ಇನ್ಸ್ಟಂಟ್ ಆಂಬ್ಯುಲೆನ್ಸ್ ಸರ್ವಿಸ್? ಅಪಘಾತದ ಸ್ಥಳದಲ್ಲಿಯೇ ಅಂಬುಲೆನ್ಸ್ ಕ್ಷಣಾರ್ಧದಲ್ಲಿ ರೆಡಿ! ನೋಡಿ ಈ ಸೂಪರ್ ವಿಡಿಯೋದಲ್ಲಿ…

ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುವ ವಿಡಿಯೋಗಳು ನೇಟಿಜನ್ಸ್ ಗಳಿಗೆ ಕೆಲವೊಂದು ಸಲ ತುಂಬಾ ಅದ್ಭುತವೆನಿಸುತ್ತದೆ. ಎಷ್ಟೋ ಘಟನೆಗಳು ಅಕಸ್ಮತ್ತಾಗಿ ಘಟಿಸುತ್ತವೆ. ನಾವು ಪೂರ್ವಭಾವಿಯಾಗಿ ಎಷ್ಟೇ ಪ್ರಯತ್ನಿಸಿದರೂ ನಿಯೋಜನೆಯ ಪ್ರಕಾರ ನಡೆಯುವದಿಲ್ಲ. ಆದರೆ ಕೆಲವೊಂದು ಘಟನೆಗಳು ಅಕಸ್ಮತ್ತಾಗಿ ನಡೆದರೂ ಅವು ಪೂರ್ವಯೋಜನೆಯಂತೆ ಕಂಡುಬರುತ್ತವೆ.

ಇದೇ ರೀತಿಯ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತಿದೆ. ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ jattwadi_.sarkar ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನಿಜಕ್ಕೂ ತುಂಬಾ ತಮಾಷೆಯಾಗಿದೆ.

ವಿಡಿಯೋ ರಾತ್ರಿಯ ಸಮಯದಲ್ಲಿಯದಿದೆ. ರಸ್ತೆಯ ಮೇಲೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾದ ಫುಟೇಜ್ ಇದಾಗಿದೆ. ಒಂದು ಸರ್ಕಲ್ನಲ್ಲಿ ಎರಡು ಕಡೆಯಿಂದ ಕಾರುಗಳು ಬರುತ್ತಿರುವುದು ಕಂಡು ಬರುತ್ತದೆ. ಆ ಕಾರುಗಳು ಮುಂದೆ ಬಂದಂತೆ ಎರಡೂ ಒಂದನ್ನೊಂದು ಡಿಕ್ಕಿ ಹೊಡೆದು ಹಾಗೆಯೇ ಮುಂದೆ ಸಾಗುತ್ತವೆ. ಆ ಎರಡು ಕಾರುಗಳಿಗೆ ಎದುರಾಗಿ ಕರೆಕ್ಟಾಗಿ ಅದೇ ಸಮಯಕ್ಕೆ ಅಂಬುಲೆನ್ಸ್ ಒಂದು ಅಲ್ಲಿಗೆ ಬರುತ್ತದೆ. ಈ ಎರಡು ಕಾರುಗಳು ಒಂದನ್ನೊಂದು ಡಿಕ್ಕಿಹೊಡೆದ ನಂತರ ಅಂಬುಲೆನ್ಸ್ ಚಾಲಕ ಅಲ್ಲಿಯೇ ತನ್ನ ಅಂಬುಲೆನ್ಸ್ ನ ಸೈರನ್ ಸ್ಟಾರ್ಟ್ ಮಾಡಿ ತನ್ನ ಕರ್ತವ್ಯಕ್ಕೆ ರೆಡಿಯಾಗುತ್ತಾನೆ. ಆಮೇಲೆ ಯೂಟರ್ನ್ ತೆಗೆದುಕೊಂಡು ಆಕ್ಸಿಡೆಂಟ್ ಆದ ಕಾರುಗಳ ಹಿಂದೆ ಹೋಗುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಹೀಗಾಗಿ ಈ ವಿಡಿಯೋಗೆ ಇನ್ಸ್ಟಂಟ್ ಸರ್ವಿಸ್ ಎಂಬ ಕ್ಯಾಪ್ಷನ್ ನೀಡಿ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ.

ನೋಡಿ ಈ ತಮಾಷೆಯ ವಿಡಿಯೋ…

ಇಲ್ಲಿ ಅಂಬುಲೆನ್ಸ್ ಚಾಲಕ ತನ್ನ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿರಬಹುದು. ಮನೆಗೆ ಹೋಗುವ ಸಮಯದಲ್ಲಿ ಕಣ್ಣಮುಂದೆ ನಡೆದ ಈ ದುರ್ಘಟನೆಯಿಂದ ಎಚ್ಚೆತ್ತ ಅಂಬುಲೆನ್ಸ್ ಚಾಲಕ ಮನೆಗೆ ಹೋಗುವುದನ್ನು ನಿಲ್ಲಿಸಿ ಕಣ್ಣೆದುರಿಗೆ ನಡೆದ ಕಾರು ಅಪಘಾತದಲ್ಲಿಯ ಗಾಯಾಳುಗಳಿಗೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಮೊದಲು ಆದ್ಯತೆ ನೀಡುತ್ತಾನೆ. ಆತನು ತನ್ನ ಕೆಲಸಕ್ಕೆ ತೋರಿಸಿದ ಪ್ರಾಮಾಣಿಕತನವು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.