. ಕೈಯಲ್ಲಿ ಕೋಲನ್ನು ಹಿಡಿದು ಶಾಂತಚಿತ್ತದಿಂದ ಹಾವಿಗೆ ಹೊರಹಾಕುತ್ತಿದ್ದಾಳೆ. ಮೊದಮೊದಲು ನೋಡುವಾಗ ಮಹಿಳೆಯು ಹಾವಿಗೆ ಕೋಲಿನಿಂದ ಹೊಡೆಯಬಹುದು ಎಂಬ ಶಂಕೆ ಮೂಡುತ್ತದೆ. ಆದರೆ ಹಾವನ್ನು ಮನೆಯಿಂದ ಹೊರಗೆ ಕಳುಹಿಸುವ ಸಲುವಾಗಿ ಮಹಿಳೆಯ ಕೋಲಿನ ಉಪಯೋಗ ಮಾಡಿದ್ದಾಳೆ. ಬಹುಶಃ ಆ ಮಹಿಳೆಯ ಮಾತು ಕೇಳಿ ಹಾವು ಹೊರ ಹೋಯಿತು ಎನಿಸುತ್ತದೆ.
ವಿಡಿಯೋ ನೋಡಿ
Don’t know who this compassionate woman is but hats off to her for her handling of the snake with three Cs – Cool, Calm and collected. We need more people like her who respect wildlife 👍🙏#Respectwildlife vc-shared pic.twitter.com/ZLQAE3B3C3
— Supriya Sahu IAS (@supriyasahuias) September 6, 2021
ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಐಎಎಸ್ ಆಫೀಸರ್ ಆದ ಸುಪ್ರಿಯಾ ಸಾಹೂ ಅವರು ಪೋಸ್ಟ್ ಮಾಡಿದ್ದಾರೆ. ಅವರು ಕ್ಯಾಪ್ಷನ್ ನಲ್ಲಿ, ಈ ಮಹಿಳೆ ಯಾರು ಅಂತ ಗೊತ್ತಿಲ್ಲ ಆದರೆ ಪ್ರಸ್ತುತ ಮಹಿಳೆ ಮೂರು C ಗಳ ಉಪಯೋಗ ಮಾಡಿ ಹಾವನ್ನು ಹೊರಗೆ ಅಟ್ಟಿದ್ದಾಳೆ. ಆ ಮೂರು C ಗಳು ಯಾವವು ಅಂದರೆ ಕೂಲ್, ಕಾಮ್ ಮತ್ತು ಕಲೆಕ್ಟೆಡ್. ಯಾರು ವೈಲ್ಡ್ ಲೈಫ್ ನ್ನು ಗೌರವಿಸುತ್ತಾರೆ ಅಂಥ ಮಹಾನುಭಾವರ ಅವಶ್ಯಕತೆ ನಮಗೆ ಇದೆ ಎಂದಿದ್ದಾರೆ. ಈ ವಿಡಿಯೋ ನೋಡಿ ಅನೇಕ ನೇಟಿಜನ್ಸ್ ಗಳು ಮಹಿಳೆಗೆ ಮನತುಂಬ ಹೊಗಳಿದ್ದಾರೆ.
ಸರ್ಪ ಮಿತ್ರರು ಹಾಗೂ ನೆಟ್ಟಿಗರು ಈ ದೃಶ್ಯವನ್ನು ನೋಡಿ ಮಹಿಳೆಯು ಮಾಡಿದ ಕೆಲಸಕ್ಕೆ ಹೊಗಳಿದ್ದಾರೆ. ನಿಮಗೆ ಎಲ್ಲಾದರೂ ಹಾವು ಕಾಣಿಸಿದರೆ ಅದನ್ನು ಕೊಲ್ಲದೆ ಕಾಡಿನಲ್ಲಿ ಬಿಡುವ ಪ್ರಯತ್ನ ಮಾಡಿ ಎಂದು ಒಬ್ಬ ಯೂಸರ್ ಹೇಳಿದ್ದಾನೆ. ಇನ್ನೊಬ್ಬ ಇದು ಜಗತ್ತಿನ ಅತ್ಯಂತ ಭಯಾನಕವಾದ ವಿಷಸರ್ಪವಾಗಿದೆ ಎಂದಿದ್ದಾನೆ.