ವಾಲಿಬಾಲ್ ಪಂದ್ಯದಲ್ಲಿ ಫುಟ್ಬಾಲ್ ಕಿಕ್! ಅದ್ಭುತ ಕಿಕ್ ನಿಂದ ಒಂದು ಪಾಯಿಂಟ್ ಗಳಿಸಿದ ಆಟಗಾರನ ಈ ಅಚ್ಚರಿ ಪಡುವ ಅದ್ಭುತ ವೈರಲ್ ವಿಡಿಯೋ ನೋಡಿ…
ಪ್ರತಿಯೊಂದು ಆಟ ಮನುಷ್ಯನಿಗೆ ಮಾನಸಿಕವಾಗಿ, ದೈಹಿಕವಾಗಿ ಬಲವನ್ನು ನೀಡುತ್ತವೆ. ಆಟಗಳಿಂದ ಮನುಷ್ಯ ಬಾಳುವ ಬದುಕಿನಲ್ಲಿಯೂ ಸ್ಥೈರ್ಯ ಕಂಡುಕೊಳ್ಳುತ್ತಾನೆ. ಒಬ್ಬೊಬ್ಬರಿಗೆ ಒಂದೊಂದು ಆಟ ಇಷ್ಟವಾಗುತ್ತದೆ. ಹಾಗೆ ನೋಡಲಾಗಿ ಭಾರತದ ರಾಷ್ಟ್ರೀಯ ಆಟ ಹಾಕಿ ಇದ್ದರೂ ಕ್ರಿಕೆಟ್ ಫೀವರ್ ಮಾತ್ರ ಇಲ್ಲಿ ಜಾಸ್ತಿ ಇದ್ದದ್ದು ಕಂಡು ಬರುತ್ತದೆ. ಅದೇ ರೀತಿ ಕೆಲವು ಆಟಗಾರರೂ ಆಟಗಳಲ್ಲಿಯೇ ತಮ್ಮ ಕರಿಯರ್ ಮಾಡಿಕೊಂಡಿರುತ್ತಾರೆ. ಅದಕ್ಕೆ ಕಾರಣ ಆಟದ ಮೇಲಿನ ಅವರ ಪ್ರಭುತ್ವ ಅವರಿಗೆ ಆ ಮಟ್ಟಕ್ಕೆ ಒಯ್ದು ನಿಲ್ಲಿಸಿರುತ್ತದೆ.
ಈಗ ಇಲ್ಲಿ ನೀವು ನೋಡುವ ವಿಡಿಯೋ ಒಂದು ಆಟಕ್ಕೆ ಸಂಬಂಧಿಸಿದ್ದೇ ಆಗಿದೆ. ಇಲ್ಲಿ ವಾಲಿಬಾಲ್ ಆಟ ಆಡುತ್ತಿದ್ದಾರೆ. ಆದರೆ ಆಟದ ಮಧ್ಯೆ ಆಟಗಾರನೊಬ್ಬ ನೆಟ್ ಮೇಲಿಂದ ಕಾಲಿನಿಂದ ಹೊಡೆದ ಕಿಕ್ ನೋಡಲು ಅದ್ಭುತ ಮತ್ತು ಆಶ್ಚರ್ಯ ಪಡುವಂಥದ್ದು ಆಗಿದೆ. ತನ್ನದೇ ಟೀಮ್ ನ ಸದಸ್ಯ ಪಾಸ್ ಮಾಡಿದ ಬಾಲನ್ನು ಆಟಗಾರನೊಬ್ಬ ನೆಟ್ ಗೆ ತುಂಬಾ ಹತ್ತಿರದಲ್ಲಿಯೇ ಹೋಗಿ ಕ್ಲೋಸ್ ಆಗಿ ಜಂಪ್ ಮಾಡಿ ನೆಟ್ ಮೇಲಿಂದ ಎದುರಿನ ತಂಡದ ಕಡೆಗೆ ಕಾಲಿನಿಂದ ಕಿಕ್ ಹೊಡೆದು ಒಂದು ಪಾಯಿಂಟ್ ಗಳಿಸಿದ್ದು ನೋಡಲಿಕ್ಕೆ ನಿಜಕ್ಕೂ ಅದ್ಭುತವಾಗಿದೆ ಎನ್ನಬಹುದು. ಎದುರಿನ ಆಟಗಾರ ಕಿಕ್ ನಿಂದ ಹೊಡೆದ ಆಟಗಾರನ ಸ್ಟೈಲ್ ಮತ್ತು ಕಿಕ್ ನೋಡಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನೇ ನೀಡಿಲ್ಲ.
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು football_hd ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 38 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.