ಎರಡು ಗೂಳಿಗಳ ಕಾವೇರಿದ ಕಾಳಗದಲ್ಲಿ ಹಠಾತ್ತನೆ ಎಂಟ್ರಿ ಮಾಡಿತು ನಾಯಿ! ಮುಂದೆನಾಯಿತು? ನೋಡಿ ಈ ವೈರಲ್ ವಿಡಿಯೋದಲ್ಲಿ…

 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೊಬ್ಬಿದ ಗೂಳಿಗಳ ರೋಷದಿಂದ ತುಂಬಿದ ಕಾಳಗದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅವೆರಡರಲ್ಲಿ ಭರ್ಜರಿಯಾಗಿ ಕಾಳಗ ಕಾವೇರಿದ ಸಂದರ್ಭದಲ್ಲಿ ಸರಿಯಾಗಿ ಅದೇ ಸಮಯಕ್ಕೆ ಮಧ್ಯದಲ್ಲಿ ಒಂದು ನಾಯಿಯು ಎಂಟ್ರಿ ಮಾಡಿದೆ. ಆನಂತರ ಅಲ್ಲಿ ನಡೆದ ಘಟನೆ ತುಂಬಾ ಆಶ್ಚರ್ಯಕರವಾಗಿದೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಕಚ್ಚಾ ದಾರಿಯ ಬದಿಯಲ್ಲಿ ಎರಡು ಗೂಳಿಗಳು ಎದುರು ಬದುರಾಗಿ ಹೋರಾಡುತ್ತಿವೆ. ಕ್ಯಾಮೆರಾದಲ್ಲಿ ಕಾಣುವ ಹಾಗೆ ವ್ಯಕ್ತಿಯೊಬ್ಬನು ಕುದುರೆಯ ಮೇಲೆ ಕುಳಿತು ಈ ಕಾಳಗವನ್ನು ವೀಕ್ಷಿಸುತ್ತಿದ್ದಾನೆ. ಏತನ್ಮಧ್ಯೆ ನಾಯಿಯೊಂದು ಹಠಾತ್ತನೆ ಎಲ್ಲಿಂದಲೋ ಬಂದು ಈ ಎರಡರ ಜಗಳದಲ್ಲಿ ಪ್ರವೇಶ ಮಾಡಿದೆ. ಇದು ಯಾಕೋ ಒಂದು ಗೂಳಿಗೆ ಸರಿ ಎನಿಸಿಲ್ಲ. ಅದಕ್ಕೆ ಗೂಳಿ ನಾಯಿಯ ಕಿವಿಯನ್ನು ಬಾಯಿಯಲ್ಲಿ ಹಿಡಿದು ಬೋಬೆಯಂತೆ ದೂರ ಬಿಸಾಕಿ ಬಿಟ್ಟಿದೆ. ಈ ಸಂದರ್ಭದಲ್ಲಿ ಎರಡನೇ ಗೂಳಿ ಇದೇ ಸರಿಯಾದ ಸಮಯವೆಂದು ತಿಳಿದು ಬಿಳಿ ಬಣ್ಣದ ಗೂಳಿಯ ಮೇಲೆ ತನ್ನ ಕೋಡುಗಳಿಂದ ಆಕ್ರಮಣ ಮಾಡಿದೆ. ಈ ದೃಶ್ಯವನ್ನು ನೋಡಿದ ಇನ್ನೊಂದು ನಾಯಿಯು ಹೆದರಿ ಇವುಗಳ ಸಹವಾಸವೇ ಬೇಡ ಎಂದು ಜಗಳದಿಂದ ದೂರವಾಗಿರುವ ದೃಶ್ಯ ಕಂಡು ಬರುತ್ತಿದೆ. ಈ ರೀತಿಯ ಪ್ರಾಣಿಗಳ ಜಗಳದ ಮತ್ತು ತಮಾಷೆಯ ವಿಡಿಯೋ ನೋಡಲು ಹೆಚ್ಚು ಸಿಗುವದಿಲ್ಲ.

ವಿಡಿಯೋ ನೋಡಿ

ಗೂಳಿಗಳ ಈ ರೀತಿಯ ಗ್ಯಾಂಗ್ ವಾರ್ ನೋಡಿ ಅನೇಕ ನೆಟಿಜನ್ಸ್ ಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈ ವೀಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ir_geographic ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿ ಲೈಕ್ ಮಾಡಿದ್ದಾರೆ.