ಈ ಪುಟ್ಟ ಮಕ್ಕಳ ಕೆಲಸವೇ ಹೀಗೆ; ಕುರಿಮರಿಯೊಂದಿಗೆ ಹೋರಾಡಲು ಹೋದ ಪುಟ್ಟ! ಮುಂದಿನ ಇಬ್ಬರ ಕ್ಯೂಟ್ ದೃಶ್ಯ ಈ ವೈರಲ್ ವಿಡಿಯೋದಲ್ಲಿ ನೀವೇ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕಮಕ್ಕಳ ವಿಡಿಯೋಗಳಿಗೆ ನೇಟಿಜನ್ಸ್ ಗಳು ತುಂಬಾ ಸ್ಪಂದಿಸುತ್ತಾರೆ. ಈ ವಿಡಿಯೋಗಳು ಇಷ್ಟವಾದರೆ ನೇಟಿಜನ್ಸ್ ರು ಸೋಶಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ ಫಾರ್ಮ ಗಳಲ್ಲಿ ಹೆಚ್ಚು ಹೆಚ್ಚು ಶೇರ್ ಮಾಡುತ್ತಾರೆ. ಇದೇ ರೀತಿಯ ಪುಟ್ಟ ಬಾಲಕನ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.
ಈ ಮಕ್ಕಳ ಮನಸ್ಸಿನಲ್ಲಿ ಒಮ್ಮೆ ಏನಾದರೂ ಹೊಕ್ಕರೆ ಆಯಿತು ಅದನ್ನು ಅವರು ಮಾಡುವವರೆಗೆ ಬಿಡುವದೇ ಇಲ್ಲ. ಹಾಗೆ ನೋಡಲಾಗಿ ಇಲ್ಲಿ ಎರಡು ಪುಟ್ಟ ಮಕ್ಕಳೇ ಆಗಿವೆ. ಒಂದು ಮನುಷ್ಯನ ಮಗು ಇದ್ದರೆ ಇನ್ನೊಂದು ಕುರಿಯ ಮರಿಯಾಗಿದೆ. ಈ ವಿಡಿಯೋದಲ್ಲಿಯ ಪುಟ್ಟ ಮಗುವಿಗೆ ಸ್ವಲ್ಪ ನೋಡಿ ಸರಿಯಾಗಿ ಈತನಿಗೆ ನಡೆಯಲು ಬರುವದಿಲ್ಲ ಆದರೂ ಕುರಿಮರಿಯ ಜೊತೆಗೆ ಹೋರಾಡಲು ಹೋಗಿದ್ದಾನೆ. ಆದರೆ ಇಲ್ಲಿ ಹೋರಾಟ ಪಾಪ ತಿರುಗುಬಾಣವಾಗಿದೆ. ಮಗು ಕುರಿಮರಿಗೆ ತಲೆಯಿಂದ ಡಿಕ್ಕಿ ಹೊಡೆಯಲು ಹೋಗಿದ್ದಾನೆ. ವಿಡಿಯೋ ನೋಡಿದಾಗ ಬಹುಶಃ ಈ ಆಟ ಮಗು ಕುರಿಮರಿಯ ಜೊತೆ ಮೇಲಿಂದ ಮೇಲೆ ಆಡಿರಬೇಕು ಎಂಬಂತೆ ತಿಳಿದುಬರುತ್ತದೆ. ಆದ್ದರಿಂದಲೇ ಕುರಿಮರಿಯ ಜೊತೆಗೆ ಡಿಕ್ಕಿ ಹೊಡೆಯುವ ಮುನ್ನ ಬಾಲಕ ತನ್ನ ತಲೆಯನ್ನು ಸ್ವಲ್ಪ ಕೆಳಗೆ ಮಾಡಿ ಡಿಕ್ಕಿ ಹೊಡೆಯುವ ವರಸೆಯಲ್ಲಿಯೇ ಹೋಗಿದ್ದಾನೆ. ಆದರೆ ಬಾಲಕನಿಗೆ ಏನು ಗೊತ್ತು? ಇದರಲ್ಲಿ ಕುರಿಮರಿಯು ತುಂಬಾ ಎಕ್ಸ್ಪರ್ಟ್ ಆಗಿರುತ್ತದೆ ಅಂತ. ಹೀಗಾಗಿ ಕುರಿಮರಿ ತಿರುಗಿ ಪುಟ್ಟ ಬಾಲಕನಿಗೆ ಜೋರಾಗಿ ತಲೆಗೆ ಡಿಕ್ಕಿ ಹೊಡೆದ ಕಾರಣ ಮಗು ಒಮ್ಮೆಲೆ ನೆಲಕ್ಕೆ ಬಿದ್ದಿದೆ.
ವಿಡಿಯೋ ನೋಡಿ
View this post on Instagram
ಈ ಕ್ಯೂಟ್ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ memewalanews ಹೆಸರಿನಿಂದ ಶೇರ್ ಮಾಡಲಾಗಿದೆ. ಕ್ಯಾಪ್ಶನ್ ನಲ್ಲಿ ‘ಓ ಮಾಯ್ ಡಿಯರ್ ಬೇಬಿ’ ಎಂದು ಬರೆಯಲಾಗಿದೆ.
ಅದಕ್ಕೆ ಅನ್ನೋದು ಈ ಪುಟ್ಟ ಮಕ್ಕಳ ಆಟ ಮತ್ತು ಕೆಲಸವೇ ಹೀಗೆ ಅಲ್ವಾ?