ಬಾಯಿಯಲ್ಲಿ ಸಿಗರೇಟ್ ಹಿಡಿದು ಈ ಬಹಾದ್ದೂರ್ ಹುಡುಗಿ ರಸ್ತೆಯಲ್ಲಿ ಬಿದ್ದ ವಿಷಕಾರಿ ಹಾವಿನ ಜೊತೆಗೆ ಮಾಡಿದ ಕೃತ್ಯ ನೋಡಿ ನೇಟಿಜನ್ಸ್ ಗಳು ಏರಿಸಿದರು ಹುಬ್ಬು! ವೈರಲ್ ಆಯಿತು ವಿಡಿಯೋ…
ಹಾವುಗಳನ್ನು ಹಿಡಿಯುವುದು ಇದು ಚಿಕ್ಕ ಹುಡುಗರ ಕೆಲಸವಲ್ಲ. ಅದಕ್ಕೆ ಸರಿಯಾದ ತರಬೇತಿ ಪಡೆದಿರಬೇಕು. ಅದರಲ್ಲೂ ವಿಷಕಾರಿ ಹಾವುಗಳನ್ನು ಹಿಡಿಯುವುದೆಂದರೆ ಜೀವ ಮುಷ್ಟಿಯಲ್ಲಿ ಹಿಡಿದುಕೊಂಡೆ ಈ ಕೆಲಸ ಮಾಡಬೇಕಾಗುತ್ತದೆ. ಅಲ್ಲಿ ಸ್ವಲ್ಪೇ ಸ್ವಲ್ಪ ಮೈಮರೆತರೆ ಸಾಕು ಜೀವ ಕಳೆದುಕೊಳ್ಳುವುದು ನಿಶ್ಚಿತ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಹಾವಿನ ಜೊತೆಗಿನ ಯುವತಿಯ ಈ ವಿಡಿಯೋ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸುವದು.
ಈ ಯುವತಿಯ ವಿಡಿಯೋ ನೋಡಿ ಸೋಶಿಯಲ್ ಮೀಡಿಯಾ ಯೂಸರ್ಸ್ ಗಳು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಕಾರಣ ಈ ಯುವತಿಯು ರಸ್ತೆಯಲ್ಲಿ ಬಿದ್ದಿರುವ ವಿಷಕಾರಿಯಾದ ಹಾವನ್ನು ಭಯವಿಲ್ಲದೆ ಅಷ್ಟೇ ಸಹಜವಾಗಿ ರಸ್ತೆ ಮೇಲೆ ಬಿದ್ದ ಕಸವನ್ನು ಎತ್ತಿ ಬದಿಗೆ ಒಗೆದ ಹಾಗೆ ಮಾಡಿದ್ದಾಳೆ. ಜೊತೆಗೆ ಈ ಕೆಲಸವನ್ನು ಮಾಡುವಾಗ ಕೈಯಲ್ಲಿರುವ ಸಿಗರೇಟ್ ಬಾಯಲ್ಲಿಟ್ಟುಕೊಂಡು ತುಂಬಾ ಸಹಜವಾಗಿ ಯಾವುದೇ ಹೆದರಿಕೆ ಇಲ್ಲದೆ ವರ್ತಿಸಿದ್ದಾಳೆ. ಪ್ರಸ್ತುತ ವಿಡಿಯೋ ಬ್ರೆಜಿಲ್ ದೇಶದಲ್ಲಿಯದೆಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಕಾಣುವ ಹಾಗೆ ರಸ್ತೆ ಮಧ್ಯದಲ್ಲಿ ಬಿದ್ದಿರುವ ವಿಷಕಾರಿ ರಸೆಲ್ಸ್ ವೈಪರ್ ಹಾವನ್ನು ನೋಡಿದ ಮಹಿಳೆ ಕೈಯಲ್ಲಿರುವ ಸಿಗರೇಟ್ ಬಾಯಲ್ಲಿಟ್ಟುಕೊಂಡು ಅದರ ಹತ್ತಿರ ಹೋಗಿ ತಕ್ಷಣ ಅದರ ಕುತ್ತಿಗೆಯನ್ನು ಹಿಡಿದು ರಸ್ತೆ ಬದಿಗಿರುವ ತೋಟದಲ್ಲಿ ಬಿಟ್ಟಿದ್ದಾಳೆ. ಈ ದೃಶ್ಯ ನೋಡುವವರಿಗೆ ಎಷ್ಟು ಹೆದರಿಕೆಯಾಗುತ್ತದೆ ಆದರೆ ಯುವತಿಗೆ ಮಾತ್ರ ಸ್ವಲ್ಪವೂ ಭಯವಿಲ್ಲ ಎಂಬುದು ಕಂಡುಬರುತ್ತದೆ. ಯುವತಿಯ ಇದೇ ಕೃತ್ಯವು ನೇಟಿಜನ್ಸ್ ಗಳಿಗೆ ವಿಚಾರ ಮಾಡಲು ಹಚ್ಚಿದೆ.
ವೀಡಿಯೋ ನೋಡಿ
View this post on Instagram
ವಿಡಿಯೋವನ್ನು unilad ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಒಬ್ಬ ಯೂಸರ್ ಬರೆದಿರುವ ಹಾಗೆ, ಬ್ರೆಜಿಲ್ ನ ಜಬೋಟಿಕ್ ಟುಬಾಸ್ ನಲ್ಲಿ ಈ ಹಾವು ಕಂಡು ಬಂದಿತ್ತು. ಅದಕ್ಕೆ ಯಾವುದೇ ರೀತಿಯ ಹಾನಿಯಾಗಬಾರದು ಎಂಬ ಉದ್ದೇಶದಿಂದ ಈ ಮಹಿಳೆಯರು ಅದಕ್ಕೆ ಹಿಡಿದು ರಸ್ತೆಯ ಪಕ್ಕ ಬಿಟ್ಟಿದ್ದಾಳೆ ಎಂದು ಹೇಳಿದ್ದಾನೆ.