ಆನಂದ್ ಮಹೀಂದ್ರ “ಒಬೆರಾಯ್ ಹೋಟೆಲ್ ಫೋಟೋ” ಶೇರ್ ಮಾಡಿ ನೀಡಿದರು ಒಂದು ಒಳ್ಳೆಯ ಸಂದೇಶ!
ದಿಗ್ಗಜ ಉದ್ಯಮಿ ಆನಂದ್ ಮಹೀಂದ್ರ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಏನಾದರೂ ಸುಂದರವಾದ ಮತ್ತು ಪ್ರೇರಣೆ ನೀಡುವಂಥ ಫೋಟೋ, ವಿಡಿಯೋಗಳ ಮುಖಾಂತರ ಒಳ್ಳೆಯ ಸಂದೇಶಗಳನ್ನು ಯಾವತ್ತೂ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ಮತ್ತೊಂದು ಫೋಟೋ ಒಂದನ್ನು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ, ಇದೇ ಈಗ ಚರ್ಚೆಗೆ ಈಡು ಮಾಡಿದೆ. ಅಷ್ಟಕ್ಕೂ ಅವರು ಶೇರ್ ಮಾಡಿದ ಹೋಟೆಲ್ ಯಾವುದು ಗೊತ್ತಾ? ರಸ್ತೆ ಬದಿಯಲ್ಲಿ ಇರುವ ಚಹಾ ಕ್ಯಾಂಟೀನ್, ಅದರ ಮೇಲೆ ಸ್ಪಷ್ಟ ಶಬ್ದಗಳಲ್ಲಿ ಕಾಣುವ ಹಾಗೆ ಬರೆದಿದೆ ಹೋಟೆಲ್ ಒಬೆರಾಯ್! ಮಧ್ಯದಲ್ಲಿ ಚಹಾ, ಕಾಫಿ ಎಂದು ಉಲ್ಲೇಖಿಸಲಾಗಿದೆ. ಕೆಳಗೆ ನಮ್ಮದು ಬೇರೆ ಎಲ್ಲಿಯೂ ಬ್ರ್ಯಾಂಚ್ ಇಲ್ಲವೆಂದು ನಮೂದಿಸಲಾಗಿದೆ. ಇದೇ ಫೋಟೋ ಶೇರ್ ಮಾಡುತ್ತಾ ಆನಂದ್ ಮಹೀಂದ್ರ ಅವರು ಒಂದು ಸುಂದರ ಸಂದೇಶವನ್ನು ನೀಡಿದ್ದಾರೆ. ಅದೇನೆಂದರೆ, ‘ದೊಡ್ಡ ಕನಸುಗಳನ್ನು ನೋಡಿ’ ಎಂದಿದ್ದಾರೆ.
Dream big….#MondayMotivation pic.twitter.com/rHKmq0Wynq
— anand mahindra (@anandmahindra) February 28, 2022
ಆನಂದ್ ಮಹೀಂದ್ರ ಅವರು ಶೇರ್ ಮಾಡಿದ ಈ ಫೋಟೊ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ. ಅದಕ್ಕೆ ಎಷ್ಟೋ ಯೂಸರ್ ಗಳು ರೀಟ್ವಿಟ್ ಮಾಡಿದ್ದಾರೆ. ಕನಸುಗಳನ್ನು ನೋಡುವುದರ ಜೊತೆಗೆ ಪರಿಶ್ರಮವನ್ನು ತೆಗೆದುಕೊಂಡಾಗ ಮಾತ್ರ ಆ ಕನಸುಗಳು ಪೂರ್ಣಗೊಳ್ಳುತ್ತವೆ ಎಂದು ಒಬ್ಬ ಯೂಸರ್ ಹೇಳಿದ್ದಾನೆ. ಇನ್ನೊಬ್ಬ ಯೂಸರ್ ಜಗತ್ಪ್ರಸಿದ್ಧ ಒಬೆರಾಯ್ ಹೋಟೆಲ್ ನ ಕಥೆಯೂ ಇದೇ ರೀತಿಯಾಗಿದೆ ಎಂದಿದ್ದಾನೆ.