ಮೆಟ್ಟಿಲುಗಳ ಮೇಲೆ ಕುಳಿತು ಮಾಡಬೇಕೆಂದಿದ್ದಳು ರೀಲ್ಸ್, ಅಲ್ಲಿ ನಡೆದ ಅಕ್ಕನ ಆಕಸ್ಮಿಕ ಅವಾಂತರ ನೋಡಿ ನೀವೂ ಸಹ ಹೊಟ್ಟೆ ಹುಣ್ಣಾಗುವಂತೆ ನಗುವಿರಿ…

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚು ಯುವವರ್ಗದ ಹುಡುಗ-ಹುಡುಗಿಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕಾಗಿ ಯುವಕ ಯುವತಿಯರು ಏನಾದರೊಂದು ಹೊಸ ಹೊಸ ಐಡಿಯಾಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರು ಮಾಡುವ ಐಡಿಯಾಗಳು ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಕೆಲವೊಮ್ಮೆ ಈ ಐಡಿಯಾಗಳು ಕೈಕೊಟ್ಟ ಪರಿಣಾಮದಿಂದಾಗಿ ಅವರು ಅಪೇಕ್ಷಿಸಿದಕ್ಕಿಂತಲೂ ಹೆಚ್ಚಾಗಿ ವಿಡಿಯೋಗಳು ಅಥವಾ ಫೋಟೋಗಳು ಎಲ್ಲ ಕಡೆಗೆ ವೈರಲ್ ಆಗಿಬಿಡುತ್ತವೆ.

ಈಗ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಅಕ್ಕಳ ವಿಡಿಯೋ ಒಂದು ಮತ್ತೆ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಮೆಟ್ಟಿಲ ಮೇಲೆ ಕುಳಿತು ಸುಂದರವಾದ ವಿಡಿಯೋವನ್ನು ತಯಾರಿಸಬೇಕೆಂದಿದ್ದಳು. ಆದರೆ ಆಕೆಯ ದುರದೃಷ್ಟಕ್ಕೆ ತಮಾಷೆಗೆ ಈಡಾಗುವ ವಿಡಿಯೋ ತಯಾರಾಗಿಬಿಟ್ಟಿದೆ. ಮತ್ತು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನೇಟಿಜನ್ಸ್ ಗಳಿಗೆ ಹೊಸ ಕಂಟೆಂಟ್ ಒಂದನ್ನು ತಂದುಕೊಟ್ಟಿತು. ಹುಡುಗಿ ಮೆಟ್ಟಿಲುಗಳ ಮೇಲೆ ಕುಳಿತು ಇನ್ನೇನು ತನ್ನ ಆಕ್ಟಿಂಗ್ ಶುರುಮಾಡಬೇಕು ಎನ್ನುವಷ್ಟರಲ್ಲಿ ಅಕ್ಕಳ ಕಾಲು ಮೆಟ್ಟಿಲು ಮೇಲಿಂದ ಕೆಳಗೆ ಜಾರಿ ಬಿಟ್ಟಿದೆ. ಇದೇ ಕಾರಣಕ್ಕೆ ಅಕ್ಕ ಮುಂದೆ ಮೆಟ್ಟಿಲುಗಳ ಧಡ್ ಧಡ್ ಎಂದು ಮೇಲಿಂದ ಸರಸರನೆ ಜಾರುತ್ತ ಕೆಳಗೆ ಹೋಗಿ ತಲೆ ಕೆಳಗಾಗಿ ಬಿದ್ದಿದ್ದಾಳೆ. ಕೆಳಗೆ ಆಡುತ್ತಿರುವ ಮಕ್ಕಳಿಗೂ ಸಹ ಒಮ್ಮೆಲೆ ಏನಾಯಿತು ಎಂಬ ಪ್ರಶ್ನೆ ಮೂಡಿತ್ತು. ಈ ಹುಡುಗಿಯ ದುರ್ಭರವಾದ ಪರಿಸ್ಥಿತಿ ನೋಡಿದರೆ ಇನ್ನು ಮುಂದೆ ಎಂದಿಗೂ ಆಕೆ ಕ್ಯಾಮೆರಾದ ಮುಂದೆ ನಿಲ್ಲುವದಿಲ್ಲ ಎಂದೆನಿಸುತ್ತದೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ. ಬರೀ ವ್ಯೂವ್ಸ್ ಮತ್ತು ಲೈಕ್ಸ್ ಗಳಿಗಾಗಿ ಈ ರೀತಿಯ ವಿಡಿಯೋ ಇನ್ನೆಂದು ಮಾಡುವುದಿಲ್ಲವೆಂಬ ಪ್ರತಿಜ್ಞೆ ಈಕೆ ತೆಗೆದುಕೊಂಡಿರಬೇಕು.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ಹಳೆಯದಾದರೂ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಲಾಗಿದೆ. ಯಾವುದೇ ರೀತಿಯ ವಿಡಿಯೋಗಳನ್ನು ಮಾಡುವಾಗ ಈಕೆಯ ಜೊತೆ ನಡೆದ ಪ್ರಸಂಗ ನಿಮ್ಮ ಜೊತೆಗೆ ನಡೆಯದಂತೆ ಜಾಗೃತಿ ವಹಿಸಿದರೆ ಸಾಕು.