ಬರೀ 30 ದಿನಗಳಲ್ಲಿ 2 ಲಕ್ಷ ಜನರು ಮುಗಿಬಿದ್ದು ಖರೀದಿಸಿದರು ಈ ಬೈಕ್! ಮೈಲೇಜ್ ನೀಡುವದು 80.06; ಬೆಲೆ ಪರೀಕ್ಷಿಸಿ…
ದಿಗ್ಗಜ ಮೋಟಾರ್ ಬೈಕ್ ಕಂಪನಿಯಾದ ಹೀರೋಗೆ ಭಾರತದಲ್ಲಿ ತುಂಬಾ ಬೇಡಿಕೆ ಇದೆ. ಭಾರತದ ಪ್ರತಿಯೊಂದು ಹಳ್ಳಿಹಳ್ಳಿಯಲ್ಲಿ ಹೀರೋ ಬೈಕ್ ಅದರಲ್ಲೇ ಸ್ಪ್ಲೆಂಡರ್ ಪ್ಲಸ್ ಎಲ್ಲಿ ಬೇಕಲ್ಲಿ ಕಂಡು ಬರುತ್ತದೆ. ಈಗ ಮತ್ತೆ ಇದೇ ಬೈಕ್ ಮತ್ತೊಮ್ಮೆ ಭಾರತದ ಸರ್ವಶ್ರೇಷ್ಠ ಸೆಲ್ಲಿಂಗ್ ಬೈಕ್ ಆಗಿ ಹೊರಹೊಮ್ಮಿದೆ. ಇದರ ವಿಶೇಷತೆ ಎಂದರೆ, ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಮಹತ್ವದ ಗುಣಧರ್ಮ ಹೊಂದಿದೆ. ಇದೇ ಕಾರಣದಿಂದ ಬರೀ 30 ದಿನಗಳ ಕಾಲಾವಧಿಯಲ್ಲಿ 2 ಲಕ್ಷ ಜನರು ಖರೀದಿಸಿದ್ದಾರೆ. ಈ ಬೈಕ್ ನ ಇನ್ನುಳಿದ ವಿವಿಧ ವೈಶಿಷ್ಟ್ಯಗಳು ಯಾವವು ನೋಡಿ ಡೀಟೇಲ್ಸ್ ನಲ್ಲಿ…
80.6kmpl ಮೈಲೇಜ್…
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ತನ್ನ ಬೆಲೆ, ಸ್ಟೈಲ್ ಮತ್ತು ಮೈಲೇಜ್ ನಿಂದಾಗಿ ಬೈಕ್ ಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೆಚ್ಚಾಗುತ್ತಿರುವ ಇಂಧನ ಬೆಲೆಯಿಂದಾಗಿ ಜನರು ಮೈಲೇಜ್ ನೀಡುವ ಬೈಕ್ ಗಳ ಕಡೆಗೆ ವಾಲುತ್ತಿದ್ದಾರೆ. ಈ ಬೈಕ್ ಪ್ರತಿ ಲೀಟರ್ ಗೆ 80.06 kmpl ಮೈಲೇಜ್ ನೀಡುತ್ತದೆ. ಇದು ಸುಮ್ಮನೆ ಹಾಗೆ ಹೇಳುತ್ತಿಲ್ಲ, ARAI (Automotive Research Association of India) ಕಡೆಯಿಂದ ಸರ್ಟಿಫಾಯಿಡ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ 2022 ರ ಜನೆವರಿ ತಿಂಗಳಿನಲ್ಲಿ ಅತೀ ಹೆಚ್ಚು ಗ್ರಾಹಕರ ಖರೀದಿಗೆ ಒಳಗಾದ ಬೈಕ್ ಇದಾಗಿದೆ. ಕಂಪನಿಯು ಜನೆವರಿ 2021 ರಲ್ಲಿ 2 ಲಕ್ಷ 25 ಸಾವಿರ 382 ಯೂನಿಟ್ಸ್ ಗಳನ್ನು ಮಾರಾಟ ಮಾಡಿತ್ತು. ಈಗ 2022 ರಲ್ಲಿ 2 ಲಕ್ಷ 8 ಸಾವಿರ 264 ಯುನಿಟ್ಸ್ ಗಳ ಮಾರಾಟ ಮಾಡಿದೆ. ಅಂಕಿ ಸಂಖ್ಯೆಗಳ ಲೆಕ್ಕಾಚಾರದಲ್ಲಿ ಸ್ವಲ್ಪ ಕಡಿಮೆ ಬಂದರೂ ಸಹ ಬೈಕ್ ಮಾತ್ರ ಬೆಸ್ಟ್ ಸೇಲ್ಲಿಂಗ್ ಪೊಸಿಷನ್ ನಲ್ಲಿದೆ. ಮಾರಾಟದಲ್ಲಿ ಈ ಬೈಕ್ ನ ಆಸುಪಾಸು ಯಾರು ಸುಳಿಯುತ್ತಿಲ್ಲ.
97.2cc ನ ಎಂಜಿನ್
ಈ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಿಂಗಲ್ ಸಿಲಿಂಡರ್ ನ 97.2cc ಯ ಎಂಜಿನ್ ದೊರೆಯುತ್ತದೆ. ಇದು ಫ್ಯೂಲ್ ಇಂಜೆಕ್ಷನ್ ಟೆಕ್ನಾಲಜಿ ಬೇಸ್ಡ್ ಇದೆ. ಈ ಎಂಜಿನ್
8.02ps ಪಾವರ್ ಮತ್ತು 8.05nm ನ ಪೀಕ್ ಟಾರ್ಕ್ ಜನರೇಟ್ ಮಾಡುತ್ತದೆ. ಸದ್ಯ ಈ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನ 4 ವೇರಿಯಂಟ್ ಗಳು ಮಾರ್ಕೆಟ್ ನಲ್ಲಿ ಉಪಲಬ್ಧ ಇವೆ.
ಬೆಲೆ ಮತ್ತು ಸ್ಪರ್ಧೆ…
Hero Splendor Plus ಈ ಮೈಲೇಜ್ ಬೈಕಿನ ಬೆಲೆ 65 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಟಾಪ್ ವೆರಿಯಂಟ್ ತೆಗೆದುಕೊಳ್ಳುವ ವಿಚಾರ ಮಾಡಿದರೆ ಅದರ ಬೆಲೆ 70 ಸಾವಿರ ರೂಪಾಯಿಗಳವರೆಗೆ ಇದೆ. ಮಾರುಕಟ್ಟೆಯಲ್ಲಿ ಈ ಬೈಕಿನ ಸ್ಪರ್ಧೆ ಹೋಂಡಾ ಶೈನ್ ಮತ್ತು ಟಿವಿಎಸ್ ಸ್ಟಾರ್ ಸ್ಪೋರ್ಟ್ಸ್ ಹಾಗೂ ಬಜಾಜ್ ಪ್ಲಾಟಿನಾ ಜೊತೆಗೆ ಇದೆ.