ಅಪ್ಪ ಪುಟ್ಟ ಮಗಳಿಗೆ ಆಡಿಸುತ್ತಾ ಊಟ ಮಾಡಿಸುತ್ತಿದ್ದನು ಉತ್ಸಾಹದಲ್ಲಿ; ನಂತರ ಮಗಳು ಕ್ಷಣದಲ್ಲಿ ಅಪ್ಪನಿಗೆ ಕೊಟ್ಟಳು ಒಂದೇ ಒಂದು ಸೂಪರ್ ಡೋಸ್..! ನೋಡಿ ಈ ವಿಡಿಯೋದಲ್ಲಿ.
ತಂದೆ ಮಗಳ ವಾತ್ಸಲ್ಯ, ಮಮತೆ ಊಹೆಗೂ ಮೀರಿ, ಬಾನಿಗೂ ನಿಲುಕದ, ಲೆಕ್ಕಕ್ಕೂ ಬಾರದ ಅದ್ಭುತ ಬಂಧವಿದೆ ಎಂದರೆ ಸುಳ್ಳಲ್ಲ. ಮಗಳಿಗೆ ಯಾವ ರೀತಿಯ ನೋವು ಆಗದ ಹಾಗೆ ಯುವರಾಣಿಯಂತೆ ನೋಡಲು ಬಯಸುತ್ತಾನೆ ತಂದೆ. ಅಷ್ಟೊಂದು ವಾತ್ಸಲ್ಯವನ್ನು ಮಗಳ ಮೇಲೆ ಇಟ್ಟು ಕೊಂಡಿರುತ್ತಾನೆ ತಂದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಂದೆ ಮಗಳ ಇದೇ ಪ್ರೀತಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಪುಟ್ಟ ಮಗಳಿಗೆ ಚಿಕ್ಕ ಚೇರ್ ಅಟ್ಯಾಚ್ ಟೇಬಲ್ ಮೇಲೆ ಕೂಡಿಸಿ ತಂದೆಯು ಪ್ರೀತಿಯಿಂದ ಉಣಬಡಿಸತ್ತಿದ್ದಾನೆ. ಈ ಕೆಲಸವನ್ನು ಮಾಡುವಾಗ ತಂದೆಯು ತನ್ನ ಪುಟ್ಟಮ್ಮನಿಗೆ ಆಡಿಸುತ್ತಾ, ನಗಿಸುತ್ತಾ ತಮಾಷೆ ಮಾಡುತ್ತಾ ಬಾಯಿಯಲ್ಲಿ ಆಹಾರವನ್ನು ಸ್ಪೂನ್ ನಿಂದ ಹಾಕುತ್ತಿದ್ದಾನೆ. ಮಗು ಸಹಿತ ತಂದೆಯ ಆಟಕ್ಕೆ ಸ್ಪಂದಿಸುತ್ತಾ ಊಟ ಮಾಡುತ್ತಿದೆ. ಮಗಳು ಊಟ ಮಾಡುವದನ್ನು ನೋಡಿ ತಂದೆ ಅತೀ ಉತ್ಸಾಹದಿಂದ ಶಬ್ದ ಮಾಡುತ್ತಾ ಆಹಾರವನ್ನು ಬಾಯಿಯಲ್ಲಿ ಹಾಕುತ್ತಿದ್ದಾನೆ. ಅದೇ ಸಂದರ್ಭದಲ್ಲಿ ಮಗಳು ಅಪ್ಪನ ಕಾಪಿ ಹೊಡೆಯಲು ಹೋಗಿ ಕೈಗಳಿಂದ ಆಹಾರ ತುಂಬಿದ ಬಾವುಲ್ ಗೆ ಫಟ್ ಅಂತ ಹೊಡೆದು ಬಿಡುತ್ತಾಳೆ. ಕ್ಷಣಾರ್ಧದಲ್ಲಿ ಬಟ್ಟಲಲ್ಲಿ ಇದ್ದ ಆಹಾರ ಟೇಬಲ್ ಮೇಲೆ ಚೆಲ್ಲಾಪಿಲ್ಲಿ ಆಗಿ ಬಿಡುತ್ತದೆ. ಉತ್ಸಾಹದಿಂದ ಉಣಬಡಿಸುತ್ತಿರುವ ತಂದೆಯ ಮುಖ ಆಗ ಗಮನಿಸುವಂತಿದೆ. ಈ ಘಟನೆಯ ನಂತರ ಅಲ್ಲಿಯೇ ವಿಡಿಯೋ ಮಾಡುತ್ತಿದ್ದ ತಾಯಿ ಮಾತ್ರ ತನ್ನ ಗಂಡನ ಫಜೀತಿ ನೋಡಿ ಮುಕ್ತವಾಗಿ ನಗುತ್ತಿದ್ದುದು ಕೇಳಿ ಬರುತ್ತದೆ.
ವಿಡಿಯೋ ನೋಡಿ
View this post on Instagram
ಈ ಮುಗ್ಧ ಮಗುವಿನ ಸುಂದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ hepgul5 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ಪುಟ್ಟಿಯು ಮಾಡಿದ ಅವಾಂತರದ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿ ವಿವಿಧ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ. ಮಗು ನೀಡಿದ ಸರ್ಪ್ರೈಸ್ ತಂದೆಗೆ ತುಂಬಾ ಜೋಕೆ ಎನ್ನುವಂತಾಗಿದೆ, ಅಲ್ವೇ?