ವೈರಲ್ ಆಯ್ತು ಪಕ್ಕಾ ದೇಸಿ ಐಡಿಯಾದ ವಿಡಿಯೋ! ಸ್ಕೂಟರ್ ಸ್ಟಾರ್ಟ್ ಮಾಡುತ್ತಲೇ ಉಸುಕಿನಿಂದ ತುಂಬಿದ ಚೀಲ ನೇರ ಕಟ್ಟಡದ ಮೇಲಿನ ಅಂತಸ್ತಿಗೆ…

ಒಂದು ನಿಶ್ಚಿತವಾಗಿ ಹೇಳಲು ಸಾಧ್ಯ, ಅದೇನೆಂದರೆ ಜವಾರಿ ಐಡಿಯಾಗಳನ್ನು ಹುಡುಕುವಲ್ಲಿ ಭಾರತೀಯರ ಕೈ ಹಿಡಿಯಲು ಯಾರಿಗೂ ಸಾಧ್ಯವಿಲ್ಲ ಎನಿಸುತ್ತೆ ಅಲ್ವಾ? ಈಗ ಇದಕ್ಕೆ ಮತ್ತೊಂದು ಉದಾಹರಣೆಯನ್ನು ನೀಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಒಳ್ಳೊಳ್ಳೆಯ ಇಂಜಿನಿಯರ್ ಗಳು ಸಹ ತಲೆ ಚಚ್ಚಿಕೊಳ್ಳುತ್ತಿದ್ದಾರೆ.

ಕಟ್ಟಡಗಳು ನಡೆದ ಸ್ಥಳಗಳಲ್ಲಿ ಉಸುಕು ಮತ್ತು ಸಿಮೆಂಟ್ ತುಂಬಿದ ಚೀಲಗಳನ್ನು ಹೊತ್ತುಕೊಂಡು ಕೆಲಸಗಾರರು ಹೊಟ್ಟೆಯ ಪಾಡಿಗಾಗಿ ಎಷ್ಟೊಂದು ಮೇಲಿನ ಅಂತಸ್ತುಗಳಿಗೆ ಹೋಗಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದೇ ಕೆಲಸವನ್ನು ಒಬ್ಬ ಕಾರ್ಮಿಕನು ತನ್ನ ಐಡಿಯಾದಿಂದ ತುಂಬಾ ಸರಳ ಮಾಡಿದ್ದಾನೆ. ಈ ಕಾರ್ಮಿಕ ಮಾಡಿದ ಐಡಿಯಾವನ್ನು ಎಲ್ಲರೂ ಅನುಸರಿಸಿದರೆ ಕಾರ್ಮಿಕರ ಈ ಶ್ರಮ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ತುಂಬಾ ಕಷ್ಟದ ಕೆಲಸವನ್ನು ಈತ ತುಂಬಾ ಸರಳವಾಗಿ ಮಾಡಿದ್ದಾನೆ.

ಪ್ರಸ್ತುತ ವಿಡಿಯೋದಲ್ಲಿ ಒಬ್ಬನು ಸ್ಕೂಟರ್ ಮೇಲೆ ಕುಳಿತಿದ್ದಾನೆ. ಆಟ ಸ್ಕೂಟರ್ ಸ್ಟಾರ್ಟ್ ಮಾಡುತ್ತಲೇ ಉಸುಕಿನಿಂದ ತುಂಬಿದ ಚೀಲ ನೇರ ಮೇಲಿನ ಅಂತಸ್ತಿಗೆ ಹೋಗಿ ಮುಟ್ಟಿದೆ. ಈತ ತನ್ನ ಸ್ಕೂಟರ್ ನ ಹಿಂದಿನ ಚಕ್ರವನ್ನು ತೆಗೆದು ಅಲ್ಲಿ ಮೋಟರ್ ಅಳವಡಿಸಿದ್ದಾನೆ. ಹೀಗಾಗಿ ಸ್ಕೂಟರ್ ಸ್ಟಾರ್ಟ್ ಮಾಡುತ್ತಲೇ ಮೋಟಾರ್ ಸ್ಟಾರ್ಟ್ ಆಗಿ ಹಗ್ಗದಿಂದ ಕಟ್ಟಿದ ಚೀಲ ನೇರ ಎಲ್ಲಿ ಬೇಕಲ್ಲಿ ಯಾವ ಅಂತಸ್ತಿಗೂ ಕಳಿಸಲು ಬರುತ್ತದೆ. ಈ ದೇಸಿ ಜವಾರಿ ಐಡಿಯಾ ಹೇಗೆ ಮಾಡಿದ್ದಾನೆ ಎಂಬುದು ತಿಳಿಯಲು ಪ್ರತ್ಯಕ್ಷವಾಗಿ ವಿಡಿಯೋ ನೋಡುವುದರಲ್ಲಿ ಮಜಾ ಇದೆ ಎಂದೆನಿಸುತ್ತೆ.

ನೋಡಿ ಈ ವಿಡಿಯೋ…

ಈ ವೀಡಿಯೋವನ್ನು ಟ್ವಿಟರ್ ನಲ್ಲಿ pritiesanjay ಹೆಸರಿನಿಂದ ಶೇರ್ ಮಾಡಲಾಗಿದೆ. ಒಬ್ಬ ಶ್ರಮಿಕ ಕಂಡು ಹಿಡಿದ ಈ ಜವಾರಿ ಐಡಿಯಾ ನೇಟಿಜನ್ಸ್ ಗಳಿಗೆ ಭರ್ಜರಿ ಇಷ್ಟವಾಗಿದೆ. ಕಾರಣ ಈ ವಿಡಿಯೋಗೆ ಇಲ್ಲಿಯವರೆಗೆ ಸಾವಿರಾರು ವೀಕ್ಷಣೆ ದೊರಕಿವೆ. ಮತ್ತು ಲೈಕ್ಸ್ ಗಳು ಸಹ ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ತರತರದ ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ. ಈ ರೀತಿಯ ಐಡಿಯಾ ಜಗತ್ತಿನ ಯಾವ ಮೂಲೆಯಲ್ಲಿಯೂ ಕಾಣಸಿಗದು ಎಂದಿದ್ದಾರೆ.