ಬಿಸಿಲಿನ ಬೇಗೆಯಿಂದ ಕಾಪಾಡಿಕೊಳ್ಳಲು ಕಂಡು ಹಿಡಿದನು ಕಡಿಮೆ ಖರ್ಚಿನ ಭರ್ಜರಿ ದೇಸಿ ಕೂಲರ್…ನೀರಿನ ಡ್ರಮ್ ನಲ್ಲಿಯೇ ತಯಾರಿಸಿದನು ಸ್ಟೈಲಿಶ್ Cooler!

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಅನೇಕ ವಿಡಿಯೋಗಳು ವಿಧವಿಧ ಕಲ್ಪನೆ ತುಂಬಿದ ಹೊಸ ಹೊಸ ದೇಸಿ ಐಡಿಯಾಗಳಿಂದ ಏನಾದರೂ ಹೊಸದನ್ನು ನಿರ್ಮಿಸಿದ ವಿಷಯಗಳಿರುತ್ತವೆ. ಈಗ ಇದೇ ರೀತಿ ದೇಶಿ ಐಡಿಯಾದಿಂದ ತಯಾರಾದ ಕೂಲರ್ ಒಂದು ಭರ್ಜರಿಯಾಗಿ ಸಂಚಲನ ಮೂಡಿಸಿದೆ. ಕಾರಣ ಬೇಸಿಗೆಯಲ್ಲಿ ಕೂಲರ್ ಕೆಲಸ ತುಂಬಾ ಮಹತ್ವದ್ದಾಗಿದೆ. ಮತ್ತು ಹೆಚ್ಚು ಕಡಿಮೆ ಎಲ್ಲರಿಗೂ ಇದು ತುಂಬಾ ಅವಶ್ಯಕವಾಗಿದೆ. ಬೇಸಿಗೆಯ ಬೇಗೆಯಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ನೀರಿನ ಡ್ರಮ್ ನಿಂದಲೇ ಸ್ಟೈಲಿಶ್ ಕೂಲರ್ ಒಂದನ್ನು ತಯಾರಿಸಲಾಗಿದೆ. ನೋಡಿ ಹೇಗೆ ಅಂತ…

ಭರ್ಜರಿಯಾಗಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬರುತ್ತಿರುವ ಬೇಸಿಗೆಯ ಸಲುವಾಗಿ ಕೂಲರ್ ಒಂದನ್ನು ತಯಾರಿಸಿದ್ದಾನೆ. ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಂಡು ತಂಪಾದ ಗಾಳಿಯನ್ನು ಪಡೆದುಕೊಳ್ಳಲು ಒಂದು ಒಳ್ಳೆಯ ಐಡಿಯಾ ಕಂಡುಹಿಡಿದಿದ್ದಾನೆ. ವ್ಯಕ್ತಿಯು ಮನೆಯಲ್ಲಿರುವ ನೀರಿನ ಡ್ರಮ್ ನಿಂದಲೇ ಕೂಲರ್ ಒಂದನ್ನು ತಯಾರಿಸಿದ್ದಾನೆ.

ವಿಡಿಯೋದಲ್ಲಿ ನೀರಿನ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ ಕಾಣುತ್ತಿದೆ. ವ್ಯಕ್ತಿಯು ಅದರಲ್ಲಿ ಎಕ್ಸಾಸ್ಟ್ ಫ್ಯಾನ್ ಉಪಯೋಗಿಸಿ ಕೂಲರ್ ತಯಾರಿಸಿದ್ದಾನೆ. ತಂಪಾದ ಹವೆಯು ಹೊರಗೆ ಬರುವ ಸಲುವಾಗಿ ಟ್ಯಾಂಕ್ ನಲ್ಲಿ ಸುತ್ತಲೂ ಹುಲ್ಲನ್ನು ಉಪಯೋಗಿಸಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by DESI JUGAD (@desijugad7)

ಈ ಕೂಲರ್ ದೇಸಿ ಐಡಿಯಾದಿಂದ ತಯಾರಿಸಿದರೂ ಕಾಣಲು ಮಾತ್ರ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ desijugad7 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ. ಪ್ರಸ್ತುತ ಐಡಿಯಾ ತುಂಬಾ ಕಡಿಮೆ ಖರ್ಚಿನಲ್ಲಿ ನಿರ್ಮಾಣವಾಗಿದೆ. ನೇಟಿಜನ್ಸ್ ಗಳು ಇದನ್ನು ನೋಡಿ ಹಾಡಿಹೊಗಳಿದ್ದಾರೆ.