ಸದ್ಯ ಭರ್ಜರಿ ವೈರಲ್ ಆಗುತ್ತಿರುವ ಬೆಕ್ಕು ಮತ್ತು ಇಲಿಯ ಜಗಳದ ವಿಡಿಯೋದಲ್ಲಿ ಇಲಿಯ ಡೇರಿಂಗ್ ಗೆ ಫಿದಾ ಆದ ನೇಟಿಜನ್ಸ್! ನೀವೂ ಒಮ್ಮೆ ನೋಡಿಯೇ ಬಿಡಿ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋ ಮತ್ತು ಫೋಟೋಗಳ ಮೇಲೆ ವಿಶ್ವಾಸವಿಡುವದೇ ಕಠಿಣವಾಗಿ ಬಿಡುತ್ತದೆ. ಕಾರಣ ಈಗ ವಿಶ್ವಾಸಕ್ಕೆ ದೂರವಾದ ವಿಡಿಯೋ ಒಂದು ಭರ್ಜರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದ್ದರಿಂದ ಅದನ್ನೇ ತೋರಿಸಲು ನಿಮಗಾಗಿ ಇಲ್ಲಿ ತಂದಿದ್ದೇವೆ.
ಜನಪ್ರಿಯ ಟಾಮ್ ಅಂಡ್ ಜೆರ್ರಿ ಶೋ ಮಕ್ಕಳಂತೂ ಬಿಡಿ ಎಷ್ಟೋ ದೊಡ್ಡವರು ಸಹ ತುಂಬಾ ಇಷ್ಟದಿಂದ ನೋಡುವ ಕಾರ್ಟೂನ್ ಶೋ ಆಗಿದೆ. ಈಗ ಇದೇ ರೀತಿಯ ನಿಜವಾದ ಟಾಮ್ ಅಂಡ್ ಜೆರ್ರಿಯನ್ನು ನೀವು ಇಲ್ಲಿ ನೋಡಬಹುದು. ಕಾರ್ಟೂನ್ ನಲ್ಲಿ ಸದಾ ಬೆಕ್ಕನ್ನು ಗೋಳು ಹೊಯ್ದುಕೊಳ್ಳುವ ಇಲಿಯು ಇಲ್ಲಿಯೂ ಬೇಕ್ಕಿನೆದರು ತನ್ನ ಧಾಡಸಿತನವನ್ನು ತೋರಿಸಿದೆ. ಅದರ ಇದೇ ಡೆರಿಂಗ್ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.
ಪ್ರಸ್ತುತ ವಿಡಿಯೋದಲ್ಲಿ ಬೆಕ್ಕು ಇಲಿಯ ಮೇಲೆ ಅಟ್ಯಾಕ್ ಮಾಡುತ್ತದೆ. ಆದರೆ ಇಲ್ಲಿ ಇಲಿಯು ಬೆಕ್ಕಿಗೆ ಹೆದರಿ ತನ್ನ ಜೀವ ಭಯದಿಂದ ಓಡಿ ಹೋಗದೆ ತಿರುಗಿ ಹಲ್ಲೆ ಮಾಡಿದೆ. ಈ ವಿಡಿಯೋ ನೋಡಿ ನೇಟಿಜನ್ಸ್ ಗಳು ಇಲಿಯ ಧೈರ್ಯಕ್ಕೆ ವಾವ್ ಎಂದಿದ್ದಾರೆ. ಜೊತೆಗೆ ವಿಡಿಯೋ ನೋಡಿದವರು ಲೈಕ್ ಸಹ ಮಾಡುತ್ತಿದ್ದಾರೆ.
ಮೆಕ್ಕೆಜೋಳದ ಹತ್ತಿರ ಇಲಿಯು ಕುಳಿತಿರುವಾಗ ಬೆಕ್ಕು ಬಂದು ಇಲಿಯ ಮೇಲೆ ಅಟ್ಯಾಕ್ ಮಾಡುತ್ತದೆ. ಆಗ ಇಲಿಯು ಬೆಕ್ಕಿನ ಈ ಬೆದರಿಕೆಗೆ ಹೆದರಿ ಓಡಿ ಹೋಗುವುದಿಲ್ಲ, ಬದಲಾಗಿ ಅದರ ಜೊತೆಗೆ ಕಾದಾಟಕ್ಕೆ ನಿಲ್ಲುತ್ತದೆ. ಮತ್ತು ಅಲ್ಲಿಯೇ ಹೆದರದೆ ನಿಲ್ಲುತ್ತದೆ. ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.
ನೋಡಿ ಈ ವಿಡಿಯೋ…
ವಿಡಿಯೋ ನೋಡಿದ ನೇಟಿಜನ್ಸ್ ಗಳು ತುಂಬಾ ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ. ವೀಡಿಯೋ ನೋಡಿದ ಒಬ್ಬ ಯೂಸರ್ ಮೊದಲು ಆ ಬೆಕ್ಕಿಗೆ ಓಡಿಸಿ ಕಳುಹಿಸಿ ಎಂದು ಹೇಳಿದ್ದಾನೆ. ಪ್ರಸ್ತುತ ವಿಡಿಯೋವನ್ನು nature._.baba ಹೆಸರಿನ ಇನ್ಸ್ಟಾಗ್ರಾಮ್ ನಿಂದ ಶೇರ್ ಮಾಡಲಾಗಿದೆ.