ವಿಶ್ವದಲ್ಲಿ ಜನರು ಮಾಡುವ ಕೆಲವು ವಿಚಿತ್ರವಾದ ಕೆಲಸಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ!
ಇಂದು ನಾವು ಜಗತ್ತಿನಲ್ಲಿಯ ಚಿತ್ರವಿಚಿತ್ರ ಕೆಲಸಗಳ ಬಗ್ಗೆ ತಿಳಿಸುವವರಿದ್ದೇವೆ. ಆ ಕೆಲಸಗಳ ಬಗ್ಗೆ ನೀವು ಇದುವರೆಗೂ ಕೇಳಿರಲಿಕ್ಕಿಲ್ಲ. ಅಲ್ಲದೆ ಈ ಕೆಲಸಗಳ ಫೋಟೋ ನೋಡಿದರೆ ಅಬ್ಬಾ ಇಂತಹ ಕೆಲಸ ಎಂದು ನೀವೇ ಆಶ್ಚರ್ಯ ಪಡುವಿರಿ. ನಾವು ಕೆಲಸ ತುಂಬಾ ಸರಳ ಹಾಗೂ ಸಂಬಳ ಬಹಳಷ್ಟು ಇರಬೇಕು ಎಂಬುದು ನಾವು ಕನಸು ಕಾಣುತ್ತೇವೆ. ಆದರೆ ಈ ವಿಚಿತ್ರ ಕೆಲಸಗಳ ಫೋಟೋ ನೋಡಿದರೆ ತುಂಬಾ ಆಶ್ಚರ್ಯವಾಗುವದು.

1 ) ಡಿಯೋಡರೆಂಟ್ ತಯಾರಿಸುವ ಕಂಪನಿಯಲ್ಲಿ ಡಿಯೋಡರೆಂಟಿನ ಪರಿಮಳ ಅಥವಾ ವಾಸನೆಯನ್ನು ತಗೆದುಕೊಳ್ಳುವ ವಿಚಿತ್ರ ಕೆಲಸ:- ಯಾವುದೇ ಡಿಯೊಡರೆಂಟ್ ಪ್ರಾಡಕ್ಟ್ ತಯಾರಿಸಿದ ಮೇಲೆ ಅದರ ಪರಿಮಳವನ್ನು ಪರೀಕ್ಷಣೆ ಮಾಡುವ ಸಲುವಾಗಿ ಕಂಪನಿಯು ಕೆಲವು ಜನರಿಗೆ ಸಂಬಳ ನೀಡುತ್ತದೆ. ಇದರಿಂದ ಯಾವ ಪ್ರಾಡಕ್ಟ್ ಯಾವ ಪರಿಮಳ ಬೀರುವದು ಎಂಬುದು ತಿಳಿದುಬರುವದು.

2) ವಿಚಿತ್ರ ರೀತಿಯ ಉಡುಗೆ ಧರಿಸಿ ಸ್ವಚ್ಛತೆ ಮಾಡುವ ನೌಕರಿ: ನಾವು ದೈನಂದಿನ ಜೀವನದಲ್ಲಿ ಎಷ್ಟೋ ಪ್ರಕಾರದ ಉಡುಪುಗಳನ್ನು ಧರಿಸುತ್ತೇವೆ. ಕೆಲವು ನೌಕರಿಯಲ್ಲಿ ವಿಚಿತ್ರವಾದ ಉಡುಪು ಧರಿಸಿ ಸ್ವಚ್ಚತೆ ಮಾಡುವ ಕೆಲಸ ವಿರುತ್ತದೆ. ಇದರಿಂದ ಜನರು ಆತನ ಉಡುಪಿನ ಕಡೆಗೆ ಲಕ್ಷ ವಹಿಸಿ ಅವನ ಕಾರ್ಯದ ಪರೀಕ್ಷಣೆ ಸಹ ಮಾಡುವರು ಎಂಬ ಉದ್ದೇಶದಿಂದ ವಿಚಿತ್ರವಾದ ಉಡುಪು ಧರಿಸುತ್ತಾರೆ.

3) ನಾಯಿ ಮತ್ತು ಬೆಕ್ಕಿನ ಆಹಾರವನ್ನು ಪರೀಕ್ಷಿಸುವ ನೌಕರಿ: ಕೆಲವು ಸುಪ್ರಸಿದ್ದ ಪೆಟ್ಸ್ ಫುಡ್ ಕಂಪನಿಗಳು ತಮ್ಮ ಪ್ರಾಡಕ್ಟ್ ತಯಾರಿಸಿದ ನಂತರ ಆ ಪ್ರಾಡಕ್ಟ್ ನ್ನು ಟೆಸ್ಟ್ ಮಾಡುವ ಸಲುವಾಗಿ ಅಲ್ಲಿಯ ಕಾರ್ಮಿಕರಿಗೆ ನೀಡುವರು. ಅವರು ಪರೀಕ್ಷಣೆ ಮಾಡಿದ ನಂತರವೇ ಅದನ್ನು ಮಾರಾಟಕ್ಕೆ ಕಳುಹಿಸುವರು.

4) ಗುರಿ ಅಭ್ಯಾಸಕ್ಕಾಗಿ ಬೋರ್ಡ್ ಹೋಲ್ಡಿಂಗ್ ಕೆಲಸ:- ಗುರಿ ಅಭ್ಯಾಸ ಮಾಡುವ ಸಲುವಾಗಿ ಕೆಲವು ತರಬೇತಿ ಕೇಂದ್ರಗಳು ತಮ್ಮ ಕೇಂದ್ರದಲ್ಲಿರುವ ಗುರಿ ಪ್ರಶಿಕ್ಷಣ ಪಡೆಯುವ ಅಭ್ಯರ್ಥಿಗಳಿಗೆ ಸಮಸ್ಯೆ ನಿರ್ಮಾಣ ವಾಗಬಾರದೆಂದು ಬೋರ್ಡ್ ಹೋಲ್ಡಿಂಗ್ ಸಲುವಾಗಿ ವ್ಯಕ್ತಿಗಳನ್ನು ನೇಮಕ ಮಾಡುತ್ತಾರೆ. ಇದರಿಂದ ಅವರು ಸ್ವಲ್ಪ ಅಲುಗಾಡಿದರೂ ಸಹಿತ ಆ ಗುರಿ ಇವರ ಜೀವವೇ ತಗೆದುಕೊಳ್ಳುವದು.

5) ಜಾಹೀರಾತು ಪ್ರಚಾರದ ಕೆಲಸ:- ಯಾವುದೇ ಕಂಪೆನಿಯು ತಮ್ಮ ಪ್ರಾಡಕ್ಟ್ ನ ಜಾಹಿರಾತು ಟಿವಿ, ಸಾಮಾಜಿಕ ಮಾಧ್ಯಮಗಳ ಮುಖಾಂತರ ಮಾಡುತ್ತಾರೆ. ಆದರೆ ಕೆಲವೊಂದು ದೇಶದಲ್ಲಿ ಕಂಪನಿಗಳು ತಮ್ಮ ಪ್ರಾಡಕ್ಟ್ ನ್ನು ನೇರವಾಗಿ ಜನರಿಗೆ ಪರಿಚಯಿಸುವ ಸಲುವಾಗಿ ನೌಕರರಿಂದ ತಮ್ಮ್ ಪ್ರಾಡಕ್ಟ್ ಜಾಹಿರಾತು ಮಾಡುವರು.

6) ಟಾಯ್ಲೆಟ್ ಕ್ಲೀನರ್ ಜಾಹೀರಾತು ಪ್ರಚಾರದ ನೌಕರಿ:- ಈ ನೌಕರಿಯಲ್ಲಿ ಕೆಲವು ಕಂಪನಿಗಳು ತಮ್ಮ ಜಾಹೀರಾತಿಗಾಗಿ ಜನರನ್ನು ರಸ್ತೆಯ ಹಾಗೂ ಬಿಲ್ಡಿಂಗ್ ಬದಿಯಲ್ಲಿ ನಿಲ್ಲಿಸಿ ಟಾಯ್ಲೆಟ್ ಕ್ಲಿನರ್ಸ್ ಪ್ರಚಾರ ಮಾಡುವವು.

7) ಸ್ಟಂಟ್ ಟೆಸ್ಟರ್:- ನಾವು ಹಾಲಿವುಡ್ ನಲ್ಲಿ ಎಕ್ಸ್ ಫ್ಯಾಕ್ಟೇರ್ ಮತ್ತು ಫಿಯರ್ ಫ್ಯಾಕ್ಟರ್ ನಂತಹ ಚಿತ್ರಗಳು ನೋಡಿದ್ದೇವೆ ಅದರಲ್ಲಿ ಅತ್ಯಂತ ವಿಷಕಾರಿ ಕೀಟಗಳನ್ನು ತಿನ್ನುವ ಕೆಲವು ಸನ್ನಿವೇಶಗಳಿಗೆ. ಆದರೆ ನಿಜಜೀವನದಲ್ಲಿ ಸಹ ಕೆಲವು ನಾಮಾಂಕಿತ ಕಂಪನಿಗಳು ತಮ್ಮ ಪ್ರಾಡಕ್ಟ್ ಸಲುವಾಗಿ ಇಂತಹ ಕ್ರಿಮಿಕೀಟ್ ಗಳನ್ನು ಟೆಸ್ಟ್ ಮಾಡುವ ನೌಕರಿ ಇದೆ. ಇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಬಳವು ಸಹ ಕೊಡುತ್ತಾರೆ.