ಫೋಟೋ ಸರಿಯಾಗಿ (ಜೂಮ್ ಬೇಕಾದರೂ ಮಾಡಿ) ನೋಡಿ, ಮೆಟ್ಟಿಲುಗಳ ಮೇಲೆ ಕಾಣುವ ಬೆಕ್ಕು ಇಳಿಯುತ್ತಿದೆಯೇ? ಅಥವಾ ಏರುತ್ತಿದೆ? ಹೇಳಿ ನೋಡೋಣ.
ಆಪ್ಟಿಕಲ್ ಇಲ್ಯುಜನ್ ಬಗ್ಗೆ ನಿಮಗೆ ಗೊತ್ತೇ ಇರಬೇಕು. ಇಲ್ಲಿಯವರೆಗೆ ಈ ರೀತಿಯ ಅನೇಕ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ನೇಟಿಜನ್ಸ್ ಗಳು ಸಹ ಇದಕ್ಕೆ ತುಂಬಾನೇ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಈ ರೀತಿಯ ಚಿತ್ರಗಳು ನಮ್ಮ ಕಣ್ಣುಗಳಿಗೆ ಮತ್ತು ಮೈಂಡ್ ಗೆ ತುಂಬಾನೇ ಕನ್ಫ್ಯೂಸ್ ಮಾಡುತ್ತವೆ. ಆದರೂ ನೆಟ್ಟಿಗರು ಅವುಗಳಲ್ಲಿ ಅಡಗಿದ ಪ್ರಶ್ನೆಗೆ ಸರಿಯಾದ ಉತ್ತರ ಹುಡುಕುವುದರಲ್ಲಿ ತಮ್ಮ ಇಂಟರೆಸ್ಟ್ ತೋರಿಸಿಯೇ ತೋರಿಸುತ್ತಾರೆ.
ಈಗ ಇದೇ ರೀತಿಯ ಆಪ್ಟಿಕಲ್ ಇಲ್ಯೂಜನ್ ನ ಬೇರೆಯಾದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಯೊಂದು ತೆಗೆದುಕೊಂಡು ಸುತ್ತಾಡುತ್ತಿದೆ. ಚಿತ್ರದಲ್ಲಿ ಮೆಟ್ಟಿಲುಗಳ ಮೇಲೆ ಒಂದು ಬೆಕ್ಕು ಕಂಡು ಬರುತ್ತಿದೆ. ಆ ಬೆಕ್ಕು ಮೆಟ್ಟಿಲುಗಳ ಮುಖಾಂತರ ಕೆಳಗೆ ಇಳಿಯುತ್ತಿದೆಯೋ ಅಥವಾ ಮೇಲೆ ಏರಿ ಬರುತ್ತಿದೆ ಎಂಬುದು ತಿಳಿದು ಬರುತ್ತಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಕಣ್ಣುಗಳು ಭ್ರಮೆಯಲ್ಲಿ ಒದ್ದಾಡುತ್ತಿದೆ. ನಿಮ್ಮ ಮನಸ್ಸಿನ ಮೇಲೂ ಇದು ತುಂಬಾ ಡಿಪೆಂಡ್ ಆಗಿದೆ. ಕಾರಣ ನಾವು ವಿಚಾರ ಹೇಗೆ ಮಾಡುತ್ತೇವೆಯೋ ಹಾಗೆಯೇ ಬೆಕ್ಕು ಆ ಭಂಗಿಯಲ್ಲಿ ಕಂಡು ಬರುತ್ತಿದೆ.

ಈ ಕನ್ಫ್ಯೂಸ್ ಮಾಡುವ ಚಿತ್ರವನ್ನು ಮೊದಲಿಗೆ ದ ಮೈಂಡ್ಸ್ ಜರ್ನಲ್ ಶೇರ್ ಮಾಡಿತ್ತು. ಅದರಲ್ಲಿ ಈ ಬೆಕ್ಕು ಮೆಟ್ಟಿಲುಗಳನ್ನು ಏರಿ ಬರುತ್ತಿದೆ ಎಂದು ಹೇಳಲಾಗಿದೆ. ಆದರೆ ಪ್ರಸ್ತುತ ಫೋಟೋ ನೋಡಿ ನೀವು ಏನು ಹೇಳುತ್ತೀರಿ ಅಥವಾ ನಿಮಗೆ ಏನನ್ನಿಸುತ್ತದೆ?
ಫೇಸ್ಬುಕ್ ನಲ್ಲಿ ಮಾತ್ರ ಈ ಫೋಟೋ ಮೇಲಿಂದ ತುಂಬಾ ವಾದಗಳು ನಡೆಯುತ್ತಿವೆ. ಕೆಲವರು ಕೆಳಗೆ ಇಳಿದು ಬರುತ್ತಿದೆ ಎಂದು ಹೇಳಿದರೆ ಇನ್ನು ಕೆಲವರು ಮೇಲೇರಿ ಬರುತ್ತಿದೆ ಎನ್ನುತ್ತಿದ್ದಾರೆ. ಈಗ ನೀವೂ ಸಹ ಸರಿಯಾಗಿ ನೋಡಿ ಹೇಳಿ, ನಿಮ್ಮ ಪ್ರಕಾರ ಬೆಕ್ಕು ಯಾವ ಕಡೆಗೆ ಅಂದರೆ ಮೇಲೆ ಬರುತ್ತಿದೆಯೋ ಅಥವಾ ಕೆಳಗೆ ಇಳಿಯುತ್ತಿದೆಯೋ ಎಂಬುದನ್ನು ಉತ್ತರಿಸಿ ನೋಡುವಾ.