ಹುಡುಗಿಯ ಜೀವ ಉಳಿಸಲು ಚಲಿಸುತ್ತಿರುವ ಟ್ರೈನ್ ಮುಂದೆಯೇ ಜಿಗಿದನು! ಮುಂದಿನ ಆಶ್ಚರ್ಯವನ್ನು ಸ್ವಂತ ಕಣ್ಣುಗಳಿಂದಲೇ ನೋಡಿ ಈ ವೈರಲ್ ವಿಡಿಯೋದಲ್ಲಿ…
ಮನುಷ್ಯನ ಅದೃಷ್ಟ ಚೆನ್ನಾಗಿದ್ದರೆ ಸಂಪೂರ್ಣ ತಯಾರಿಯಲ್ಲಿ ಬಂದ ಯಮರಾಜನು ಸಹ ಕೆಲವೊಮ್ಮೆ ಬರಿಗೈಲಿ ವಾಪಸ್ ಹೋಗಬೇಕಾಗುತ್ತದೆ. ಇದರ ಉದಾಹರಣೆ ನೀಡುವ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸುತ್ತಾಡುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ಘಟನೆ ಮಧ್ಯಪ್ರದೇಶದ ಬಾರಖೇಡಿ ಹೆಸರಿನ ಸ್ಟೇಷನ್ ನಲ್ಲಿ ಘಟಿಸಿದೆ. ಸದ್ಯ ಈ ವಿಡಿಯೋ ಚೆನ್ನಾಗಿಯೇ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಒಂದು ಹುಡುಗಿಯ ಜೀವ ಉಳಿಸಲು ತನ್ನ ಪ್ರಾಣದ ಹಂಗನ್ನೇ ತೊರೆದು ಚಲಿಸುತ್ತಿರುವ ಗೂಡ್ಸ್ ಟ್ರೈನ್ ಮುಂದೆ ಜಿಗಿದಿದ್ದಾನೆ. ಪ್ರಸ್ತುತ ವ್ಯಕ್ತಿಯ ಹೆಸರು ಮೊಹಮ್ಮದ್ ಮಹಬೂಬ್ ಇದ್ದು ಘಟನೆ 5 ಫೆಬ್ರುವರಿಯಂದು ರಾತ್ರಿ 8 ಗಂಟೆಯ ಸುಮಾರಿಗೆ ನಡೆದಿದೆ. ಪಿಟಿಐ ನೀಡಿದ ರಿಪೋರ್ಟ್ ಪ್ರಕಾರ ಹುಡುಗಿಯೊಬ್ಬಳು ಕೈಯಲ್ಲಿ ಲಗೇಜ್ ತೆಗೆದುಕೊಂಡು ರೈಲ್ವೇ ಟ್ರ್ಯಾಕ್ ಕ್ರಾಸ್ ಮಾಡುತ್ತಿದ್ದ ಸಂದರ್ಭದಲ್ಲಿ ಗೂಡ್ಸ್ ಗಾಡಿಯೊಂದು ಸರಿಯಾಗಿ ಅದೇ ಸಮಯಕ್ಕೆ ಧಾವಿಸಿ ಬಂದಿದೆ. ಆಕಸ್ಮಿಕವಾಗಿ ಬಂದ ಟ್ರೈನ್ ನೋಡಿ ಹುಡುಗಿ ಗಾಬರಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅದೇ ಟ್ರೈನ್ ಟ್ರ್ಯಾಕ್ ಮೇಲೆ ಆಯತಪ್ಪಿ ಬಿದ್ದಿದ್ದಾಳೆ.
ಅದನ್ನು ನೋಡಿದ ಅಲ್ಲಿಯ ಜನರು ಸಹಾಯಕ್ಕಾಗಿ ಗೊಗರೆದಿದ್ದಾರೆ. ಅಲ್ಲಿಯೇ ಇದ್ದ ಮಹಮ್ಮದ್ ಮಹಿಬೂಬ್ ಸ್ವಲ್ಪವೂ ಹಿಂದೆ ಮುಂದೆ ನೋಡದೆ ಟ್ರ್ಯಾಕ್ ಮೇಲೆ ಜಿಗಿದು ಹುಡುಗಿಯ ಕಡೆಗೆ ಓಡುತ್ತ ಹೋಗಿ ಕೆಳಗೆ ಬಿದ್ದ ಹುಡುಗಿಗೆ ಟ್ರೈನ್ ಪಾಸ್ ಆಗುವವರೆಗೆ ತಲೆ ಮೇಲೆ ಮಾಡದಂತೆ ಅಲ್ಲಿಯೇ ಅಂದರೆ ಟ್ರ್ಯಾಕ್ ಮೇಲೆಯೇ ಹಿಡಿದಿದ್ದಾನೆ.
ನೋಡಿ ಈ ವಿಡಿಯೋ…
Incredible bravery! 37 year old Mehboob was returning to his factory when he and some other pedestrians saw a goods train they stopped to let it pass a girl standing with her parents in fell on the tracks Mehboob sprinted dragged kept her head down @manishndtv @GargiRawat pic.twitter.com/IDqQiBLAv7
— Anurag Dwary (@Anurag_Dwary) February 12, 2022
ಇದೇ ಸಂದರ್ಭದಲ್ಲಿ ಅಲ್ಲಿರುವ ಯಾರೋ ಒಬ್ಬರು ಪ್ರಸ್ತುತ ಘಟನೆಯ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಜೀವ ಉಳಿಸಿದ ವ್ಯಕ್ತಿಯನ್ನು ಬಾಯಿತುಂಬಾ ಹೊಗಳುತ್ತಿದ್ದಾರೆ.