ಬಾಹುಬಲಿಯ ಖತರ್ನಾಕ್ ವಿಲನ್ ನಿಜ ಜೀವನದಲ್ಲಿ ಹೇಗಿದ್ದಾನೆ ನೋಡಿ, 6 ವರ್ಷ ನಿರೋದ್ಯೋಗಿಯಾಗಿದ್ದ ಇವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ?

ಬಾಹುಬಲಿ ಭಾಗ-1 ರಲ್ಲಿ ಕಾಲಕೇಯನ ಪಾತ್ರದಲ್ಲಿ ಮಿಂಚಿದ ಮತ್ತು ತನ್ನ ವಿಚಿತ್ರ ಭಾಷೆಯಿಂದ ಮನ ಸೆಳೆದ ನಟನನ್ನು ಜನರು ತುಂಬಾ ಮೆಚ್ಚಿದರು. ಅವರ ನಿಜವಾದ ಹೆಸರೇನು ಗೊತ್ತಾ?

ಹಾಗಾದ್ರೆ ಕೇಳಿ, ಕಾಲಕೆಯನ ಪಾತ್ರದಲ್ಲಿ ಮಿಂಚಿದ ವ್ಯಕ್ತಿಯ ಹೆಸರು ಪ್ರಭಾಕರ್. ಬಾಹುಬಲಿಗಿಂತ ಮೊದಲು ರಾಜಾಮೌಳಿ ಅವರ ಮಗಧೀರ ಚಿತ್ರದಲ್ಲಿಯೂ ನಟಿಸಿದ್ದರು. ‘ಮರ್ಯಾದಾ ರಾಮಣ್ಣ’ ಚಿತ್ರವು ಅವರಿಗೆ ಲೈಮ್ ಲೈಟ್ ನಲ್ಲಿ ತಂದಿತು.

ಪ್ರಭಾಕರ್ ಇವರು ಮೂಲತಃ ಮಹಿಬೂಬ್ ನಗರ ಜಿಲ್ಲೆಯ ಕೋಡಂಗಲ್ ಹೆಸರಿನ ಚಿಕ್ಕ ಊರಿನವರು. ಬಾಹುಬಲಿಯಲ್ಲಿ ಭಯಾನಕವಾಗಿ ಕಾಣುವ ಪ್ರಭಾಕರ್ ಅವರು ನಿಜಜೀವನದಲ್ಲಿ ತುಂಬಾ ನಾಚಿಕೆಯುಳ್ಳವರಾಗಿದ್ದಾರೆ. ಒಂದು ಸಂದರ್ಶನದಲ್ಲಿ ಪ್ರಭಾಕರ್ ಅವರು, ‘ನಾನು ಎಂದಿಗೂ ಚಲನಚಿತ್ರದಲ್ಲಿ ಕೆಲಸ ಮಾಡುವ ಬಗ್ಗೆ ವಿಚಾರ ಮಾಡಿರಲಿಲ್ಲ’, ಎಂದು ಹೇಳಿದ್ದರು.

ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಆಟಗಾರನಾಗುವ ಬಗ್ಗೆ ಕನಸು ಕಾಣುತ್ತಿದ್ದೆ. ಒಂದು ಸಲ PUC ಮುಗಿದ ನಂತರ ನೆಂಟರ ಮದುವೆಗಾಗಿ ಹೈದರಾಬಾದಕ್ಕೆ ಹೋಗಿದ್ದೆ. ನನ್ನ ವ್ಯಕ್ತಿತ್ವವನ್ನು ನೋಡಿ ಸಂಬಂಧಿಕರು ನನಗೆ ರೇಲ್ವೆ ಪೊಲೀಸ್ ಮಾಡುವದಾಗಿ ಭರವಸೆ ನೀಡಿದರು.

ನಾನು 6 ವರ್ಷಗಳವರೆಗೆ ಈ ನೌಕರಿಗಾಗಿ ದಾರಿ ಕಾಯಬೇಕಾಯಿತು. ಆದರೆ ನೌಕರಿ ಮಾತ್ರ ದೊರೆಯಲಿಲ್ಲ, ಕೊನೆಗೆ ಬೇರೆ ನೌಕರಿಗಾಗಿ ಹೈದರಾಬಾದಿಗೆ ಬಂದೆ.

ಪ್ರಭಾಕರ್ ಅವರು ಹೇಳುವ ಹಾಗೆ, ನೌಕರಿಯ ಶೋಧದಲ್ಲಿದ್ದಾಗ ಎಸ್. ಎಸ್. ರಾಜಾಮೌಳಿಯವರ ದಿಗ್ದರ್ಶನದಲ್ಲಿ ಮಗಧೀರ ಚಿತ್ರಕ್ಕಾಗಿ ಆಡಿಷನ್ ನಡೆದಿತ್ತಂತೆ. ಆಗ ನನ್ನ ಮಿತ್ರ ನನಗೆ ಏನನ್ನೂ ಹೇಳದೆ ಅಲ್ಲಿಗೆ ಕರೆದೊಯ್ದನು.

ಅಲ್ಲಿಂದ ರಾಜಾಮೌಳಿಯವರು ನನ್ನನ್ನು ರಾಜಸ್ಥಾನಕ್ಕೆ ಕರೆದೊಯ್ದರು. ಮಗಧೀರದ ಶೂಟಿಂಗ್ ರಾಜಸ್ಥಾನದಲ್ಲಿ ನಡೆದಿತ್ತು. ನಾನು ಅಲ್ಲಿ ಸ್ವಲ್ಪ ಕೆಲಸ ಮಾಡಿದೆ, ಮತ್ತೆ ತಿರುಗಿ ಹೈದರಾಬಾದಿಗೆ ಬಂದು ಕೆಲಸ ಹುಡುಕಲಾರಂಭಿಸಿದೆ. ಅದೇ ಸಮಯಕ್ಕೆ ರಾಜಾಮೌಳಿಯವರ ಸಹಾಯಕರ ಕಾಲ್ ಬಂತು. ಆತ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದನು. ಅನಂತರ ನನಗೆ ರಾಜಾಮೌಳಿಯವರು ಮರ್ಯಾದಾ ರಾಮಣ್ಣಾ ಚಿತ್ರದಲ್ಲಿ ನಟಿಸುವ ಆಫರ್ ಕೊಟ್ಟರು.

ನನಗೆ ಅಭಿನಯದ ಬಗ್ಗೆ ಏನೂ ಗೊತ್ತಿರಲಿಲ್ಲ. ರಾಜಾಮೌಳಿಯವರು ನನಗೆ ದೇವದಾಸ್ ಕನಕಲಾದಲ್ಲಿ ಅಭಿನಯವನ್ನು ಕಲಿಯಲು ಕಳಿಸಿದರು. ಆಗ ಪ್ರಭಾಕರ್ ಅವರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಸ್ಟೈಫಂಡ್ ದೊರೆಯುತ್ತಿತ್ತು. ಇದೇ ಹಣದಿಂದ ಅವರು ತಮ್ಮ ಸಾಲವನ್ನು ಮುಟ್ಟಿಸಿದರು.

ಪ್ರಭಾಕರ್ ಅವರ ಪ್ರಕಾರ ತಮ್ಮ ಜೀವನದಲ್ಲಿರುವ ಈ ಭಾರಿ ಬದಲಾವಣೆಯ ಹಿಂದಿನ ವ್ಯಕ್ತಿ ಬರೀ ರಾಜಾಮೌಳಿಯಾಗಿದ್ದಾರೆ. ಅವರು ನನಗೆ ಒಂದು ಹೊಸ ಜೀವನವನ್ನು ಕೊಟ್ಟಿದ್ದಾರೆಂದು ಹೇಳುತ್ತಾರೆ. ಬಾಹುಬಲಿ ಹೊರತಾಗಿ ಅವರು 40 ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ತಪಕಈ, ಡುಕಡು, ಕೃಷ್ಣಮ್ ವಂದೇ ಜಗದ್ಗುರುಮ್ ಚಿತ್ರಗಳ ಸಮಾವೇಶವಾಗಿದೆ.