ವೈರಲ್ ವಿಡಿಯೋ! ನಾಯಿಗಳು ತಮ್ಮ ಜೊತೆಗಾರನಿಗೆ ನೀಡಿದವು ವಿಶಿಷ್ಟ ಪದ್ಧತಿಯಲ್ಲಿ ಅಂತಿಮ ವಿದಾಯ! ಮನಕಲಕುವ ದೃಶ್ಯ ವಿಡಿಯೋದಲ್ಲಿ ಸೆರೆ…

ಪ್ರಾಣಿಗಳಲ್ಲಿಯೂ ಮನುಷ್ಯನ ಹಾಗೆ ವಿವಿಧ ಭಾವನೆಗಳು, ತಿಳುವಳಿಕೆ, ದಯೆ ಇರುತ್ತವೆ. ಪ್ರಾಣಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ನೋಡುವ ಹೃದಯಗಳಿಗೆ ಪ್ರಾಣಿಗಳಲ್ಲಿಯ ಒಳ್ಳೆಯ ಗುಣಗಳು ಯಾವಾಗಲೂ ಕಂಡುಬರುತ್ತವೆ. ಆ ಹೃದಯವನ್ನು ತಿಳಿದುಕೊಳ್ಳುವ ಸಾಮರ್ಥ್ಯ ಇಲ್ಲದವರಿಗೆ ಪ್ರಾಣಿಗಳಲ್ಲಿರುವ ಇಂಥ ಒಳ್ಳೆಯ ಗುಣಗಳು ಎಂದಿಗೂ ಕಂಡುಬರುವುದಿಲ್ಲ. ವಿಶೇಷವಾಗಿ ನಾವು ನಾಯಿಗಳ ಬಗ್ಗೆ ಮಾತನಾಡುವಾಗ ಈ ಪ್ರಾಣಿಯ ಪ್ರಾಮಾಣಿಕತನಕ್ಕೆ ಬೇರೆ ಯಾವ ಪ್ರಾಣಿಯೂ ಸಾಟಿ ಇಲ್ಲ. ಇದೇ ಕಾರಣದಿಂದಾಗಿ ನಾಯಿಯು ವರ್ಷಾನುವರ್ಷಗಳಿಂದ ಮನುಷ್ಯನ ಜೊತೆಗೆ ಮಿತ್ರನಾಗಿ ನಡೆದುಕೊಂಡು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪ್ರಾಣಿಗಳ ಹಾಗೆ ನಾಯಿಯ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ. ಸದ್ಯ ಕೆಲವು ನಾಯಿಗಳ ಮನಮಿಡಿಯುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಇದರಲ್ಲಿ ನಾಯಿಗಳು ಮಾಡಿದ ಕೆಲಸ ನೇಟಿಜನ್ಸ್ ಗಳ ಮನಸ್ಸಿಗೆ ತುಂಬಾನೇ ಹಿಡಿಸಿದೆ. ಈ ವಿಡಿಯೋ ನೋಡಿದಾಗ ನಿಮಗೂ ಸಹ ಆಶ್ಚರ್ಯವೆನಿಸುವದು. ನಾಯಿಗಳು ತಮ್ಮ ಜೊತೆಗಾರನ ಮೃತ್ಯುವಿನ ನಂತರ ಅದಕ್ಕೆ ಅಂತಿಮವಾಗಿ ವಿದಾಯ ಹೇಳುವ ದೃಶ್ಯ ನೋಡುಗರ ಹೃದಯಕ್ಕೆ ಮುಟ್ಟುತ್ತದೆ. ಮಧ್ಯದಲ್ಲಿ ಮೃತ ನಾಯಿಯು ಒಂದು ಗುಂಡಿಯಲ್ಲಿದೆ. ಅನೇಕ ನಾಯಿಗಳು ಮೃತ ನಾಯಿಯನ್ನು ಸುತ್ತುಗಟ್ಟಿ ಅದರ ಮೇಲೆ ಮಣ್ಣನ್ನು ಹಾಕಿ ಸಮಾಧಿ ಮಾಡಲು ಪ್ರಯತ್ನ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.

ವಿಡಿಯೋ ನೋಡಿ

ಈ ವಿಡಿಯೋದಲ್ಲಿಯ ದೃಶ್ಯವು ನಿಜಕ್ಕೂ ಮನಕಲಕುವಂಥದ್ದಾಗಿದೆ. ವಿಡಿಯೋ ನೋಡಿದಾಗ ಪ್ರಾಣಿಗಳಲ್ಲಿಯೂ ಸಹ ಪ್ರೀತಿ ಹಾಗೂ ತಿಳುವಳಿಕೆಯ ಭಾವನೆ ಇರುವುದರ ಬಗ್ಗೆ ಅರಿವು ಆಗುತ್ತದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿಯಾದ ಅವನೀಶ್ ಶರಣ್ ಅವರು ತಮ್ಮ ಟ್ವಿಟರ್ ಅಕೌಂಟ್ ಮುಖಾಂತರ ಶೇರ್ ಮಾಡಿದ್ದಾರೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ಇವು ಪ್ರಾಣಿಗಳಿವೆಯೇ? ಎಂದು ಪ್ರಶ್ನಿಸಿದ್ದಾರೆ. 45 ಸೆಕೆಂಡಿನ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ. ಮತ್ತು ಸಾವಿರಾರು ಜನರು ಲೈಕ್ ಮಾಡಿದ್ದಾರೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ತಮ್ಮ ಅನೇಕ ರೀತಿಯ ಭಾವನೆಗಳನ್ನು ಶಬ್ದಗಳಲ್ಲಿ ಹೊರಹಾಕಿದ್ದಾರೆ. ಒಬ್ಬ ಯೂಸರ್ ‘ಇದಕ್ಕಿಂತ ಒಳ್ಳೆಯ ಕೊನೆಯ ವಿದಾಯ ಯಾವುದೂ ಇರಲಿಕ್ಕೆ ಸಾಧ್ಯವಿಲ್ಲ’ ಎಂದು ಕಮೆಂಟ್ ಮಾಡಿದ್ದಾನೆ.