OMG! ವಿಡಿಯೋ ಮಾಡುವ ಹುಚ್ಚಾಟದಲ್ಲಿ ತನ್ನ ಮಗುವಿನ ಜೀವಕ್ಕೆ ಕಂಟಕ ತಂದಳು ಮೊಡರ್ನ್ ತಾಯಿ! ನೋಡಿ ತಾಯಿಯ ಹುಚ್ಚಾಟದ ವೈರಲ್ ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಏನಾದರೊಂದು ಫೋಟೋ ಅಥವಾ ವಿಡಿಯೋ ರೀತಿಯ ಕಂಟೆಂಟ್ ಗಳನ್ನು ಶೇರ್ ಮಾಡಿ ಪ್ರಸಿದ್ಧಿಯನ್ನು ಪಡೆಯಬೇಕೆಂಬ ಹುಚ್ಚು ಯುವವರ್ಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಶಿಯಲ್ ಮೀಡಿಯಾದ ಹಿಂದೆ ಯುವವರ್ಗವು ಸಂಪೂರ್ಣವಾಗಿ ಹುಚ್ಚಾಗಿಬಿಟ್ಟಿದೆ. ಇದರಲ್ಲಿ ಹುಡುಗ-ಹುಡುಗಿಯರೆಂಬ ಭೇದವಿಲ್ಲದೇ ಇಬ್ಬರು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಏಕೆ ತಾಯಂದಿರರು ಸಹ ಇದರಲ್ಲಿ ಕಡಿಮೆ ಇಲ್ಲ. ಮಕ್ಕಳ ಪಾಲನೆ ಪೋಷಣೆಯನ್ನು ಮಾಡುತ್ತಾ ವಿವಿಧ ರೀತಿಯ ವಿಡಿಯೋ ಕಂಟೆಂಟ್ ಗಳನ್ನು ಹಾಕುವುದರಲ್ಲಿ ತಾಯಂದಿರು ಏನು ಕಮ್ಮಿ ಇಲ್ಲವೆಂದೇ ಹೇಳಬಹುದು.
ಏಕೆಂದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಾಯಿಯೊಬ್ಬಳ ವಿಡಿಯೋ ಮಾಡುವಾಗಿನ ದೃಶ್ಯ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತಾಯಿಯು ತನ್ನ ವಿಡಿಯೋವನ್ನು ಮಾಡಲು ಫೋನ್ ಎದುರಿಗಿಟ್ಟು ಇನ್ನೇನು ಅಣಿಯಾಗಬೇಕು ಎನ್ನುವಷ್ಟರಲ್ಲಿ ಅವಳ ಪುಟ್ಟಮಗು ಆಕೆಯ ಹಿಂದೆಯೇ ಬಂದಿದೆ. ಅದನ್ನು ತಾಯಿ ಸ್ವಲ್ಪವೂ ಗಮನಿಸದೆ ಹಾಗೆಯೇ ಹಿಂದೆ ಸರಿಯಲು ಹೋದಾಗ ಬ್ಯಾಲೆನ್ಸ್ ತಪ್ಪಿ ಮಗುವಿನ ಮೇಲೆ ಜೋರಾಗಿಯೇ ಬಿದ್ದಿದ್ದಾಳೆ. ಈ ರೀತಿಯ ಅಜಾಗರೂಕತನದ ವಿಡಿಯೋ ಮಾಡುವ ಹುಚ್ಚುತನ ಮಗುವಿನ ಜೀವಕ್ಕೆ ಅಪಾಯ ತರುವಂತಿತ್ತು. ವಿಡಿಯೋ ನೋಡುವಾಗ ಒಮ್ಮೆಲೆ ಎದೆ ಝಲ್ಲೆನ್ನುತ್ತದೆ. ಮತ್ತು ತಾಯಿಯೇ ಮಗುವಿನ ಮೇಲೆ ಬೀಳುವ ದೃಶ್ಯ ನೋಡಿದಾಗ ಅಯ್ಯೋ ಪಾಪ ಎಂಬ ಶಬ್ದ ತಾನಾಗಿಯೇ ನೋಡುಗರಿಂದ ಹೊರಬೀಳುತ್ತದೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ alexandraebabycat ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಲಕ್ಷಾವಧಿ ಜನರು ಈ ವಿಡಿಯೋವನ್ನು ನೋಡಿ ಸಾಕಷ್ಟು ಜನರು ಲೈಕ್ ಮಾಡಿದ್ದಾರೆ. ಜೊತೆಗೆ ಈ ರೀತಿಯ ಹುಚ್ಚು ತಾಯಂದಿರಿಗೆ ನೇಟಿಜನ್ಸ್ ಗಳು ಕ್ಲಾಸ್ ಸಹಿತ ತೆಗೆದುಕೊಂಡಿದ್ದಾರೆ.