ಹೊಡೆಯಲು ಬಂದವರನ್ನು ಎದುರಿಸಲು ಶಕ್ತಿಯೇ ಬೇಕು ಎಂದೇನಿಲ್ಲ; ಹೀಗೆ ಇನ್ಸ್ಟಂಟ್ ಐಡಿಯಾ ಇದ್ರೆ ಸಾಕು! ಎಲ್ಲರೂ ಸಡನ್ ಎಸ್ಕೇಪ್…ವಿಡಿಯೋ ಆಯ್ತು ವೈರಲ್.

ಶಕ್ತಿಗಿಂತ ಯುಕ್ತಿ ಮೇಲು ಈ ನಾಣ್ಣುಡಿಯನ್ನು ನಾವು ಚಿಕ್ಕಂದಿನಿಂದಲೂ ಶಾಲೆಯಲ್ಲಿ ಕೇಳುತ್ತ ಬಂದಿದ್ದೇವೆ. ನಮ್ಮ ರಾಜರುಗಳು ಬಲಾಢ್ಯ ಸೈನ್ಯವನ್ನು ಹೊಂದಿದ ಎದುರಾಳಿಗಳನ್ನು ಬರೀ ಯುಕ್ತಿಯಿಂದಲೇ ಸೋಲಿಸಿ ಇತಿಹಾಸದಲ್ಲಿ ಅಮರರಾಗಿದ್ದನ್ನು ಓದಿದ್ದೇವೆ.

ಬಹುಶಃ ಹೊಡೆಯಲು ಅಥವಾ ಹಣವನ್ನು ದೋಚಲು ಪೆಟ್ರೋಲ್ ಪಂಪಿಗೆ ಬಂದ ನಾಲ್ಕೈದು ಜನರನ್ನು ಪೆಟ್ರೋಲ್ ಪಂಪಿನ ಮೇಲೆ ಕೆಲಸ ಮಾಡುವ ಕಾರ್ಮಿಕನು ತುಂಬಾ ಸ್ಮಾರ್ಟ್ ಹಾಗೂ ಇನ್ಸ್ಟಂಟ್ ಐಡಿಯಾದಿಂದ ಒಂದೇ ಒಂದು ಹೊಡೆತವನ್ನು ಸಹ ನೀಡದೆ ಸ್ವಂತಕ್ಕೂ ಗಾಯ ಮಾಡಿಕೊಳ್ಳದೆ ಬಂದ ದಾರಿಗೆ ಸುಂಕವಿಲ್ಲದಂತೆ ಅವರನ್ನು ಓಡಿಸಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಕಾಣುವ ಹಾಗೆ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುವ ಕಾರ್ಮಿಕ ವಾಹನವೊಂದಕ್ಕೆ ಪೆಟ್ರೋಲ್ ತುಂಬುತ್ತಿದ್ದನು. ಸರಿಯಾಗಿ ಅದೇ ಸಮಯಕ್ಕೆ ಬೇರೊಂದು ವಾಹನದಿಂದ ಮೂರು ಜನ ಆತನ ಮೇಲೆ ಅಟ್ಯಾಕ್ ಮಾಡಲು ಬರುತ್ತಾರೆ. ಕಾರ್ಮಿಕ ತನ್ನ ಮುಂದೆ ವಾಹನವು ಬಂದು ನಿಲ್ಲುವವರೆಗೂ ಸಹಜವಾಗಿಯೇ ತನ್ನ ಕೆಲಸದಲ್ಲಿ ತೊಡಗಿದ್ದನು. ಯಾವಾಗ ಅವರ ಅಟ್ಯಾಕ್ ಮಾಡುವ ಪೋಸಿಶನ್ ಕಾರ್ಮಿಕನಿಗೆ ತಿಳಿಯಿತು ಆಗ ಒಮ್ಮೆಲೆ ಅವನ ಮೈಂಡ್ ಎಚ್ಚೆತ್ತುಕೊಂಡು ಸಡನ್ ಆಗಿ ಕಾರ್ಮಿಕನು ಹೊಡೆಯಲು ಬಂದ ದುಷ್ಟರ ಮೇಲೆ ಕೈಯಲ್ಲಿದ್ದ ಪೆಟ್ರೋಲ್ ಪಂಪಿನ ಹ್ಯಾಂಡಲ್ ಬಾರ್ ನ್ನು ಪ್ರೆಸ್ ಮಾಡಿ ಪೆಟ್ರೋಲ್ ಚೆಲ್ಲಲು ಪ್ರಾರಂಭಿಸಿದನು. ದುಷ್ಟರಿಗೆ ತಮ್ಮ ಮೇಲಾದ ಅಕಸ್ಮಿಕ ದಾಳಿಯಿಂದ ಒಮ್ಮೆಲೆ ಕಕ್ಕಾಬಿಕ್ಕಿಯಾಗಿ ಮುಂದೆ ಏನು ಮಾಡಬೇಕೆಂಬುದೇ ತೋಚಿಲಿಲ್ಲ. ಪೆಟ್ರೋಲ್ ಮೈಮೇಲೆ ಚೆಲ್ಲಿದ್ದರಿಂದ ಹೆದರಿ ಪ್ರಾಣಭಯದಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಕ್ಷಣಾರ್ಧದಲ್ಲಿ ಅಲ್ಲಿಂದ ಪಲಾಯನಗೈದಿದ್ದಾರೆ. ಶಕ್ತಿಗಿಂತ ಯುಕ್ತಿ ಯಾವತ್ತೂ ಮೇಲು ಎಂಬುದು ಮತ್ತೊಮ್ಮೆ ಈ ವಿಡಿಯೋದಿಂದ ಸಾಬೀತಾಯಿತು.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ superautovip ಈ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 4 ಲಕ್ಷ ಜನರು ವೀಕ್ಷಿಸಿದ್ದಾರೆ.