ಚಿತ್ರ ಜೂಮ್ ಮಾಡಿ ನೋಡಬಹುದು; ಈ ಉದ್ದನೆಯ ಕಪ್ಪು-ಬಿಳಿ ಗೆರೆಗಳಲ್ಲಿ ಏನಡಗಿದೆ? ಎಂಬುದನ್ನು ನಿಮ್ಮ ಕಣ್ಣುಗಳು ಶೋಧಿಸಲು ಸಾಧ್ಯವೇ?

ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ತಿನ್ನುತ್ತವೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂತ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದೇ ಇಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂತ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಬೇರೆ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೀಡು ಮಾಡಿದೆ. ಕಾಣಲು ಬಾಕ್ಸ್ ಗಳ ಮೇಲಿನ ಬಾರ್ಕೋಡ್ ತರ ಕಾಣುತ್ತಿದೆ. ಆದರೆ ಅದರಲ್ಲೊಂದು ವಿಶೇಷವಾದ ಚಿತ್ರ ಅಡಗಿದೆ.

ಈ ಫೋಟೋ ನೋಡಿದಾಗ ಅದರಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಬರೀ ಉದ್ದ ಗೆರೆಗಳು ಕಂಡುಬರುತ್ತವೆ. ಈ ಫೋಟೋದಲ್ಲಿ ವಿಶೇಷವೇನು ಕಂಡುಬರುತ್ತದೆ ಎಂದು ಕೇಳಿದಾಗ ಅದರಲ್ಲೇನು ವಿಶೇಷ ಬರೀ ಉದ್ದನೆಯ ಗೆರೆಗಳು ಮಾತ್ರ ಕಂಡುಬರುತ್ತಿವೆ ಎಂದು ಹೇಳಬಹುದು. ಆದರೆ ಸೂಕ್ಷ್ಮದೃಷ್ಟಿಯನ್ನಿಟ್ಟು ನೋಡಿದಾಗ ಗೊತ್ತಾಗುತ್ತದೆ ಈ ಗೆರೆಗಳಲ್ಲಿ ಒಂದು ಸುಂದರವಾದ ಚಿತ್ರ ಅಡಗಿದೆ ಎಂಬುದು.

ಹಾಗಾದರೆ ಮಿತ್ರರೇ ಶೋಧಿಸಿ ಮತ್ತು ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಏನು ಕಂಡುಬಂತು ಎಂಬುದನ್ನು ಕಮೆಂಟ್ ಮಾಡಿ ಬರೆಯಿರಿ. ಈ ಚಿತ್ರದಲ್ಲಿಯ ವಿಶೇಷತೆಯನ್ನು ಶೋಧಿಸುವ ಸಲುವಾಗಿ ನಿಮಗೆ ಈ ಚಿತ್ರದ ಕಡೆಗೆ ತುಂಬಾ ಗಮನ ಹರಿಸಿ ಏಕಾಗ್ರತೆಯಿಂದ ನೋಡಬೇಕಾಗಿದೆ. ಇದನ್ನು ಶೋಧಿಸುವ ಸಲುವಾಗಿ ನಾವು ಒಂದು ಕ್ಲೂ ಕೊಡುತ್ತೇವೆ. ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ನೋಡುವಾಗ, ನಾವು ನಿರಾಕರಿಸುವಾಗ ಅಥವಾ ಬೇಡವೆನ್ನಲು ಕುತ್ತಿಗೆಯನ್ನು ಹೇಗೆ ಅಲುಗಾಡಿಸುತ್ತೇವೆ ಹಾಗೆ ಮಾಡುತ್ತಾ ಈ ಚಿತ್ರದ ಕಡೆಗೆ ನೋಡಿ (Shaking Head lets you see optical illusion). ಆಗ ನಿಮಗೆ ಈ ಚಿತ್ರದಲ್ಲೊಂದು ವಿಶೇಷತೆ ಗೋಚರಿಸುವುದು. ಆಗ ನಿಮಗೆ ಈ ಕಪ್ಪು ಬಿಳಿ ಗೆರೆಗಳ ಮಧ್ಯದಲ್ಲಿಂದ ನಿಧಾನವಾಗಿ ಎರಡು ಕಣ್ಣುಗಳು ನಿಮ್ಮ ಕಡೆ ನೋಡುವ ಹಾಗೆ ಕಂಡುಬರುತ್ತದೆ. ಜೊತೆಗೆ ಎರಡು ಕಿವಿ ಮತ್ತು ಮುಖವೂ ಸಹ ಗೋಚರಿಸುವುದು. ಈಗ ಹೇಳಿ ಅಲ್ಲಿ ಕಾಣುವ ಮುಖ ಯಾರದು ಅಂತ. ನಿಮ್ಮ ಉತ್ತರ ನಿಜವಾಗಿದೆ ಇಲ್ಲ ಇಲ್ಲವೆನ್ನುವುದು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ದ ಸನ್ ವೆಬ್ಸೈಟ್ ನೀಡಿದ ರಿಪೋರ್ಟ್ ಪ್ರಕಾರ, ಡಾಕ್ಟರ್ ಮಿಶೆಲ್ ಡಿಕಿನ್ಸನ್ ಅವರು 2019ರಲ್ಲಿ ಮೊದಲ ಬಾರಿಗೆ ಈ ಫೋಟೋವನ್ನು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದರು. ಆಗ ಅನೇಕ ನೇಟಿಜನ್ಸ್ ಗಳು ಈ ಫೋಟೋ ನೋಡಿ ಆಶ್ಚರ್ಯ ವ್ಯಕ್ತ ಮಾಡಿದರು. ಈಗ ಈ ಫೋಟೋ ನೋಡಿದ ನಿಮಗೂ ಸಹ ಆಶ್ಚರ್ಯವಾಗಿರಬಹುದು. ಈ ಆಪ್ಟಿಕಲ್ ಇಲ್ಯೂಜನ್ ಫೋಟೋದಲ್ಲಿ ಒಂದು ಬೆಕ್ಕಿನ ಮುಖ ಸ್ಪಷ್ಟವಾಗಿ ಕಂಡುಬರುತ್ತಿದೆ ಅಲ್ವಾ?