ಮೇಘಸ್ಫೋಟ ಎಂದರೇನು?ಅದ್ಹೇಗೆ ಸಂಭವಿಸುತ್ತದೆ? ‘ಮೇಘಸ್ಫೋಟ’ದ ಭಯಾನಕ ದೃಶ್ಯದ ಅದ್ಭುತ ವೀಡಿಯೋ ಕ್ಯಾಮೆರಾದಲ್ಲಿ ಸೆರೆ! ನೋಡಿ..

ಎಷ್ಟೋ ಸಲ ನಾವು ಸುದ್ದಿ ಸಮಾಚಾರಗಳಲ್ಲಿ ಅತಿಯಾದ ಮಳೆಯ ಸುದ್ದಿಗಳನ್ನು ಕೇಳುತ್ತೇವೆ. ಅದರಲ್ಲಿ ಕುಂಭದ್ರೋಣ ಮಳೆ ಮತ್ತು ಮೇಘಸ್ಫೋಟ (Cloud Burst) ವಾಯಿತು ಎಂಬ ಹೆಡ್ ಲೈನ್ ಗಳನ್ನು ಕೇಳುತ್ತವೆ. ಎಲ್ಲೆಲ್ಲಿ ಮೇಘಸ್ಫೋಟ ಸಂಭವಿಸುತ್ತದೆಯೋ ಅಲ್ಲಲ್ಲಿ ಸಹಜವಾಗಿಯೇ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತದೆ. ಆದರೆ ನಿಜಕ್ಕೂ ಈ ಮೇಘಸ್ಫೋಟ ಸಂಭವಿಸುವ ಭಯಾನಕ ದೃಶ್ಯವನ್ನು ಎಂದಾದರೂ ನೋಡಿದ್ದೀರಾ? ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದರೆ ಆ ದೃಶ್ಯವನ್ನು ಇಲ್ಲಿಯ ವಿಡಿಯೋದಲ್ಲಿ ನೋಡಬಹುದಾಗಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮೇಘಸ್ಫೋಟದ ದೃಶ್ಯವನ್ನು ತೋರಿಸುವ ವಿಡಿಯೋ ಒಂದು ಸಂಚಲನ ಮೂಡಿಸಿದೆ. ಇದರಲ್ಲಿ ಈ ಮೇಘಸ್ಫೋಟದ ಅಪರೂಪದ ದೃಶ್ಯವನ್ನು ಸೆರೆ ಹಿಡಿಯುವಲ್ಲಿ ಯಶಸ್ಸು ಸಿಕ್ಕಿದೆ. ಈ ವಿಡಿಯೋ ನೋಡಿದಾಗ ಮೇಘಸ್ಫೋಟದಿಂದ ಯಾವ ರೀತಿ ಭೂಮಿಯ ಮೇಲೆ ಪ್ರವಾಹ ಪರಿಸ್ಥಿತಿ ಮತ್ತು ವಿನಾಶ ಸಂಭವಿಸುತ್ತದೆ ಎಂಬ ಅಂದಾಜು ನಿಮಗೂ ಬರುತ್ತದೆ.

ಈ ವಿಡಿಯೋ ಯೂಸರ್ ನೊಬ್ಬ biltekpluss ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾನೆ. ವಿಡಿಯೋದಲ್ಲಿ, ದಟ್ಟ ಕಾರ್ಮೊಡವು ನಿಧಾನಗತಿಯಲ್ಲಿ ಮುಂದೆ ಮುಂದೆ ಸರಿಯುತ್ತಿರುವ ದೃಶ್ಯ ತುಂಬಾ ಭಯವನ್ನು ಹುಟ್ಟಿಸುತ್ತದೆ. ಅದೇ ಸಂದರ್ಭದಲ್ಲಿ ಮೋಡದ ಮಧ್ಯಭಾಗದಿಂದ ನೀರು ಹಠಾತ್ತನೆ ಜಲಪಾತದ ಸ್ವರೂಪದಲ್ಲಿ ಅಬ್ಬರಿಸಿ ಕೆಳಗೆ ಹರಿಯುವ ನದಿಯ ನೀರಿನಲ್ಲಿ ಕೂಡಿಕೊಳ್ಳುತ್ತದೆ. ಅದೃಷ್ಟ ಏನೆಂದರೆ ಮೋಡದಿಂದ ಗೋಗರೆದು ಬೀಳುವ ಈ ನೀರು ನದಿಯ ಮೇಲುಗಡೆ ಬಿದ್ದಿದೆ. ಇದೇ ನೀರು ಒಂದು ವೇಳೆ ದಟ್ಟ ಜನವಸತಿ ಇದ್ದ ಸ್ಥಳದಲ್ಲಿ ಬಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂಬುದರ ಬಗ್ಗೆ ಊಹಿಸಿದರೂ ಸಾಕು ಮೈಯಲ್ಲಿ ನಡುಕ ಹುಟ್ಟುತ್ತದೆ.

ವೀಡಿಯೋ ನೋಡಿ

ಈ ವೀಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದಲ್ಲಿಯೂ ಅನೇಕ ಸಲ ಮೇಘಸ್ಫೋಟದ ಘಟನೆಗಳಾಗಿವೆ. ಮೇಘಸ್ಫೋಟದ ಘಟನೆಗಳಲ್ಲಿ ಸಾಕಷ್ಟು ಬಾರಿ ಜೀವಹಾನಿ ಮತ್ತು ಆರ್ಥಿಕ ನಷ್ಟ ಸಂಭವಿಸಿದೆ. ವಿಶೇಷವಾಗಿ ಪರ್ವತ ಭಾಗಗಳಲ್ಲಿ ಉದಾಹರಣೆಗೆ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲದ್ದಾಖ್ ಗಳಂತಹ ಸ್ಥಳಗಳಲ್ಲಿ ಮೇಘಸ್ಪೋಟದಿಂದ ಅನೇಕ ರೀತಿಯ ಹಾನಿ ಉಂಟಾಗಿದೆ.