ಬೈಕ್ ಮೇಲೆ ಕುಳಿತು ಸ್ಟಂಟ್ ಮಾಡಲು ಹೋದ ಯುವಕನ ಗತಿಯಾಯಿತು ಅಧೋಗತಿ! ವಿಡಿಯೋ ನೋಡಿದ ನೆಟ್ಟಿಗರು ಕಲಿಸುತ್ತಿದ್ದಾರೆ ಚೆನ್ನಾಗಿ ಪಾಠ..
ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಯುವಕರು ಯಾವ ಯಾವ ರೀತಿಯ ಸ್ಟಂಟ್ ಮಾಡಿ ಹೆಸರು ಗಳಿಸಲು ಯತ್ನಿಸುತ್ತಾರೆ ಎಂಬುದು ಹೆಚ್ಚುಕಮ್ಮಿ ಎಲ್ಲರಿಗೂ ಗೊತ್ತಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಮಾಡುವ ಈ ಸ್ಟಂಟ್ ಗಳು ತಮ್ಮದೇ ಜೀವಕ್ಕೆ ಕುತ್ತು ತಂದು ಕೊಳ್ಳುವುದಲ್ಲದೆ ಕುಟುಂಬದವರಿಗೂ ಸಹ ಆರ್ಥಿಕ, ದೈಹಿಕ ಹಾಗೂ ಮಾನಸಿಕ ಸಂಕಷ್ಟದಲ್ಲಿ ಸಿಲುಕಿಸಿ ಬಿಡುತ್ತಾರೆ.
ಸದ್ಯ ಒಬ್ಬ ಹುಡುಗನು ಬೈಕ್ ಮೇಲೆ ಮಾಡಿದ ಸ್ಟಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದಾಗ ಪ್ರಾಣವು ಎಷ್ಟೊಂದು ಅಗ್ಗವಾಗಿದೆ ಹಾಗೂ ಯಾಕಾದರೂ ಯುವಕರು ಈ ರೀತಿಯ ಸ್ಟಂಟ್ ಗಳನ್ನು ಮಾಡುತ್ತಾರೆ ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ.
ಈ ವಿಡಿಯೋ ನೋಡಿದ ಮೇಲೆ ಮೊದಲು ಬೈಕ್ ಸವಾರನ ಮೇಲೆ ಕರುಣೆ ಉಕ್ಕಿ ಬರುತ್ತದೆ. ಜೊತೆಗೆ ಕೋಪವು ಬರುತ್ತದೆ. ಜೀವವನ್ನು ಆಪತ್ತಿನಲ್ಲಿ ಸಿಲುಕಿಸಿ ಇಷ್ಟೆಲ್ಲ ಯಾಕಾದರೂ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸುವುದು ನಿಶ್ಚಿತ. ಉತ್ತರ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯನ್ನು ಗಿಟ್ಟಿಸಲು.
ಸ್ಟಂಟ್ ಮಾಡುವಾಗ ಯುವಕನ ಪರದಾಟ ನೋಡಿ.
ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಸ್ವಲ್ಪವೂ ಖಾಲಿ ಜಾಗವಿಲ್ಲ. ಅಲ್ಲಿಯೇ ಒಂದು ಕಾರು ನಿಂತಿದೆ. ಮತ್ತು ಅಂಥ ಇಕ್ಕಟ್ಟಾದ ರಸ್ತೆಯಲ್ಲಿಯೇ ಇನ್ನೊಂದು ಕಾರು ಚಲಿಸುತ್ತಿರುತ್ತದೆ. ಅಷ್ಟರಲ್ಲಿ ಬೈಕ್ ಸವಾರ ಆ ಎರಡು ಕಾರುಗಳ ಮಧ್ಯದಿಂದ ತನ್ನ ಬೈಕ್ ನ್ನು ಕ್ಷಣಾರ್ಧದಲ್ಲಿ ಪಾರು ಮಾಡಿ ಹೋಗಬೇಕು ಎಂದುಕೊಂಡು ಮಾಡಿದ ಸ್ಟಂಟ್ ಆತನಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ. ಯುವಕನು ಎರಡು ಕಾರುಗಳ ಮಧ್ಯದಲ್ಲಿ ಹೋಗಿ ಕುಕ್ಕರಿಸಿ ಬೈಕಿನ ಜೊತೆಗೆ ಬಿದ್ದಿದ್ದಾನೆ. ಈ ದೃಶ್ಯ ನೋಡುವಾಗ ಒಂದು ಕ್ಷಣ ಎದೆ ಝಲ್ ಎನ್ನುತ್ತದೆ.
ವಿಡಿಯೋ ನೋಡಿ
ಟಾಯರೇಸ್ ಶೇರ್ ಮಾಡಿದರು ವಿಡಿಯೋ…
ಈ ವೀಡಿಯೋವನ್ನು ಹಾಲಿವುಡ್ ನಟ ಟಾಯರೆಸ್ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಅಪ್ಲೋಡ್ ಮಾಡಿದ ಈ ವೀಡಿಯೋವನ್ನು 16 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ಸಂಖ್ಯೆ ಸತತವಾಗಿ ಹೆಚ್ಚುತ್ತಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ಮೇಲೆ ತುಂಬಾ ಗರಮ್ ಆಗುವುದರ ಜೊತೆಗೆ ಚಿಂತೆಯೂ ವ್ಯಕ್ತ ಮಾಡಿದ್ದಾರೆ. ಕೆಲವರಂತೂ ಆತನಿಗೆ ಮೂರ್ಖ ಎಂದು ಕರೆಯುತ್ತಿದ್ದಾರೆ. ಒಬ್ಬ ಯೂಸರ್ ಆತನಿಗೆ ಸರಿಯಾಗಿ ಶಿಕ್ಷೆಯಾಗಿದೆ ಎಂದಿದ್ದಾನೆ. ಹೀಗೆ ಅನೇಕರು ಕಾಮೆಂಟ್ ನಲ್ಲಿ ಆತನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.