ಆಕಾಶದಲ್ಲಿ ತೇಲಾಡುತ್ತ ಎರಡು ಗರುಡ ಪಕ್ಷಿಗಳು ಮಾಡಿದ ಅದ್ಭುತ ಡ್ಯಾನ್ಸ್ ನ ವಿಡಿಯೋ ವೈರಲ್! ನೇಟಿಜನ್ಸ್ ಗಳ ಮನಗೆದ್ದ ಜೋಡಿ ನೃತ್ಯ…

ನಿಸರ್ಗ ಮತ್ತು ಅದರ ರಚನೆ ತುಂಬಾನೇ ಸುಂದರವಾಗಿದೆ. ಇದನ್ನು ಗಮನಿಸುವ ಸೂಕ್ಷ್ಮ ಕಣ್ಣುಗಳು ಎಲ್ಲರೂ ಹೊಂದಿರುವುದಿಲ್ಲ. ಅದಕ್ಕೆ ಸಂಯಮ, ಸ್ಥಿರತೆ ಬೇಕಾಗಿರುತ್ತದೆ. ಅದು ಕೇವಲ ಕೆಲವೇ ಫೋಟೋ ಗ್ರಾಫರ್ ಮತ್ತು ಕ್ಯಾಮೆರಾ ಮ್ಯಾನ್ ಗಳ ಕಡೆಗೆ ಇರುತ್ತದೆ. ಇಂದಿನ ವೇಗದ ಯುಗದಲ್ಲಿ ಅಭಿರುಚಿ ಇದ್ದರೂ ನಿಸರ್ಗದ ಅದ್ಭುತ ವಿಷಯಗಳ ಕಡೆಗೆ ಗಮನ ಹರಿಸದೆ ಇದ್ದ ಕೆಲವು ನಿಸರ್ಗ ಪ್ರೇಮಿಗಳಿಗೆ ಯಾರೋ ಸೆರೆ ಹಿಡಿದಿದ್ದ ಅದ್ಭುತ ಸೀನ್ ಗಳನ್ನು ಸೋಶಿಯಲ್ ಮೀಡಿಯಾ ಮುಖಾಂತರ ಮತ್ತೊಮ್ಮೆ ನೋಡಬಹುದಾಗಿದೆ. ಕೆಲವೊಮ್ಮೆ ನಿಸರ್ಗದಲ್ಲಿ ಅದ್ಭುತ ದೃಶ್ಯಗಳು ಕ್ರಿಯೇಟ್ ಆಗುತ್ತಿರುತ್ತವೆ. ಇಂಥ ಸೀನ್ ಗಳು ನಿಜಕ್ಕೂ ಮನಸ್ಸಿಗೆ ಹಿತವನ್ನು ನೀಡುತ್ತವೆ. ಇಂಥದ್ದೇ ಒಂದು ಅದ್ಭುತವಾದ ಸೀನ್ ಈಗ ನೇಟಿಜನ್ಸ್ ಗಳ ಚರ್ಚೆಗೆ ಕಾರಣವಾಗಿದೆ.

ಎಷ್ಟೋ ಸಲ ನೀವು ಹದ್ದುಗಳನ್ನು ಅಥವಾ ಗರುಡ ಪಕ್ಷಿಗಳನ್ನು ಆಕಾಶದಲ್ಲಿ ಅತಿ ಎತ್ತರದ ಮೇಲೆ ನಿಧಾನವಾಗಿ ಹವೆಯಲ್ಲಿ ತೇಲಾಡುತ್ತಿರುವದನ್ನು ನೋಡಿರಬಹುದು ಅಲ್ವೇ? ಈ ಪಕ್ಷಿಯು ಬೇಟೆಯಾಡುವುದರಲ್ಲಿ ತುಂಬಾ ಚುರುಕಾಗಿರುತ್ತದೆ. ಇದು ತನ್ನ ಬೇಟೆಯ ಮೇಲೆ ಆಕಾಶದಿಂದಲೇ ತೀಕ್ಷ್ಣವಾದ ಕಣ್ಣುಗಳನ್ನು ಇಟ್ಟಿರುತ್ತದೆ. ಇದು ಬೇಟೆಯಾಡುವುದರಲ್ಲಿ ಎಷ್ಟೊಂದು ತೀಕ್ಷ್ಣವಾಗಿರುತ್ತದೆ ಅಷ್ಟೇ ತನ್ನ ಸಂಗಾತಿಯ ಜೊತೆಗೆ ಪ್ರೀತಿಯಿಂದಲೂ ವರ್ತಿಸುತ್ತದೆ. ಇದರದೇ ಉದಾಹರಣೆಯನ್ನು ನೀಡುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಗರುಡ ಪಕ್ಷಿಗಳ ಜೋಡಿ ಆಕಾಶದಲ್ಲಿ ಜೊತೆಜೊತೆಯಾಗಿ ಡ್ಯಾನ್ಸ್ ಮಾಡುವ ಅದ್ಭುತ ದೃಶ್ಯವನ್ನು ನೋಡಬಹುದು. ಈ ಅಪರೂಪದ ದೃಶ್ಯವು ನೋಡುಗರಿಗೆ ಬಹುಶಃ ಎಲ್ಲರಿಗೂ ಹೊಸದೇ ಆಗಿರಬೇಕು. ಎರಡು ಗರುಡ ಪಕ್ಷಿಗಳು ಒಂದರ ಹತ್ತಿರ ಒಂದು ಬಂದು ಮೊದಲು ಕಾಲುಗಳಲ್ಲಿ ಸಿಕ್ಕಿಹಾಕಿಕೊಂಡು ನಂತರ ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತ ಮಾಡಿವೆ. ಈ ವಿಶೇಷವಾದ ವಿಡಿಯೋ ನೋಡಿ ನೇಟಿಜನ್ಸ್ ಗಳು ವಿವಿಧ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.

ನೋಡಿ ಈ ವಿಡಿಯೋ…

ಹದ್ದುಗಳು ತಮ್ಮ ಪ್ರೀತಿಯನ್ನು ವ್ಯಕ್ತ ಮಾಡುವ ಅಪರೂಪದ ವಿಡಿಯೋವನ್ನು ಟ್ವಿಟರ್ನಲ್ಲಿ ರೂಪಿನ್ ಶರ್ಮ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ತಮ್ಮ ಭಾವನೆಗಳನ್ನು ವ್ಯಕ್ತ ಮಾಡಿದ್ದಾರೆ ಮತ್ತು ಈ ವಿಡಿಯೋಗೆ ಸಾಕಷ್ಟು ಲೈಕ್ ಗಳು ಸಹ ಬಂದಿವೆ.