25,000 ₹ಗಳ ಸಂಬಳದ ಮೇಲೆ ಎಷ್ಟು ದೊರೆಯುತ್ತದೆ ಹೋಮ್ ಲೋನ್? ತಿಳಿದುಕೊಳ್ಳಿ ಮನೆ ಖರೀದಿಸುವ ಮುನ್ನ ಲೆಕ್ಕಾಚಾರ…

ಪುಟ್ಟ ಮನೆಯೇ ಆಗರಲಿ ಆದರೆ ಅದು ಸ್ವಂತದ್ದಾಗಿರಬೇಕು ಎಂಬ ಕನಸು ಪ್ರತಿಯೊಂದು ವ್ಯಕ್ತಿ ನೋಡುತ್ತಾನೆ. ನೌಕರಿಯ ನಂತರ ಹೆಚ್ಚು ಕಡಿಮೆ ಜನರು ತಮ್ಮ ಕನಸಿನ ಮನೆಯ ಬಗ್ಗೆ ಯೋಚನೆ ಮಾಡಿಯೇ ಮಾಡುತ್ತಾರೆ. ಹೋಮ್ ಲೋನ್ ಎಲ್ಲ ಪ್ರಕಾರದ ಉತ್ಪನ್ನವನ್ನು ಹೊಂದುವ ಜನರಿಗೆ ಸಿಗುತ್ತದೆ. ಯಾರ ಉತ್ಪನ್ನ 20 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಅಥವಾ ಅದಕ್ಕಿಂತ ಮೇಲ್ಪಟ್ಟಿದೆ ಅಂಥವರೆಲ್ಲರೂ ಗೃಹಸಾಲಕ್ಕಾಗಿ ಅರ್ಹರಾಗಿರುತ್ತಾರೆ.

ಈಗ ಇಲ್ಲಿ 25000 ರೂಪಾಯಿಗಳವರೆಗೆ ಸಂಬಳವನ್ನು ಪಡೆಯುವ ವ್ಯಕ್ತಿಗಳಿಗೆ ಎಷ್ಟು ಗೃಹಸಾಲ ದೊರೆಯುತ್ತದೆ? ಎಂಬುದನ್ನು ತಿಳಿದುಕೊಳ್ಳುವ. ನಿಮ್ಮ ಸಂಬಳದ 25 % ಕ್ಕಿಂತಲೂ ಹೆಚ್ಚು ಗೃಹಸಾಲದ ಕಂತು ಇರಬಾರದು ಎಂಬುದು ಸಾಮಾನ್ಯ ನಿಯಮವಾಗಿದೆ. ಹಾಗೆಯೇ ಸಂಬಳದ ಉಳಿದ ಭಾಗ ತುರ್ತು ಹಾಗೂ ಇತರ ಖರ್ಚುಗಳಿಗಾಗಿ ಉಳಿಯಬೇಕು ಎಂಬುದು ಇದರ ಹಿಂದಿನ ಸಾಮಾನ್ಯ ಉದ್ದೇಶವಾಗಿದೆ. ಉದಾಹರಣೆಗಾಗಿ ನಿಮ್ಮ ಸಂಬಳ 50 ಸಾವಿರ ರೂಪಾಯಿಗಳಿದ್ದರೆ ಅದರ 25 ಪ್ರತಿಶತ ಅಂದರೆ ಸುಮಾರು 12 ಸಾವಿರ ರೂಪಾಯಿಗಳಷ್ಟು ಗೃಹಸಾಲದ ಕಂತು ಅಥವಾ ಪ್ರೀಮಿಯಂ ನಿಶ್ಚಿತ ಮಾಡಲಾಗುತ್ತದೆ.

ಗೃಹಸಾಲ ಇನ್ ಹ್ಯಾಂಡ್ ಸ್ಯಾಲರಿ ಮೇಲೆ ಅವಲಂಬಿಸಿರುತ್ತದೆ…

ಬಜಾಜ್ ಫಿನ್ಸರ್ವ ಪ್ರಕಾರ, ಗೃಹಸಾಲದ ಕಂತು ನಿಮ್ಮ ಕೈಗೆ ಬರುವ ಸಂಬಳದ ಮೇಲೆ ಅವಲಂಬಿಸಿರುತ್ತದೆ. ನಿಮಗೆ ಎಷ್ಟು ಗೃಹಸಾಲ ನೀಡಬೇಕು ಎಂಬುದನ್ನು ನಿಮ್ಮ ಉತ್ಪನ್ನದ ಮೇಲೆ ನಿಶ್ಚಿತ ಗೊಳಿಸಲಾಗುತ್ತದೆ. ಸಾಲ ನೀಡುವ ಕಂಪನಿ ನಿಮ್ಮ ಟೇಕ್ ಹೋಮ್ ಸ್ಯಾಲರಿಯನ್ನು ಆಧಾರವಾಗಿ ಇಡುತ್ತೆ, ಮತ್ತು ಅದರಲ್ಲಿಂದ ಗ್ರ್ಯಾಜ್ಯೂಟಿ, ಪಿಎಫ್, ಇಎಸ್ಐ ಇವುಗಳನ್ನು ಕಟ್ ಮಾಡಲಾಗುತ್ತದೆ.

25000 ರೂಪಾಯಿಗಳಿಗೆ ಎಷ್ಟು ದೊರೆಯುತ್ತದೆ ಗೃಹಸಾಲ?

ಒಂದು ವೇಳೆ ನಿಮ್ಮ ಟೇಕ್ ಹೋಮ್ ಸ್ಯಾಲರಿ 25 ಸಾವಿರ ರೂಪಾಯಿಗಳಿದ್ದರೆ ಯಾವುದೇ ಬ್ಯಾಂಕ್ ಅಥವಾ ಗೃಹಸಾಲ ಒದಗಿಸುವ ಕಂಪನಿ ನಿಮಗೆ 25 ವರ್ಷಗಳ ಕಾಲಾವಧಿಗಾಗಿ 18.64 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಟೇಕ್ ಹೋಮ್ ಸ್ಯಾಲರಿ 50 ಸಾವಿರ ರೂಪಾಯಿಗಳ ವರೆಗೆ ಇದ್ದರೆ ಬ್ಯಾಂಕ್ ನಿಮಗೆ 37.28 ಲಕ್ಷಗಳವರೆಗೆ ಸಾಲ ನೀಡುತ್ತದೆ. ಒಟ್ಟಿನಲ್ಲಿ ನಿಮ್ಮ ಸಂಬಳ ಹೆಚ್ಚಿದ್ದರೆ ನಿಮಗೆ ಬ್ಯಾಂಕ್ ಮನೆಗಾಗಿ ಸಾಲವನ್ನು ಸಹ ಹೆಚ್ಚಿಗೆ ನೀಡುತ್ತದೆ.

ಗೃಹಸಾಲ ಪಡೆದುಕೊಳ್ಳುವಾಗ ಗಮನದಲ್ಲಿಡಬೇಕಾದ ಈ ಮಹತ್ವದ ಅಂಶಗಳು.

ಇದರಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹಿಡಿದು ಅನೇಕ ಅಂಶಗಳು ಸಮಾವೇಶವಾಗಿರುತ್ತವೆ. ಗೃಹಸಾಲ ಪಡೆಯುವ ಮುನ್ನ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿವಿಲ್ ಸ್ಕೋರ್ ಸುಧಾರಿಸಿಕೊಳ್ಳಿ. ಇದರ ಹೊರತಾಗಿ ಗೃಹಸಾಲ ಪಡೆಯುವ ವ್ಯಕ್ತಿಯ ವಯಸ್ಸು ಸಹ ಮಹತ್ವದ ಪಾತ್ರ ವಹಿಸುತ್ತದೆ. ಯಾಕೆಂದರೆ ವಯಸ್ಸಿನ ಪ್ರಕಾರ ನೀವು ಎಷ್ಟು ವರ್ಷದಲ್ಲಿ ಸಾಲವನ್ನು ಮರಳಿಸುತ್ತಿರಿ ಎಂಬುದು ಸಹ ಬ್ಯಾಂಕ್ ವಿಚಾರ ಮಾಡುತ್ತದೆ.