ಓನ್ಲಿ ಫಾರ್ ಕ್ಯಾಟ್ ಲವರ್ಸ! ಸುಮ್ಮನೆ ಕುಳಿತ ಬೆಕ್ಕಿಗೆ ಇನ್ನೊಂದು ಬೆಕ್ಕು ತನ್ನ ಬೇಸರಿಕೆ ಕಳೆದುಕೊಳ್ಳಲು ಏನು ಮಾಡಿತು ನೋಡಿ ಈ ಸುಂದರ ವಿಡಿಯೋದಲ್ಲಿ…

ಬರೀ ಮನುಷ್ಯನಿಗಷ್ಟೆ ಬೇನೆ, ಬೇಸರಿಕೆಗಳಿರುತ್ತವೆ ಎಂದು ತಿಳಿಯಬೇಡಿ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಇವು ಬಿಟ್ಟಿದ್ದಲ್ಲ. ಮನುಷ್ಯ ಬೇಸರಿಸಿದಾಗ ತನ್ನ ಬೇಸರಿಕೆ ಕಳೆದುಕೊಳ್ಳಲು ಬೇರೆ ಬೇರೆ ಮಾರ್ಗವನ್ನು ಹುಡುಕುತ್ತಾನೆ. ಉದಾಹರಣೆಗಾಗಿ ಹೇಳಬೇಕಾದರೆ ಹೊರಗೆ ಸುತ್ತಾಡಲು ಹೋಗುವದು, ಮೂವಿ ನೋಡುವದು, ಏನಾದರೂ ರುಚಿಕಟ್ಟಾದ ಪದಾರ್ಥಗಳನ್ನು ತಿನ್ನುವದು, ಇಲ್ಲವಾದರೆ ಎಲ್ಲಕ್ಕಿಂತ ಮುಖ್ಯ ಏನೂ ಆಗದೆ ಇದ್ದಾಗ ಬದಿಯಲ್ಲಿ ಇರುವವರನ್ನು ಕಾಡುವದು ರೇಗಿಸುವುದು ಅಥವಾ ಗೋಳು ಹೊಯ್ದುಕೊಳ್ಳುವದು ಹೀಗೆ ಮಾಡುತ್ತಾನೆ. ಹಾಗೆಯೇ ಇನ್ನಿತರ ಪ್ರಾಣಿಗಳು ಸಹ ಏನಾದರೂ ಮಾಡುತ್ತವೆ ಎಂದರೆ ನಂಬುತ್ತೀರಾ? ಇಲ್ಲವಾದರೆ ಇಲ್ಲಿ ಈ ವಿಡಿಯೋದಲ್ಲಿ ಬೆಕ್ಕು ಮಾಡಿದ ಪ್ರತಾಪ ನೋಡಿ ನಕ್ಕು ನಕ್ಕು ಸುಸ್ತಾಗುತ್ತಿರಿ.

ವಿಡಿಯೋದಲ್ಲಿ ಕಾಣುವ ಹಾಗೆ ಕಟ್ಟುಮಸ್ತಾದ ತುಂಬು ದೇಹದ ಕಂದು ಬಣ್ಣದ ಬೆಕ್ಕೊಂದು ಗೋಡೆಗೆ ಆನಿಸಿ ಸುಮ್ಮನೆ ಕಣ್ಣುಗಳನ್ನು ಮುಚ್ಚಿ ಕುಳಿತಿದೆ. ಆರಾಮಾಗಿ ಕುಳಿತಿರುವ ಬೆಕ್ಕನ್ನು ಬಿಳಿಯ ಬಣ್ಣದ ಇನ್ನೊಂದು ಬೆಕ್ಕಿಗೆ ನೋಡುವದಾಗುವದಿಲ್ಲ. ಜೊತೆಗೆ ಅದಕ್ಕೆ ಬೇಸರಿಕೆಯು ಬಂದಿರುವ ಹಾಗೆ ವಿಡಿಯೋದಲ್ಲಿ ಕಂಡು ಬರುತ್ತದೆ. ತನ್ನ ಬೇಸರಿಕೆಯನ್ನು ಕಳೆದುಕೊಳ್ಳಲು ಬಿಳಿ ಬಣ್ಣದ ಬೆಕ್ಕು ಮೊದಲು ಕಂದು ಬಣ್ಣದ ಬೆಕ್ಕಿನ ಎದುರಿಗೆ ಗೋಡೆಯ ಕಡೆಗೆ ಕಾಲು ಮಾಡಿ ಮಲಗುತ್ತದೆ. ನಂತರ ತನ್ನ ಕಾಲುಗಳನ್ನು ಗೋಡೆಗೆ ಒಮ್ಮೆಲೆ ಪ್ರೆಸ್ ಮಾಡಿ ಜಾರುತ್ತ ಕಂದು ಬಣ್ಣದ ಬೆಕ್ಕಿನೆಡೆಗೆ ಸುಯ್ ಎಂದು ಬಂದು ಡಿಕ್ಕಿ ಹೊಡೆದಿದೆ. ಇದರ ಅರಿವು ಇಲ್ಲದ ಸುಮ್ಮನೆ ಕುಳಿತ ಬೆಕ್ಕು ಒಮ್ಮೆಲೆ ಬೆಚ್ಚಿ ಬಿದ್ದಿದೆ. ನೋಡಲು ತುಂಬಾ ಸುಂದರವಾದ ಕ್ಯೂಟ್ ವಿಡಿಯೋ ಇದಾಗಿದೆ ಎಂದೇ ಹೇಳಬಹುದು.

ನೋಡಿ ಈ ವಿಡಿಯೋ…

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಲಕ್ಷಾವಧಿ ಜನರು ಈ ವಿಡಿಯೋ ನೋಡಿ ಆನಂದಿಸಿ ತಮ್ಮ ವಿಧ ವಿಧ ಪ್ರತಿಕ್ರಿಯೆಗಳನ್ನು ತಿಳಿಸಿದ್ದಾರೆ.