ಡ್ರೈವ್ ಮಾಡುತ್ತಿರುವಾಗ ಫೋನಿನಲ್ಲಿ ಮಾತನಾಡುವುದು ಇನ್ನು ಮುಂದೆ ಅಪರಾಧವಲ್ಲ! ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ.

ಇತ್ತೀಚೆಗೆ ಸಾರಿಗೆ ನಿಯಮಗಳನ್ನು ತುಂಬಾ ಕಟ್ಟುನಿಟ್ಟಾಗಿ ಮಾಡಿದ್ದಾರೆ. ಸಾರಿಗೆ ನಿಯಮಗಳನ್ನು ಪರಿಪಾಲಿಸದೇ ಇದ್ದಾಗ ತುಂಬಾ ಹೆಚ್ಚಿನ ಶಿಕ್ಷೆ ಮತ್ತು ಫೈನ್ ಕಟ್ಟುವ ಹಣದಲ್ಲಿ ಹೆಚ್ಚಳವಾಗಿದೆ. ಅದರಲ್ಲಿಯೇ ವಾಹನವನ್ನು ಚಲಾಯಿಸುವಾಗ ಫೋನಿನಲ್ಲಿ ಮಾತನಾಡುವುದು ಸಹ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಈ ರೀತಿ ಮಾಡಿದ್ದನ್ನು ಟ್ರಾಫಿಕ್ ಪೊಲೀಸರು ಗಮನಿಸಿದರೆ ಸಿಕ್ಕಾಪಟ್ಟೆ ಫೈನ್ ವಸೂಲಿ ಮಾಡುತ್ತಾರೆ. ಆದರೆ ಇನ್ನು ಮುಂಬರುವ ಸಮಯದಲ್ಲಿ ಈ ನಿಯಮದಲ್ಲಿ ರಿಯಾಯಿತಿ ಸಿಗಲಿದೆ.

ವಾಹನವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಫೋನಿನಲ್ಲಿ ಮಾತನಾಡುವುದು ಇನ್ನು ಮುಂದೆ ಅಪರಾಧವಲ್ಲ ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಉಚ್ಚರಿಸಿದ್ದಾರೆ. ಆದರೆ ಅದರ ಜೊತೆಗೆ ಕೆಲವು ನಿಯಮಗಳನ್ನು ಪರಿಪಾಲಿಸಲು ಹೇಳಿಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಈ ಬಗ್ಗೆ ಲೋಕಸಭೆಯಲ್ಲಿ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ನಿತಿನ್ ಗಡ್ಕರಿ ಇವರು ಸಾರಿಗೆ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂತಹ ಅಮೂಲಾಗ್ರವಾದ ಬದಲಾವಣೆಗಳನ್ನು ಮಾಡುವದರ ಜೊತೆಗೆ ಅನೇಕ ಮಹತ್ವದ ರೋಡ್ ಕಾರಿಡಾರ್ ಗಳನ್ನು ಕಡಿಮೆ ಸಮಯದಲ್ಲಿ ಮುಗಿಸಿ ಸಾರಿಗೆಯಲ್ಲಿ ಕ್ರಾಂತಿಯನ್ನು ತಂದಿದ್ದಾರೆ. ಹೀಗಾಗಿಯೇ ಇವರಿಗೆ ಗಡ್ಕರಿ ಬದಲಾಗಿ ರೋಡ್ಕರಿ ಎಂದು ಪ್ರೀತಿಯಿಂದ ಕರೆಯುತ್ತಾರೆ.

ನಿತಿನ್ ಗಡ್ಕರಿ ಅವರು ಹೇಳುವ ಹಾಗೆ, ವಾಹನ ಡ್ರೈವ್ ಮಾಡುವಾಗ ಫೋನಿನಲ್ಲಿ ಮಾತನಾಡಿ, ಆದರೆ ಫೋನ್ ನಿಮ್ಮ ಕೈಯಲ್ಲಿ ಇರಬಾರದು. ಬದಲಾಗಿ ಹ್ಯಾಂಡ್ಸ್ ಫ್ರೀ ಉಪಕರಣಗಳಾದ ಏರ್ ಫೋನ್ ಬ್ಲೂಟೂತ್ ಗಳನ್ನು ಉಪಯೋಗಿಸಿ ಫೋನಿನಲ್ಲಿ ಮಾತನಾಡಬಹುದು. ಫೋನಿನಲ್ಲಿ ಮಾತನಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಿಮ್ಮ ಪಾಕೆಟ್ ನಲ್ಲಿ ಅಥವಾ ಬದಿಯಲ್ಲಿ ಇರಬೇಕು. ಈ ಪದ್ಧತಿಯಿಂದ ಒಂದು ವೇಳೆ ನೀವು ಫೋನಿನಲ್ಲಿ ಮಾತನಾಡುವದಾದರೆ ಅದು ಅಪರಾಧವೆಂದು ಪರಿಗಣಿಸುವದಿಲ್ಲ ಎಂದು ಗಡ್ಕರಿ ಅವರು ಎಚ್ಚರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಟ್ರಾಫಿಕ್ ಪೊಲೀಸರು ನಿಮ್ಮಿಂದ ಫೈನ್ ವಸೂಲಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಪೊಲೀಸರು ನಿಮ್ಮ ಜೊತೆಗೆ ಹೀಗೆ ನಡೆದದ್ದೇ ಆದರೆ ನೀವು ಕೋರ್ಟಿನ ಮೆಟ್ಟಲೇರಬಹುದು. ಈ ನಿಯಮವು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ವಿಚಾರ ಮಾಡುತ್ತಿರುವ ಸರಕಾರದ ಧ್ಯೇಯಕ್ಕೆ ಹೊಂದಿಕೊಳ್ಳುತ್ತದೆ ಎಂದು ಈ ಸಂದರ್ಭದಲ್ಲಿ ಗಡ್ಕರಿ ಹೇಳಿದ್ದಾರೆ.