ತಂದೆಗಾಗಿ ಮಗಳ ತಳಮಳ! ಈ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಹರಿಸಿತು ಕಣ್ಣೀರಿನ ಪ್ರವಾಹವನ್ನೇ; ಪ್ರತಿಯೊಬ್ಬ ತಂದೆ ನೋಡುವಂಥ ವೈರಲ್ ವಿಡಿಯೋ…

ಹೆಣ್ಣು ಮಗು ಜನಿಸಿತೆಂದು ಮೂಗು ಮುರಿಯುವ ಪೋಷಕರು ಸಾಕಷ್ಟಿದ್ದಾರೆ. ಆದರೆ ಮೊದಲಿನಿಂದಲೂ ಹೆಣ್ಣುಮಗಳು ಮನೆಯ ಗೃಹಲಕ್ಷ್ಮಿ ಎಂದು ಹೇಳಲಾಗುತ್ತದೆ. ತಂದೆಗೆ ಹೆಣ್ಣುಮಕ್ಕಳ ಮೇಲೆ ತುಂಬಾ ಪ್ರೀತಿ ಇರುತ್ತದೆ. ಅದೇ ರೀತಿ ಹೆಣ್ಣು ಹುಡುಗಿಯರು ಸಹ ತಾಯಿಗಿಂತ ತಂದೆಯನ್ನೇ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ತಂದೆ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ತೋರಿಸುವ ಪುಟ್ಟ ಹುಡುಗಿಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಂಚಲನ ಮೂಡಿಸಿದೆ. ಈ ಹುಡುಗಿಯು ತನ್ನ ತಂದೆಯ ಪ್ರತಿ ಇರುವ ಕಾಳಜಿ ವ್ಯಕ್ತ ಮಾಡುವ ರೀತಿ ನೋಡಿ ವಿಡಿಯೋ ನೋಡಿದವರು ಸಹ ಭಾವುಕರಾಗಿದ್ದಾರೆ. ಈ ಪುಟ್ಟ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿನ ಧಾರೆಯನ್ನೇ ಹರಿಸಿದ್ದಾಳೆ.

ಸದ್ಯದ ಸಮಯದಲ್ಲಿ ಮೊದಲಿನ ಹಾಗೆ ಹುಡುಗ-ಹುಡುಗಿಯರಲ್ಲಿ ಭೇದಭಾವ ಮಾಡುವುದಿಲ್ಲ. ಇತ್ತೀಚೆಗೆ ಸಾಕಷ್ಟು ಪೋಷಕರು ತಮ್ಮ ವಿಚಾರವನ್ನು ಬದಲಾಯಿಸುತ್ತಾ ಬರೀ ಒಂದು ಅಥವಾ ಎರಡು ಹುಡುಗಿಯರ ಮೇಲೆಯೇ ಸಮಾಧಾನ ಪಟ್ಟಿದ್ದಾರೆ. ಗಂಡುಮಗ ಬೇಕೇ ಬೇಕು ಎಂಬ ಹಠದಿಂದ ಮನೆ ತುಂಬಾ ಮಕ್ಕಳು ಮಾಡುವ ಗೋಜಿಗೆ ಹೋಗಿಲ್ಲ. ಕೆಲವರಿಗೆ ಹೆಣ್ಣು ಮಗು ಎಂದರೆ ಭಾರ ಮತ್ತು ಹೆಣ್ಣು ಮಗು ಜನಿಸಿದ ನಂತರ ತುಂಬಾ ನಿರಾಶರಾಗುವ ಕೆಲವು ಪೋಷಕರು ಸಮಾಜದಲ್ಲಿ ಈಗಲೂ ಕಾಣಸಿಗುತ್ತಾರೆ. ಹೆಣ್ಣು ಹುಡುಗಿಯರ ಬಗ್ಗೆ ತಾತ್ಸಾರ ಮನೋಭಾವವಿರುವ, ಕಲ್ಲಿನಂತ ಹೃದಯವಿದ್ದರೂ ಕರಗಿಸುವ ಹಾಗೂ ಹೆಣ್ಣು ಮಗು ಬೇಡವೇ ಅನ್ನುವವರು ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದಾಗ ಹೆಣ್ಣು ಮಗು ಬೇಕು ಎನ್ನುವ ವಿಚಾರಕ್ಕೆ ಬರುತ್ತಾರೆ ನಿಶ್ಚಿತ.

2 ನಿಮಿಷ 14 ಸೆಕೆಂಡುಗಳ ಈ ವಿಡಿಯೋದಲ್ಲಿ ಪುಟ್ಟ ಬಾಲಕಿ ಅಳುತ್ತಿರುವುದು ಕಂಡುಬರುತ್ತದೆ. ಆಕೆ ಅಳುತ್ತಿರುವ ಕಾರಣ ಆಕೆಯ ತಂದೆ. ಈ ಪುಟ್ಟ ಹುಡುಗಿಯು ತನ್ನ ತಂದೆಯ ಸಲುವಾಗಿ ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದಾಳೆ. ಮೊದಲು ತಾಯಿ ಮಗಳಿಗೆ ಅಳುತ್ತಿರುವ ಕಾರಣವನ್ನು ಕೇಳುತ್ತಾಳೆ. ಆಗ ಈ ಪುಟ್ಟ ಮಗು ಒಂದೊಂದಾಗಿ ಬಿಡಿಸಿ ದೂರವಾಗಿ ಹುಡುಗರ ಮನಸ್ಸು ಅಕ್ಷರಶಃ ತುಂಬಿ ಬರುತ್ತದೆ. ಹಾಗೂ ತನ್ನ ಸ್ಪಷ್ಟವಾದ ಮಾತುಗಳಲ್ಲಿ, ತಂದೆಯು ದಿನಪೂರ್ತಿ ಊಟವನ್ನು ಮಾಡದೆ ಹಾಗೆಯೇ ಕೆಲಸವನ್ನು ಮಾಡುತ್ತಾರೆ. ಮುಂಜಾನೆ ಊಟ ಮಾಡಿ ಹೋದವರು ರಾತ್ರಿಯೇ ಬಂದು ಊಟ ಮಾಡುತ್ತಾರೆ. ಮಧ್ಯದಲ್ಲಿ ಅವರು ಏನನ್ನೂ ತಿನ್ನುವುದಿಲ್ಲ. ಅದು ನನಗೆ ತುಂಬಾ ಟೆನ್ಶನ್ ಆಗುತ್ತದೆ ಎಂಬ ಮಾತುಗಳನ್ನು ಹಾಗೂ ತಂದೆಯ ಪ್ರತಿ ಸಾಕಷ್ಟು ಕಾಳಜಿಯನ್ನು ತೋರಿಸುತ್ತದೆ.

ತಂದೆಗಾಗಿ ಆಕೆ ತನ್ನ ತಾಯಿಯ ಜೊತೆಗೆ ವಾದ ಮಾಡುತ್ತಾಳೆ. ನಾನು ತಂದೆಗೆ ಊಟ ಹಾಕುತ್ತೇನೆ ಮತ್ತು ಕಾಳಜಿ ತೆಗೆದುಕೊಳ್ಳುತ್ತೇನೆ ಎಂದು ಅಮ್ಮ ಹೇಳಿದರು ಸಹ ಮಗಳು ಕೇಳುವ ಸ್ಥಿತಿಯಲ್ಲಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಹುಡುಗಿಯು ಮಾತನಾಡುವ ಭಾಷೆ ಹಿಂದಿಯಲ್ಲಿ ಇದ್ದರೂ ಸಹ ಭಾವನೆ, ನೋವು ಹಾಗೂ ತಳಮಳ ಅರ್ಥಮಾಡಿಕೊಳ್ಳಲು ಭಾಷೆಯ ಅವಶ್ಯಕತೆ ಇಲ್ಲ ಎಂದೇ ಅನಿಸುತ್ತದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು @RaghuvanshiLive ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ತುಂಬಾ ಭಾವುಕರಾಗುತ್ತಿದ್ದಾರೆ. ಜೊತೆಗೆ ಹುಡುಗಿಯ ತಂದೆಗೆ, “ಈಕೆಯ ತಂದೆಯಾದ ನೀವು ತುಂಬಾ ಅದೃಷ್ಟವಂತನೆಂದು ಹಾರೈಸುತ್ತಿದ್ದಾರೆ”.