ನಿದ್ರಾದೇವಿ ಆವರಿಸಲು ಶುರು ಮಾಡಿದ್ರೆ ಕಂಟ್ರೋಲ್ ಮಾಡಲು ಕಷ್ಟಸಾಧ್ಯ! ವಿದ್ಯಾರ್ಥಿಯ ಪರಿಸ್ಥಿತಿ ಈ ವೈರಲ್ ವಿಡಿಯೋದಲ್ಲಿ ನೋಡಿದರೆ ಅಯ್ಯೋ ಪಾಪ ಎನ್ನುವದು ಮನ…

ನಿದ್ರೆಯು ಪ್ರಾಣಿಗಳಿಗೆ ನಿಸರ್ಗ ನೀಡಿದ ಅದ್ಭುತವಾದ ವರದಾನವಾಗಿದೆ. ನಿದ್ರೆಯು ಒಂದುವೇಳೆ ಇಲ್ಲದೇ ಇದ್ದರೆ ಈ ಜೀವಜಗತ್ತು ಜೀವಂತವೇ ಇರುತ್ತಿರಲಿಲ್ಲವೇನೋ ಎನಿಸುತ್ತದೆ. ದೊಡ್ಡವರೇ ಆಗಲಿ ಚಿಕ್ಕವರೇ ಆಗಲಿ ಎಲ್ಲರಿಗೂ ನಿದ್ರೆ ತುಂಬಾ ಅಗತ್ಯವಾಗಿದೆ. ಹುಟ್ಟಿದ ಹಸುಗೂಸುಗಳು ದಿನದಲ್ಲಿ 16 ರಿಂದ 18 ಗಂಟೆ ನಿದ್ರೆ ಮಾಡುತ್ತದೆ. ದೊಡ್ಡವರಾದಂತೆ ನಿದ್ರೆಯು ಕಡಿಮೆಯಾಗುತ್ತಾ ಹೋಗುತ್ತದೆ. ನಿದ್ರೆಯು ಪ್ರತಿಯೊಂದು ಜೀವಿಗೆ ತುಂಬಾ ಅಗತ್ಯವಾಗಿದೆ. ನಿದ್ರೆ ಸರಿಯಾಗಿ ಆಗದಿದ್ದರೆ ವ್ಯಕ್ತಿಯ ಆರೋಗ್ಯ ಹದಗೆಡಲು ಶುರುವಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಇದೇ ನಿದ್ರೆಗೆ ಸಂಬಂಧಿಸಿದ ವಿದ್ಯಾರ್ಥಿಯ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಎಲ್ಲಿಯದು ಎಂಬುದು ತಿಳಿದುಬಂದಿಲ್ಲ. ಆದರೆ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯಾಗಿ ಹರೇಂದ್ರ ಕೆ ಸಿಂಗ್ ಅವರು ಆರು ದಿನಗಳ ಹಿಂದೆ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷ 76 ಸಾವಿರ ಜನರು ವೀಕ್ಷಿಸಿದ್ದಾರೆ. ಮತ್ತು ಈ ವಿಡಿಯೋಗೆ ಸುಮಾರು 11 ಸಾವಿರ ಲೈಕ್ಸ್ ಗಳು ಬಂದಿವೆ.

ವಿಡಿಯೋದಲ್ಲಿ ಕಂಡುಬರುವ ದೃಶ್ಯವೆಂದರೆ ವಿದ್ಯಾರ್ಥಿಗಳು ಹಾಲ್ ನಲ್ಲಿ ಸಾಲಾಗಿ ಕುಳಿತು ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಇದೇ ಪ್ರಾರ್ಥನೆಯ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಜೋರಾಗಿ ನಿದ್ರೆ ಬಂದಿದೆ. ನಿದ್ರೆಯಿಂದಾಗಿ ವಿದ್ಯಾರ್ಥಿ ಒಂದೇ ಸವನೆ ಕುಳಿತಲ್ಲಿಯೇ ಬ್ಯಾಲೆನ್ಸ್ ಕಳೆದುಕೊಳ್ಳುತ್ತಿದ್ದಾನೆ. ಆತನ ಹಿಂದೆ ಕುಳಿತ ವಿದ್ಯಾರ್ಥಿಯೊಬ್ಬ ಪದೇಪದೇ ಆತನನ್ನು ನಿದ್ರೆಯಿಂದ ಎಚ್ಚೆತ್ತುಕೊಳ್ಳಲು ಜಾಗೃತ ಮಾಡುತ್ತಿದ್ದಾನೆ. ಆದರೆ ವಿದ್ಯಾರ್ಥಿಗೆ ಮಾತ್ರ ಏನೇ ಆದರೂ ನಿದ್ರೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ನೋಡಿ ಈ ವೀಡಿಯೋ…

ಈ ದೃಶ್ಯ ನೋಡಿದಾಗ ತಮಾಷೆಯ ಜೊತೆಗೆ ಮನಸ್ಸಿಗೆ ಕೆಡಕೆನಿಸುತ್ತದೆ. ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದೇವೆ ಏನೋ ಎಂಬ ಭಾವನೆ ನೋಡುಗರ ಮನಸ್ಸಿನಲ್ಲಿ ಹುಟ್ಟುತ್ತಿದೆ. ಜಿಗಿದಾಡುವ, ಓಡಾಡುವ, ಆಟ ಆಡುವ, ತುಂಟಾಟ ಮಾಡುವ ಈ ವಯಸ್ಸಿನಲ್ಲಿ ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಈ ರೀತಿಯಾಗಿ ತೀರಾ ಕಡ್ಡಾಯವಾಗಿ ಶಿಕ್ಷಣಕ್ಕೆ ಗುರಿ ಮಾಡುವದು ಎಷ್ಟರ ಮಟ್ಟಿಗೆ ಸರಿ ಎಂದು ನೇಟಿಜನ್ಸ್ ಗಳು ಕೇಳುತ್ತಿದ್ದಾರೆ.