ಸ್ಟಂಟ್ ಮಾಡಲು ಹೋಗಿ ಕಲ್ಲು ಬಂಡೆಗೆ ಹೋಗಿ ಅಪ್ಪಳಿಸಿದ ಯುವಕ! ವಿಡಿಯೋ ಆಯ್ತು ವೈರಲ್! ಸ್ಟಂಟ್ ಮಾಡುವವರು ಇದನ್ನೊಮ್ಮೆ ನೋಡಿ…
ಜಗತ್ತಿನಲ್ಲಿ ಅನೇಕ ಜನರು ಹೀಗೂ ಇದ್ದಾರೆ, ಅವರಿಗೆ ಅಪಾಯಕರವಾದ ಸ್ಟಂಟ್ ಮಾಡಲು ತುಂಬಾ ಇಷ್ಟವಾಗುತ್ತದೆ. ತಾವು ಮಾಡುವ ಸ್ಟಂಟ್ ನಿಂದ ಮುಂದೆ ಘಟಿಸುವ ಭಯಾನಕ ಪರಿಣಾಮದ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಬರೀ ತಮ್ಮ ಡೇರಿಂಗ್, ಉತ್ಸಾಹ ಮತ್ತು ಜೋಷ್ ತೋರಿಸುವದಿರುತ್ತದೆ. ಹೆಚ್ಚಾಗಿ ಇಂತಹ ಸ್ಟಂಟ್ ಗಳನ್ನು ಮಾಡುವ ಮೊದಲು ಯೋಗ್ಯ ಮಾರ್ಗದರ್ಶನ ಹಾಗೂ ತರಬೇತಿಯ ಅವಶ್ಯಕತೆ ಇರುತ್ತದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಒಂದು ವಿಡಿಯೋ ಸುತ್ತಾಡುತ್ತಿದೆ.
ರಾಕ್ ಕ್ಲೈಂಬಿಂಗ್…
ಈ ವಿಡಿಯೋದಲ್ಲಿ ಹುಡುಗನೊಬ್ಬನು ರಾಕ್ ಕ್ಲೈಂಬಿಂಗ್ ಮಾಡುವಾಗ ಆತನ ತಲೆ ಬಂಡೆಗೆ ಅಪ್ಪಳಿಸಿದೆ. ಹುಡುಗನು ಹಗ್ಗದ ಸಹಾಯದಿಂದ ನೇತಾಡುತ್ತಾ ಸ್ಟಂಟ್ ಮಾಡುತ್ತಿರುತ್ತಾನೆ. ಅದೇ ಸಮಯದಲ್ಲಿ ಆತನ ಬ್ಯಾಲೆನ್ಸ್ ಕಳೆದು ಬದಿಗೆ ಇರುವ ದೊಡ್ಡ ಬಂಡೆಗೆ ಹೋಗಿ ಅಪ್ಪಳಿಸಿದ್ದಾನೆ. ವಿಡಿಯೋ ನೋಡಿದಾಗ ಆ ಹುಡುಗನಿಗೆ ಜೋರಾಗಿ ಪೆಟ್ಟು ಬಿದ್ದರಬೇಕೆಂದು ಅನಿಸುತ್ತದೆ. ಆದರೆ ವಿಡಿಯೋ ಶೇರ್ ಮಾಡಿದ ವ್ಯಕ್ತಿಯು ಹುಡುಗನಿಗೆ ಯಾವುದೇ ರೀತಿಯ ಗಾಯವಾಗಿಲ್ಲ ಮತ್ತು ಆತ ಆರೋಗ್ಯದಿಂದ ಇದ್ದಾನೆ ಎಂದು ಹೇಳಿದ್ದಾನೆ.
ವೀಡಿಯೋ ನೋಡಿ
View this post on Instagram
ಈ ಸ್ಟಂಟ್ ಮಾಡುವ ವಿಡಿಯೋ climb_world ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋವನ್ನು ಇಲ್ಲಿಯವರೆಗೆ 13 ದಶಲಕ್ಷ ಜನರು ವೀಕ್ಷಿಸಿದ್ದಾರೆ. ಮತ್ತು 1.5 ಲಕ್ಷ ಜನರು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಅನೇಕ ನೇಟಿಜನ್ಸ್ ಗಳು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಜಾಗೃತೆ ವಹಿಸಿ…
ಇತ್ತೀಚಿಗೆ ಯುವಕರಲ್ಲಿ ವಿವಿಧ ರೀತಿಯ ಸಾಹಸದಿಂದ ಕೂಡಿದ ಆಟಗಳನ್ನು ಅಥವಾ ಸ್ಟಂಟ್ ಗಳನ್ನು ಮಾಡುವ ಕ್ರೇಜ್ ಹೆಚ್ಚಾಗುತ್ತಲಿದೆ. ಈ ರೀತಿಯ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಮಿತ್ರರೇ, ಈ ರೀತಿಯ ಸಾಹಸಗಳನ್ನು ಮಾಡುವ ಮೊದಲು ದಯವಿಟ್ಟು ಜಾಗೃತೆ ವಹಿಸಿ ಹಾಗೂ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ಪಡೆದ ನಂತರವೇ ಮುಂದೆ ಹೆಜ್ಜೆ ಇಡಿ.