ಟ್ರಕ್ಕಿನ ಇಂಥ ವಿಚಿತ್ರ ಹಾಗೂ ಅಷ್ಟೇ ತಮಾಷೆಯ ಅಪಘಾತ ನಿಮ್ಮ ಜೀವನದಲ್ಲಿಯೇ ನೊಡಲಿಕ್ಕಿಲ್ಲ! ‘ಆತ್ಮವು ದೇಹವನ್ನೇ ತ್ಯಜಿಸಿದ ಹಾಗಿದೆ’ ಈ ದೃಶ್ಯ ಎನ್ನುತ್ತಿದ್ದಾರೆ ನೆಟ್ಟಿಗರು; ನೋಡಿ ಈ ವೈರಲ್ ವೀಡಿಯೊದಲ್ಲಿ..

ದಿನನಿತ್ಯ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಕೆಲವು ಅಪಘಾತಗಳ ವಿಡಿಯೋಗಳು ಸಹ ಒಮ್ಮೊಮ್ಮೆ ವೈರಲ್ ಆಗುತ್ತಿರುತ್ತವೆ. ಅಪಘಾತಗಳ ವಿಡಿಯೋ ನೋಡಿದಾಗ ಮನಸ್ಸು ಆ ದೃಶ್ಯಗಳಿಗೆ ಮರುಗುತ್ತದೆ. ಹೆಚ್ಚಾಗಿ ಮನಸ್ಸಿಗೆ ಕೆಡುಕೆನಿಸುತ್ತದೆ. ಆದರೆ ಇಲ್ಲಿ ನೀವು ಈ ಅಪಘಾತದ ವೈರಲ್ ವಿಡಿಯೋ ನೋಡಿದಾಗ ಮನಸ್ಸಿಗೆ ನೋವಾಗುವ ಬದಲು ಬಿದ್ದು ಬಿದ್ದು ನಗುತ್ತೀರಿ ಇದು ನೂರಕ್ಕೆ ನೂರು ಪ್ರತಿಶತ ಸತ್ಯ.

ಈ ವೈರಲ್ ವಿಡಿಯೋದಲ್ಲಿ ಒಂದು ಟ್ರಕ್ ಸಾಮಾನುಗಳನ್ನು ಹೊತ್ತುಕೊಂಡು ಓವರ್ಲೋಡ್ ಆಗಿ ಕಚ್ಚಾ ದಾರಿಯಲ್ಲಿ ಬರುತ್ತಿದೆ. ಅಲ್ಲಿ ಮಳೆಯು ಆಗಿದ್ದರಿಂದ ದಾರಿ ಇನ್ನಷ್ಟು ದುಸ್ತರವಾಗಿದೆ. ಹೆಚ್ಚುವರಿ ಭಾರದಿಂದಾಗಿ ಟ್ರಕ್ ರಸ್ತೆಯಲ್ಲಿ ಬರುವಾಗ ಕುಡಿದ ಅಮಲಿನಲ್ಲಿ ಬರುವ ವ್ಯಕ್ತಿಯಂತೆ ತುಗಾಡುತ್ತ ಬರುವ ಹಾಗೆ ಕಂಡು ಬರುತ್ತಿದೆ. ಆಗ ಅಲ್ಲಿ ಒಂದು ತಿರುವು ಬರುತ್ತದೆ. ಅಲ್ಲಿ ಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಅತಿಯಾದ ಭಾರವಿದ್ದ ಕಾರಣಕ್ಕೆ ಟ್ರಕ್ ಪಲ್ಟಿಯಾಗಿ ಬೀಳುತ್ತದೆ. ಟ್ರಕ್ ಬೀಳುವಾಗ ಟ್ರಕ್ಕೀನ ಎರಡು ಹೋಳುಗಳಾಗಿ ಹೋಗುತ್ತದೆ. ಈ ಕಥೆ ಇಷ್ಟಕ್ಕೆ ನಿಲ್ಲದೆ ಮುಂದೆ ಟ್ರಕ್ಕಿನ ಭಾರವಿದ್ದ ಮೇಲ್ಭಾಗ ಅಲ್ಲಿಯೇ ಕುಸಿದು ಬೀಳುತ್ತದೆ. ಅದರ ಜೊತೆಗೆ ಚಾಲಕನು ಸಹ ಅಲ್ಲಿಯೇ ಕೆಳಗೆ ಬೀಳುತ್ತಾನೆ. ಈ ಇನ್ಸಿಡೆಂಟ್ ನಲ್ಲಿ ಇನ್ನೊಂದು ಅದ್ಭುತ ದೃಶ್ಯ ಏನೆಂದರೆ ಟ್ರಕ್ಕಿನ ಡ್ರೈವರ್ ಗೆ ಯಾವುದೇ ರೀತಿಯ ಚಿಕ್ಕ ಪುಟ್ಟ ಗಾಯವು ಆಗದೆ ಸುಖರೂಪವಾಗಿ ಉಳಿಯುತ್ತಾನೆ. ಆದರೆ ಈ ಅಪಘಾತದಲ್ಲಿ ಟ್ರಕ್ ನ ಕೆಳಗಿನ ಭಾಗ ಎಲ್ಲಿಯೂ ನಿಲ್ಲದೇ ಹಾಗೆಯೇ ಮುಂದೆ ಚಲಿಸಲು ಶುರು ಮಾಡುತ್ತದೆ. ಈ ದೃಶ್ಯ ನೋಡಲು ತುಂಬಾ ತಮಾಷೆಯಾಗಿದೆ. ಅದರ ಹಿಂದೆ ಡ್ರೈವರ್ ಸಹ ಹಾಗೆಯೇ ಬೆನ್ನು ಹತ್ತುತ್ತಾನೆ. ಈ ತಮಾಷೆಯ ವಿಡಿಯೋ ನೋಡಿದ ನೆಟ್ಟಿಗರು ಲೈಕ್ಸ್ ಗಳ ಮೇಲೆ ಲೈಕ್ಸ್ ನ ಮಳೆ ಸುರಿಸುತ್ತಿದ್ದಾರೆ.

ನೋಡಿ ಈ ವೈರಲ್ ವಿಡಿಯೋ…

ಈ ದೃಶ್ಯ ನೋಡಿದ ಒಬ್ಬ ನೇಟಿಜನ್ ಆತ್ಮವು ದೇಹವನ್ನು ತ್ಯಜಿಸಿದ ಅದ್ಭುತ ದೃಶ್ಯ ನೋಡಿ ನನ್ನ ಕಣ್ಣುಗಳು ಪಾವನವಾದವು ಎಂದಿದ್ದಾನೆ. ಈ ವಿಡಿಯೋವನ್ನು ಇಂಡಿಯನ್ ಫಾರೆಸ್ಟ್ ಆಫೀಸರ್ ಸುಸಾಂತ್ ನಂದಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಕ್ಯಾಪ್ಶನ್ ನಲ್ಲಿ ಆತ್ಮವು ದೇಹದ ತ್ಯಾಗ ಮಾಡಿತು ಎಂದಿದ್ದಾರೆ.