SBI ಗ್ರಾಹಕರಿಗೆ ಸಿಹಿಸುದ್ದಿ! ಮೊದಲು ಈ ನಂಬರ್ ನಿಮ್ಮ ಫೋನ್ ನಲ್ಲಿ ಸೇವ್ ಮಾಡಿಕೊಳ್ಳಿ; ಈ ಎಲ್ಲ ಕೆಲಸಗಳಾಗುವವು ಬರೀ ಒಂದೇ ಒಂದು ಕಾಲ್ ನಿಂದ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರಿಗಾಗಿ ಒಂದು ಮಹತ್ವದ ಸುದ್ದಿ ಇದೆ. ದೇಶದ ಅತೀ ದೊಡ್ಡ ಬ್ಯಾಂಕ್ ಆದ SBI ನಲ್ಲಿ ನೀವು ಖಾತೆಯನ್ನು ಹೊಂದಿದವರಾಗಿದ್ದರೆ ಈ ಬ್ಯಾಂಕ್ ನಿಮಗೆ ಬರೀ ಒಂದೇ ಒಂದು ಕಾಲ್ ಅಥವಾ ಮೆಸೇಜ್ ಮುಖಾಂತರ ಅನೇಕ ಸೌಲಭ್ಯಗಳನ್ನು ಮನೆಯಲ್ಲಿಯೇ ಕುಳ್ಳಿರಿಸಿ ನೀಡಲಿದೆ. ಹೀಗಾಗಿ ನೀವು ಈ ನಂಬರ್ ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳುವದು ತುಂಬಾ ಅಗತ್ಯವಾಗಿದೆ.

SBI ತನ್ನ ಗ್ರಾಹಕರಿಗಾಗಿ 1800 1234 ಈ ಟೋಲ್ ಫ್ರೀ ನಂಬರ್ ಬಿಡುಗಡೆ ಮಾಡಿದೆ. ಈ ನಂಬರ್ ಗೆ ಗ್ರಾಹಕರು ಒಂದು ಕಾಲ್ ಅಥವಾ ಮೆಸೇಜ್ ಮಾಡಿ ಮನೆಯಲ್ಲಿಯೇ ಕುಳಿತು ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. SBI ಬ್ಯಾಂಕ್ ತನ್ನ ಅಧಿಕೃತ ಸೈಟ್ ನಿಂದ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದೆ. ಅದರಲ್ಲಿ ಬ್ಯಾಂಕ್, ‘ನಿಮ್ಮ ಎಲ್ಲಾ ಮಹತ್ವದ ಕೆಲಸಗಳನ್ನು ಈ ಮೇಲಿನ ಒಂದೇ ಒಂದು ನಂಬರ್ ಗೆ ಕಾಲ್ ಮಾಡಿ ನಿಮಿಷದಲ್ಲಿಯೇ ಪಡೆದುಕೊಳ್ಳಬಹುದಾಗಿದೆ ಎಂದು ಸೂಚಿಸಿದೆ.

SBI ತನ್ನ ಟ್ವೀಟ್ ನಲ್ಲಿ ‘ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ, ನಾವು ನಿಮ್ಮ ಮನೆಯ ಬಾಗಿಲಿಗೆ ಸೌಲಭ್ಯಗಳನ್ನು ನೀಡಲಿದ್ದೇವೆ’ ಎಂದು ಹೇಳಿದೆ. ನಿಮ್ಮ ರಜಿಸ್ಟರ್ ಮೊಬೈಲ್ ನಂಬರ್ ನಿಂದ ಈ ನಂಬರಿಗೆ 1800 1234 ಕಾಲ್ ಮಾಡಿ ಬ್ಯಾಂಕಿಗೆ ಸಂಬಂಧಪಟ್ಟ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

* ಯಾವ ಯಾವ ಸೌಲಭ್ಯಗಳನ್ನು ಪಡೆಯ ಬಹುದಾಗಿದೆ….

# ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.
# ಕೊನೆಯ 5 ವ್ಯವಹಾರಗಳ ಮಾಹಿತಿ ಪಡೆಯಬಹುದು.
# ನಿಮ್ಮ ಖಾತೆಯಲ್ಲಿಯ ಬ್ಯಾಲೆನ್ಸ್ ಮತ್ತು ಕೊನೆಯ 5 ವ್ಯವಹಾರಗಳನ್ನು SMS ಮುಖಾಂತರವೂ ತಿಳಿದುಕೊಳ್ಳಬಹುದು.
# ಎಟಿಎಂ ಕಾರ್ಡ್ ಬ್ಲಾಕ್ ಮತ್ತು ಹೊಸದಾದ ಕಾರ್ಡಿಗೆ ಡಿಮಾಂಡ್ ಮಾಡಬಹುದು.
# ಮನೆಯಲ್ಲಿಂದಲೇ ಎಟಿಎಂ ಗ್ರೀನ್ ಪಿನ್ ತಯಾರಿಸಬಹುದು.
# ಇದರ ಹೊರತಾಗಿ ಹಳೆಯ ಎಟಿಎಂ ಕಾರ್ಡ್ ಬ್ಲಾಕ್ ಮಾಡಿದ ನಂತರ ಹೊಸದಾದ ಎಟಿಎಂ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು.