ಅಬ್ಬಾ! ಅಣ್ಣನನ್ನು ಫಾಲೋ ಮಾಡಲು ಹೋಗಿ ಅಣ್ಣನ ತಲೆಗೆ ನೇರ ಕಲ್ಲಿನಿಂದ ಪೆಟ್ಟು ಕೊಟ್ಟ ತಮ್ಮ! ಅಣ್ಣ ತಮ್ಮರ ಸಖತ್ ತಮಾಷೆಯ ವಿಡಿಯೋ ಆಯಿತು ವೈರಲ್!

ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪರಿವೆ ಮತ್ತು ಅರಿವಿಲ್ಲದಂತೆ ಸಹಜವಾಗಿ ಮಾಡಿದ ಪುಟ್ಟ ಮಕ್ಕಳ ಮುಗ್ಧ ಚಟುವಟಿಕೆಗಳ ವಿಡಿಯೋ ಒಮ್ಮೆಲೆ ವೈರಲ್ ಆಗಿಬಿಡುತ್ತದೆ. ಇಂಥ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಸದ್ಯ ಈಗ ನೋಡಲಿರುವ ವಿಡಿಯೋ ಸಹ ನಿಮಗೂ ತುಂಬಾ ಇಷ್ಟವಾಗಲಿದೆ ಎಂದು ಭಾವಿಸಿದ್ದೇನೆ.

ಈ ವಿಡಿಯೋದಲ್ಲಿ ಒಂದು ನದಿಯ ದಂಡೆಗೆ ಇಬ್ಬರು ಸಹೋದರರು ಆಟ ಆಡುತ್ತಿದ್ದಾರೆ. ಆಟಕ್ಕಾಗಿ ಅವರು ಉಪಯೋಗಿಸಿದ ಸಾಧನಗಳೆಂದರೆ ಅಲ್ಲಿರುವ ನುಣುಪಾದ ಚಿಕ್ಕಪುಟ್ಟ ಕಲ್ಲುಗಳು. ವಿಡಿಯೋದಲ್ಲಿ ಕಂಡುಬರುವ ಹಾಗೆ ಇಬ್ಬರು ಮಕ್ಕಳು ನದಿಯ ದಂಡೆಗೆ ಬಿದ್ದಿರುವ ನುಣುಪಾದ ಕಲ್ಲುಗಳನ್ನು ತೆಗೆದುಕೊಂಡು ನದಿಯಲ್ಲಿಯ ನೀರಿನ ಕಡೆಗೆ ಬಿಸಾಕುತ್ತಿದ್ದಾರೆ. ಅಣ್ಣ ಮುಂದೆ ನಿಂತು ಈ ಕೆಲಸ ಮಾಡುತ್ತಿರುವುದನ್ನು ನೋಡಿ ಹಿಂದಿನಿಂದ ತಮ್ಮನು ಅಣ್ಣನಿಗೆ ಸರಿಯಾಗಿ ಫಾಲೋ ಮಾಡಿದ್ದಾನೆ. ತಪ್ಪು ಮತ್ತು ತಮಾಷೆ ಈ ಎರಡೂ ಘಟನೆಗಳು ಇಲ್ಲಿಯೇ ಘಟಿಸಿವೆ. ತಮ್ಮನು ಅಣ್ಣನು ಮಾಡುತ್ತಿರುವ ಚಟುವಟಿಕೆಯನ್ನು ಫಾಲೋ ಮಾಡಲು ಹೋಗಿದ್ದಾನೆ. ಅಣ್ಣ ನದಿಗೆ ಕಲ್ಲೆಸೆಯುವ ಸಲುವಾಗಿ ಬಾಗಿದಾಗ ತಮ್ಮನು ನದಿಯ ನೀರಿನಲ್ಲಿ ಕಲ್ಲೆಸೆಯಲು ಪ್ರಯತ್ನಿಸಿದ್ದಾನೆ. ಆದರೆ ತಮ್ಮನು ಎಸೆದ ಕಲ್ಲು ನದಿಯವರೆಗೆ ಹೋಗದೆ ಎದುರಿನಲ್ಲಿ ಕಲ್ಲು ತೆಗೆದುಕೊಳ್ಳಲು ಬಾಗಿ ನಿಂತ ಅಣ್ಣನ ತಲೆಗೆ ನೇರವಾಗಿ ಹೋಗಿ ಬಡಿದು ನಂತರ ಪುಟಿದು ಮುಂದೆ ಹೋಗಿ ಬಿದ್ದಿದೆ. ಈ ಘಟನೆಯ ನಂತರ ಅಣ್ಣ ತಮ್ಮನ ಮೇಲೆ ತುಂಬಾ ಸಿಟ್ಟಾಗಿದ್ದಾನೆ. ಪ್ರಸ್ತುತ ವಿಡಿಯೋ ನೋಡಲು ತುಂಬಾ ತಮಾಷೆಯಾಗಿದೆ.

ವಿಡಿಯೋ ನೋಡಿ

 

View this post on Instagram

 

A post shared by Marcos Paulo (@eu.marcosp_)

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ eu.marcosp_ ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ತಮಾಷೆಯ ವಿಡಿಯೋವನ್ನು ಇಲ್ಲಿಯವರೆಗೆ 3.8 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಸುಮಾರು ಲಕ್ಷಕ್ಕಿಂತಲೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.