ಇದು ನೋಡಿ ಜಗತ್ತಿನ ಎಲ್ಲಕ್ಕೂ ದುಬಾರಿ ‘ಕಟ್ಟಿಗೆ’, ಕೇವಲ ಒಂದು ಕೆಜಿಗೆ 7 ಲಕ್ಷಕ್ಕಿಂತ ಅಧಿಕ ಬೆಲೆ!
ಕೆಲವು ಮರಗಳು ತುಂಬಾ ದುಬಾರಿಯಾಗಿವೇ ಅಲ್ಲದೇ ಕೆಲವು ಮರಗಳು ಬಹಳಷ್ಟು ಅಪರೂಪವಾಗಿವೆ. ಅಂದಹಾಗೆ, ಶ್ರೀಗಂಧದ ಮರವನ್ನು ಸಾಮಾನ್ಯವಾಗಿ ಅತ್ಯಂತ ದುಬಾರಿ ಎಂದು ಪರಿಗಣಿಸಲಾಗುತ್ತದೆ, ಇದರ ಬೆಲೆ ಕೆ.ಜಿ.ಗೆ 5,000 ರಿಂದ 6,000 ರೂ. ಆದರೆ ಜಗತ್ತಿನಲ್ಲಿ ಇದಕ್ಕಿಂತ ಹೆಚ್ಚು ದುಬಾರಿಯಾದ ಒಂದು ಮರವಿದೆ ಅದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅದು ಶ್ರೀಗಂಧದ ಮರಕ್ಕಿಂತ ಅನೇಕ ಪಟ್ಟು ಹೆಚ್ಚು ದುಬಾರಿಯಾಗಿದೆ. ಶ್ರೀಮಂತ ದೇಶವು ಕೂಡ ಈ ಮರವನ್ನು ಖರೀದಿಸುವ ಮೊದಲು ಖಂಡಿತವಾಗಿಯೂ ಎರಡು ಬಾರಿ ಯೋಚಿಸುತ್ತದೆ. ಈ ಮರವನ್ನು ‘ಆಫ್ರಿಕನ್ ಬ್ಲ್ಯಾಕ್ ವುಡ್’ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಈ ಮರದ ಕೇವಲ ಒಂದು ಕಿಲೋಗ್ರಾಂನ ಬೆಲೆ ಎಂಟು ಸಾವಿರ ಪೌಂಡ್ಗಳು, ಅಂದರೆ ಭಾರತೀಯ ರೂಪಾಯಿ ಪ್ರಕಾರ ಏಳು ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ಈ ಬೆಲೆಯಲ್ಲಿ ನೀವು ಒಂದು ಉತ್ತಮ ಐಷಾರಾಮಿ ಕಾರನ್ನು ಖರೀದಿಸಬಹುದು.

ಇತರ ಮರಗಳಿಗೆ ಹೋಲಿಸಿದರೆ, ಆಫ್ರಿಕನ್ ಬ್ಲ್ಯಾಕ್ ವುಡ್ ಮರವು ಭೂಮಿಯ ಮೇಲೆ ಬಹಳ ವಿರಳವಾಗಿದೆ. ಅದರ ಎತ್ತರ ಸುಮಾರು 25-40 ಅಡಿಗಳಿಷ್ಟಿದೆ. ಆಫ್ರಿಕನ್ ಬ್ಲ್ಯಾಕ್ ವುಡ್ಸ್ ಮಧ್ಯ ಮತ್ತು ದಕ್ಷಿಣ ಆಫ್ರಿಕಾದ 26 ದೇಶಗಳಲ್ಲಿ ಕಂಡುಬರುತ್ತದೆ. ಅವು ಹೆಚ್ಚಾಗಿ ಒಣ ಸ್ಥಳಗಳಲ್ಲಿ ಕಂಡುಬರುತ್ತವೆ. ಮರವು ಸಂಪೂರ್ಣವಾಗಿ ಬೆಳೆಯಲು ಸುಮಾರು 60 ವರ್ಷಗಳು ಬೇಕಾಗುತ್ತವೆ. ಕೀನ್ಯಾ ಮತ್ತು ಟಾಂಜಾನಿಯಾದಂತಹ ದೇಶಗಳಲ್ಲಿ, ಅಕ್ರಮವಾಗಿ ಮರ ಕಳ್ಳಸಾಗಣೆ ಮಾಡುವದರಿಂದ ಈ ಮರದ ಸವರುವಿಕೆಯನ್ನು ಮಾಡುವದರಿಂದ ಈ ಮರಗಳು ಬಹಳಷ್ಟು ವಿರಳ ಪ್ರಮಾಣದಲ್ಲಿ ಕಂಡುಬರುವವು. ಅಲ್ಲದೆ ಮರಗಳ ಸಂಖ್ಯೆಯಲ್ಲಿ ತುಂಬಾ ಇಳಿಕೆ ಕಂಡು ಬರುತ್ತಿದೆ.

ಆಫ್ರಿಕನ್ ಬ್ಲ್ಯಾಕ್ವುಡ್ ಮರವನ್ನು ಮುಖ್ಯವಾಗಿ ಕ್ಲಾರಿನೇಟ್, ಕೊಳಲು ಮತ್ತು ಗಿಟಾರ್ನಂತಹ ಉಪಕರಣಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ, ಈ ಮರದಿಂದ ಬಲವಾದ ಮತ್ತು ಬಾಳಿಕೆ ಬರುವ ಪೀಠೋಪಕರಣಗಳನ್ನು ಸಹ ತಯಾರಿಸಲಾಗುತ್ತದೆ, ಆದರೆ ಅವು ತುಂಬಾ ದುಬಾರಿಯಾಗಿದೆ. ಅವು ತುಂಬಾ ದುಬಾರಿಯಾಗಿದ್ದು ಸಾಮಾನ್ಯ ಜನರು ಅವುಗಳನ್ನು ಖರೀದಿಸಲಾರರು.