ಜಗತ್ತಿನ ಏಕೈಕ ಬಿಜಿಎಸ್ಟ್ ಪರ್ಸನ್ ಗೆ ನೋಡಿದ್ದೀರಾ? ಇಲ್ಲವಾದರೆ ಈ ವಿಡಿಯೋದಲ್ಲಿ ಸೆರೆ ಸಿಕ್ಕಿದ್ದಾನೆ…ಒಮ್ಮೆ ನೋಡಿಯೇ ಬಿಡಿ.
ನನಗೆ ಸದ್ಯಕ್ಕೆ ಟೈಮಿಲ್ಲ ಎನ್ನುವ ಶಬ್ದ ಎಲ್ಲರೂ ಕೇಳಿ ಕೇಳಿ ಮತ್ತು ಇದೇ ಮಾತನ್ನು ಇನ್ನೊಬ್ಬರಿಗೆ ನಾವೂ ಹೇಳಿ ಹೇಳಿ ಸಾಕಾಗಿದೆ. ಪ್ರತಿಯೊಬ್ಬರೂ ನಾನು ತುಂಬಾ ಬಿಜಿ ಇದ್ದೇನೆ ಎಂದು ತೋರಿಸಲು ಅಥವಾ ಹೇಳಲು ಯತ್ನಿಸುತ್ತಾರೆ. ಯಾರು ಎಷ್ಟು ಬಿಜಿ ಇದ್ದಾರೆ ಎನ್ನುವುದು ಅವರವರಿಗೆ ಮಾತ್ರ ಗೊತ್ತು. ಆದರೆ ಇಲ್ಲೊಬ್ಬನ ಈ ವಿಡಿಯೋ ನೋಡಿದ ನಂತರ ಈತ ತುಂಬಾ ಬಿಜಿ ಪರ್ಸನ್ ಇದ್ದಾನೆ ಎಂದು ಆತ ಹೇಳುವದು ಬಿಡಿ ನಾವೇ ಹೇಳುತ್ತೇವೆ. ಯಾಕೆಂದರೆ ಆತನ ಇಲ್ಲಿಯ ವಿಡಿಯೋ ನೋಡಿದಾಗ ಗೊತ್ತಾಗುತ್ತೆ….
ಈ ವೈರಲ್ ವಿಡಿಯೋದಲ್ಲಿ ಕಾಣುವ ಹಾಗೆ ವ್ಯಕ್ತಿಯೊಬ್ಬ ಟು ವೀಲರ್ ಮೇಲೆ ಸಹಜವಾಗಿ ಹೋಗುತ್ತಿದ್ದಾನೆ. ಆತ ಆ ಸಮಯದಲ್ಲಿ ಫೋನಿನಲ್ಲಿ ಮಾತನಾಡುತ್ತಾ ಚಲಿಸುತ್ತಿರುತ್ತಾನೆ. ಆತನಿಗೆ ಗಮನಿಸುತ್ತಿರುವಾಗಲೇ ಆತನಲ್ಲಿ ಥಟ್ಟನೇ ಏನೋ ಒಂದು ಬದಲಾವಣೆ ಆಗುತ್ತದೆ. ಅದು ಒಮ್ಮೆಲೆ ನೋಡುಗರ ಗಮನಕ್ಕೆ ಬರುವದಿಲ್ಲ. ಮತ್ತೊಮ್ಮೆ ನೋಡಿದಾಗ ಮಾತ್ರ ಸರಿಯಾಗಿ ಗಮನಕ್ಕೆ ಬರುತ್ತದೆ. ಅದೇನೆಂದರೆ, ಆತ ಮೊದಲೇ ಎಡಗೈನಲ್ಲಿ ಫೋನ್ ಹಿಡಿದು ಬೈಕ್ ನಡೆಸುತ್ತಿರುತ್ತಾನೆ, ನಂತರ ಬಲಗೈಯಿಂದಲೂ ಫೋನ್ ಆಪರೇಟ್ ಮಾಡುವದು ಕಂಡು ಬರುತ್ತದೆ. ಹೀಗಾಗಿ ಬೈಕ್ ಸಂಪೂರ್ಣವಾಗಿ ಹ್ಯಾಂಡ್ಸ್ ಫ್ರೀ ಆಗುತ್ತದೆ. ಅಂದರೆ ಆತನು ತನ್ನ ಎರಡು ಕೈಗಳಿಂದ ಫೋನ್ ಬಳಸುತ್ತಿದ್ದಾನೆ. ಈ ಪ್ರಕ್ರಿಯೆಯನ್ನು ಆತ ತುಂಬಾ ಸಹಜವಾಗಿ ಎನ್ನುವಂತೆ ಮಾಡುತ್ತಿದ್ದಾನೆ. ಅದು ಟು ವ್ಹೀಲರ್ ಮೇಲೆ ಕುಳಿತು ಚಲಿಸುತ್ತಿರುವಾಗ, ಹೌದಲ್ವಾ? ಜಗತ್ತಿನ ತುಂಬಾ ಬಿಜಿ ಪರ್ಸನ್ ಅಂತ ಅದಕ್ಕೆಂದೇ ಕ್ಯಾಪ್ಶನ್ ನೀಡಿದ್ದಾರೆ.
ಈ ವಿಡಿಯೋದಲ್ಲಿ ನೀವೇ ನೋಡಿ ಆ ಭೂಪನನ್ನು.