ಐದೇ 5 ಸೆಕೆಂಡಿನ ಈ ಖತರ್ನಾಕ್ ವಿಡಿಯೋ ನೋಡಿಯೇ ಬಿಡಿ? ನಿಮ್ಮ ಟೆನ್ಶನ್ ದೂರವಾಗಿ ಆಗುತ್ತಿರಾ ಡಬಲ್ ಫ್ರೆಶ್ !!!

ಸೋಶಿಯಲ್ ಮೀಡಿಯಾದಲ್ಲಿ ತಲೆ ಹಾಕಿ ಕುಳಿತರೆ ಹಗಲು ಹೋಗಿ ರಾತ್ರಿ ಮತ್ತು ರಾತ್ರಿ ಹೋಗಿ ಹಗಲು ಯಾವಾಗ ಆಗುತ್ತದೆ ಎಂಬುದೇ ತಿಳಿಯುವುದಿಲ್ಲ. ಅಷ್ಟೊಂದು ಮನತಣಿಸುವ ಕಂಟೆಂಟ್ ಗಳು ಪ್ರತಿಯೊಬ್ಬರಿಗೂ ಅಲ್ಲಿ ಸಿಕ್ಕೇ ಸಿಗುತ್ತವೆ.

ಮನುಷ್ಯನ ಜೀವನದಲ್ಲಿ ಹಾಸ್ಯವು ತುಂಬಾ ಮಹತ್ವದ ಪಾತ್ರವಹಿಸಿದೆ. ವೈದ್ಯರು ಹೇಳುವಂತೆ ಮನುಷ್ಯನು ಯಾವಾಗಲೂ ನಗುನಗುತ್ತಾ ಇರುವುದರಿಂದ ರೋಗಮುಕ್ತನಾಗಿ ಬದುಕುತ್ತಾನಂತೆ. ಮುಖದ ಮೇಲೆ ಸದಾ ಗಂಭೀರತೆ ಹಾಗೂ ಚಿಂತೆಗಳನ್ನು ತೆಗೆದುಕೊಂಡು ಬಾಳುವದರಿಂದ ದೇಹಕ್ಕೆ ಹಾನಿಯೇ ಜಾಸ್ತಿಯಾಗುವುದು. ಬದುಕಿನಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ. ಮನುಷ್ಯನು ಆ ಸಮಸ್ಯೆಗಳ ಜಾಲದಲ್ಲಿ ಸಿಲುಕದೆ ಸದಾ ನಗುನಗುತ್ತಾ ತನ್ನಷ್ಟಕ್ಕೆ ತಾನು ಉಲ್ಲಸಿತನಾಗಿದ್ದು ಇನ್ನೊಬ್ಬರಲ್ಲಿಯೂ ಉತ್ಸಾಹವನ್ನು ತುಂಬುವ ವ್ಯಕ್ತಿಯಾಗಬೇಕು.

ಈಗ ಇಲ್ಲಿ ನೋಡುವ ಈ ವಿಡಿಯೋ ಇದೇ ಕೆಲಸವನ್ನು ಮಾಡುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಗಾಯಕ ಹಾಗೂ ಒಂದು ಕಪಲ್ ಇದೆ. ಕಪಲ್ ತುಂಬಾ ರೋಮ್ಯಾಂಟಿಕ್ ಮೂಡ್ ನಲ್ಲಿ ಇದ್ದಾರೆ. ಅವರ ಮುಂದೆ ಗಾಯಕ ತನ್ನ ಹಾಡನ್ನು ಪ್ರಸ್ತುತ ಮಾಡುವವನಿರುತ್ತಾನೆ. ಗಾಯಕನು ಪ್ರಾರಂಭಿಸಿದ ಮೊದಲ ಶಬ್ದಕ್ಕೆ ಅಲ್ಲಿದ್ದ ದಂಪತಿಗಳು ಒಮ್ಮೆಲೆ ಬೆಚ್ಚಿ ಬೀಳುತ್ತಾರೆ. ಗಾಯಕನು ಹೊರತೆಗೆಯುವ ಹಠಾತ್ ಆರೋಹದ ಶಬ್ದಕ್ಕೆ ದಂಪತಿಗಳು ರೋಮ್ಯಾಂಟಿಕ್ ಮೂಡ್ ನಿಂದ ವಾಸ್ತವ ಜಗತ್ತಿಗೆ ಮರಳುವಷ್ಟರಲ್ಲಿ ದೊಡ್ಡ ಅವಘಡವೇ ಸಂಭವಿಸಿದೆ. ಬಾಯ್ ಫ್ರೆಂಡ್ ತನ್ನ ಗರ್ಲ್ ಫ್ರೆಂಡ್ ಗೆ ಬಾಹುಗಳಲ್ಲಿ ಎತ್ತಿ ಕೊಂಡು ಮುದ್ದು ಮಾಡಬೇಕೆನ್ನುವಷ್ಟರಲ್ಲಿ ಗಾಯಕನ ಕತರ್ನಾಕ್ ಹಾಡಿನ ಶಬ್ದ ಕೇಳಿ ಬಾಹುಗಳಲ್ಲಿರುವ ಗರ್ಲ್ ಫ್ರೆಂಡ್ ನ್ನೆ ಒಮ್ಮೆಲೆ ಕೆಳಗೆ ಬಿಟ್ಟುಬಿಡುತ್ತಾನೆ ಬಾಯ್ ಫ್ರೆಂಡ್. ಮರಳಿ ಆತ ಅಷ್ಟಕ್ಕೇ ನಿಲ್ಲದೆ ಗಾಯಕನನ್ನು ಚೆನ್ನಾಗಿ ಥಳಿಸಲು ಕಾಲಲ್ಲಿಯ ಶೂಸ್ ಕಳಚುವದನ್ನು ನೀವು ನೋಡಬಹುದು.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ hepgul5 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿವರೆಗೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ.