ಹುಟ್ಟಿದ ಹಸುಗೂಸಿಗೂ ಏರಿತು ಪುಷ್ಪ ಫೀವರ್! IAS ಅಧಿಕಾರಿಯೊಬ್ಬರು ಶೇರ್ ಮಾಡಿದರು ಈ ಸೂಪರ್ ವೈರಲ್ ವಿಡಿಯೋ!

ಹುಟ್ಟಿದ ಹಸುಗೂಸಿಗೂ ಏರಿತು ಪುಷ್ಪ ಫೀವರ್! IAS ಅಧಿಕಾರಿಯೊಬ್ಬರು ಶೇರ್ ಮಾಡಿದರು ಈ ಸೂಪರ್ ವೈರಲ್ ವಿಡಿಯೋ!

ತೆಲುಗು ತಾರೆ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ನಟಿಸಿದ ‘ಪುಷ್ಪ ದ ರೈಸ್’ ಚಿತ್ರ ಜಗತ್ತಿನ ತುಂಬ ಅದ್ಭುತವಾಗಿ ಅಬ್ಬರಿಸಿತು. ಈ ಚಿತ್ರದಲ್ಲಿರುವ ಅದ್ಭುತ ಸಂವಾದ ಮತ್ತು ಸುಂದರ ಹಾಡುಗಳಿಗೆ ಹುಕ್ ಸ್ಟೆಪ್ಸ್ ಮೇಲೆ ತಯಾರಿಸಿದ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಹಸುಗೂಸಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೇಟಿಜನ್ಸಗಳಿಗೆ ಪುಷ್ಪ ನ ‘ಮೈ ಝುಕೆಗಾ ನಹಿ’ ಪ್ರಸಿದ್ಧ ಡೈಲಾಗ್ ನೆನಪಿಗೆ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಈ ವಿಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳು ಈ ಮಗುವಿನ ಸ್ಟೈಲಿಗೆ ಮರುಳಾಗಿದ್ದಾರೆ.

ಬರಿ ಮೂರೇ ಮೂರು ಸೆಕೆಂಡಿನ ಈ ವಿಡಿಯೋದಲ್ಲಿ ಮಗು ಪುಷ್ಪಾದ ಸಿಗ್ನೇಚರ್ ಸ್ಟೆಪ್ ಮಾಡುತ್ತಿರುವುದು ಕಂಡುಬರುತ್ತದೆ. ಈ ಕ್ಲಿಪ್ ಗೆ ಪುಷ್ಪ ಚಿತ್ರದ ಜನಪ್ರಿಯ ಡೈಲಾಗ್ ‘ಮೈ ಝಕೆಗಾ ನಹಿ’ ವಾಯ್ಸ್ ಓವರ್ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ನೋಡಲು ಮತ್ತಷ್ಟು ಚೆನ್ನಾಗಿದೆ.

ವೀಡಿಯೋ ನೋಡಿ

ಈ ವೀಡಿಯೋವನ್ನು ಐಎಎಸ್ ಅಧಿಕಾರಿಯಾದ ಅವನಿಷ್ ಶರನ್ ಅವರು ಸೋಮವಾರದಂದು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಕ್ಯಾಪ್ಷನ್ ನಲ್ಲಿ “ಯೆ ತೋ ಪಕ್ಕಾ ಝೂಕೆಗಾ ನಹಿ” ಬೇರೆ ಎಂದಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಸಾವಿರಾರು ಜನರು ನೋಡಿ ಸುಮಾರು 2000 ವರೆಗೆ ರಿಟ್ವೀಟ್ ಗಳು ಬಂದಿವೆ. ಒಬ್ಬನಂತೂ “ಈ ಮಗುವಿನ ತಾಯಿ ಈತನಿಗೆ ಜನ್ಮ ನೀಡುವ ಮೊದಲು ಪುಷ್ಪ ಚಿತ್ರ ನೋಡಿರಬೇಕು” ಎಂದಿದ್ದಾನೆ.