Videi: ಪದೇ ಪದೇ ಬಾಳೆ ಹಣ್ಣು ಕೊಡುವ ಆಸೆ ತೋರಿಸುತ್ತಿದ್ದ ವ್ಯಕ್ತಿ, ಸಿಟ್ಟಿಗೆದ್ದು ಮಂಗ ಮಾಡಿದ್ದೇನು? ವಿಡಿಯೋ ನೋಡಿ.!!
ಮಂಗನಿಂದ ಮಾನವ ಅನ್ನೋ ಮಾತನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಮೊದಲು ಮಂಗನ ರೂಪದಲ್ಲಿ ಮಾನವನು ಇದ್ದ ಅನ್ನೋದು ನಮ್ಮ ಶಾಸ್ತ್ರಜ್ಞರ ಹೇಳಿಕೆ. ಮಾನವನ ರಚನೆ ಮತ್ತು ಮಂಗನ ರಚನೆ ಒಂದು ಪ್ರಕಾರದ್ದಾಗಿದ್ದು ಆದರಿಂದ ಕೆಲವು ಮಾನವನ ಗುಣಗಳು ಮಂಗನಲ್ಲಿ ಸಹ ಕಾಣಬಹುದು ಅಂದರೆ ನಗು, ಸಿಟ್ಟು, ದುಃಖ ಹೀಗೆ ಹಲವಾರು ಮಾನವನ ಭಾವನೆಗಳು ಮಂಗನಲ್ಲಿ ನಾವು ಕಾಣುತ್ತೇವೆ. ಮಂಗನ ಹಲವಾರು ವೀಡಿಯೋಗಳು ಸಮಾಜಿಕ ಜಾಲತಾಣಗಳಲ್ಲಿ ನಾವು ನೋಡಿದ್ದೇವೆ. ಏಕೆಂದರೆ ಮಂಗ ಮಾಡುವ ಪ್ರತಿಯೊಂದು ಚಟುವಟಿಕೆ ಜನರಲ್ಲಿ ನಗು ಉಂಟು ಮಾಡುತ್ತದೆ. ಹೀಗಾಗಿ ಹೆಚ್ಚಾಗಿ ಮಂಗಗಳ, ಕೋತಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತವೆ.
ಪ್ರಸ್ತುತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ಸಹ ಮಂಗನ ವಿಡಿಯೋ ಇದ್ದು. ಪ್ರಸ್ತುತ ವೀಡಿಯೋದಲ್ಲಿ ಮಂಗನ ಸಿಟ್ಟಿನ ಒಂದು ರೂಪ ನೀವು ನೋಡಬಹುದು. ಈ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಪ್ರಾಣಿ ಸಂಗ್ರಾಲಯದಲ್ಲಿದ್ದ ಒಂದು ಮಂಗಕ್ಕೆ ಬಾಳೆ ಹಣ್ಣನ್ನು ಕೊಡಲು ಪ್ರಯತ್ನ ಮಾಡುತ್ತಾನೆ. ಆದರೆ ಬಾಳೆ ಹಣ್ಣು ಕೊಡುವಾಗ ಮಂಗಕ್ಕೆ ಸ್ವಲ್ಪ ಚೇಷ್ಟೆ ಮಾಡಬೇಕು ಅಂದುಕೊಂಡು ಅದಕ್ಕೆ ಎರಡು ಮೂರು ಸಲ ಬಾಳೆ ಹಣ್ಣು ತೋರಿಸಿ ಅದಕ್ಕೆ ಆಸೆ ತೋರಿಸುತ್ತಾನೆ. ಹೀಗೆ ಮಾಡುತ್ತಿದ್ದನ್ನು ಕಂಡು ಮಂಗ ತುಂಬಾ ಕೋಪ ಗೊಳ್ಳುತ್ತದೆ. ಆಗ ನಾಲ್ಕನೆಯ ಬಾರಿ ಬಾಳೆ ಹಣ್ಣು ತೋರಿಸುತ್ತಲೇ ಸಿಟ್ಟಿನಿಂದ ಕಸಿದುಕೊಂಡು ಅದನ್ನು ಪಂಜರದ ಒಳಗೆ ತಗೆದುಕೊಂಡು ಮನಸ್ಸಿಗೆ ಬಂದ ಹಾಗೆ ಹಿಗ್ಗಾಮುಗ್ಗಾ ಹರಿದು ಅದನ್ನು ನೆಲಕ್ಕೆ ಎಸೆಯುತ್ತದೆ. ಇದನ್ನು ನೋಡಿದರೆ ಮಂಗನ ಕೋಪವನ್ನು ನಾವು ಎಷ್ಟಿರುತ್ತದೆ ಅನ್ನೋದು ಅರಿಯಬಹುದು.
ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು. ಇದುವರೆಗೆ ಈ ವೀಡಿಯೋವನ್ನು ಸುಮಾರು ಹತ್ತು ಮಿಲಿಯನ್ ಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಒಂದು ಮಿಲಿಯನ್ ಗೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಕಾಮೆಂಟ್ ಸಹ ಮಾಡಿದ್ದಾರೆ. ಗೆಳೆಯರೇ ಯಾವುದೇ ಪ್ರಾಣಿಗಳಿಗೆ ತಿಂಡಿ ಅಥವಾ ಹಣ್ಣು ಕೊಡುವದಾದರೆ ನೇರವಾಗಿ ಕೊಟ್ಟು ಬಿಡಿ ಹೊರೆತುಪಡಿಸಿ ಅವುಗಳ ಜೊತೆಗೆ ಆಟವಾಡಬೇಡಿ ಏಕೆಂದರೆ ಹಸಿದ ವ್ಯಕ್ತಿಗೆ ಬರೀ ಅನ್ನದ ಆಮೀಸೆ ತೋರಿದರೆ ಎಷ್ಟು ಸಿಟ್ಟು ಬರುವದು ಅನ್ನೋದು ನಮಗೆಲ್ಲ ಗೊತ್ತೇ ಇದೆ ನಾವು ಮನುಷ್ಯರೇ ಅಷ್ಟು ಕೋಪ ಮಾಡಿಕೊಳ್ಳುವದಾದರೆ ಆ ಪ್ರಾಣಿಗಳು ಎಷ್ಟು ಕೋಪ ಪಡುವವು ಎಂಬುದು ನೀವು ಊಹಿಸಿ.
ವಿಡಿಯೋ ನೋಡಿ