ಎಲ್ಲ ಪುಟ್ಟ ತಮ್ಮ-ತಂಗಿಯರಿಗೆ ಬೇಕು ಇಂಥ ಅಣ್ಣ; ಈ ವೈರಲ್ ವಿಡಿಯೋ ನೋಡಿದಾಗಲೇ ಗೊತ್ತಾಗುವುದು ಅಣ್ಣನ ಅದ್ಭುತ ಸಂಯಮ ಶಕ್ತಿ! ಅದು ಎಲ್ಲರಿಗೂ ಇರಲ್ಲ, ಈತನ ಹೊರತಾಗಿ…

ಸೋಶಿಯಲ್ ಮೀಡಿಯಾವು ವೈರಲ್ ವಿಡಿಯೋ ಮತ್ತು ಫೋಟೋಗಳ ಮಹಾಸಾಗರ, ಆಗರ. ಇಲ್ಲಿ ಬಿತ್ತರವಾಗುವ ಅನೇಕ ಕಂಟೆಂಟ್ ಗಳು ನಿಜಕ್ಕೂ ಅದ್ಭುತ, ಅವರ್ಣನೀಯ, ವಿಸ್ಮಯ. ಅನೇಕ ವಿಡಿಯೋಗಳು ನೋಡುಗರಿಗೆ ಜೀವನದ ಪಾಠ ಮತ್ತು ಸತ್ಯವನ್ನು ಕಲಿಸುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅಣ್ಣ-ತಮ್ಮರ ವಿಡಿಯೋ ಒಂದು ನೋಡಲು ತುಂಬಾ ಸೊಗಸಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ತಮ್ಮನು ಅಣ್ಣನ ಮೇಲೆ ದರ್ಬಾರು ಮಾಡುತ್ತಿದ್ದಾನೆ. ಅಣ್ಣ ತನ್ನ ತಮ್ಮನ ಮೇಲಿನ ಪ್ರೀತಿಗಾಗಿ ಅದನ್ನು ಸಹಿಸಿ ಕೊಳ್ಳುವುದನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿ ಅಣ್ಣನ ಸಂಯಮ ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ. ಕಾರಣ ಅಣ್ಣನು ತೆಗೆದುಕೊಳ್ಳುತ್ತಿರುವ ಸಹನೆ ಆತನ ವಯಸ್ಸಿಗೆ ಮೀರಿದ್ದಾಗಿದೆ, ಎಂದು ಹೇಳಬಹುದು.

ಈ ವಿಡಿಯೋದಲ್ಲಿ ಆಟಿಗೆ ಸಾಮಾನುಗಳ ಸಲುವಾಗಿ ಇಬ್ಬರೂ ಸಹೋದರರಲ್ಲಿ ಜಗಳವಾಗುತ್ತಿದೆ. ಈ ಜಗಳದಲ್ಲಿ ತಮ್ಮನು ಅಣ್ಣನಿಗೆ ಪದೇ ಪದೇ ಹೊಡೆಯುತ್ತಿದ್ದಾನೆ. ಇದರಿಂದ ಅಣ್ಣನಿಗೆ ಕೋಪ ಬರುತ್ತಿದ್ದರೂ ಅದನ್ನು ಕಂಟ್ರೋಲ್ ಮಾಡಿ ತಮ್ಮನಿಗೆ ಹೊಡೆಯದೇ ಮುದ್ದು ಮಾಡುತ್ತಿದ್ದಾನೆ. ತಮ್ಮನ ಹೊಡೆತಕ್ಕೆ ಅಣ್ಣನಿಗೆ ಸಿಟ್ಟು ಬಂದು ಹೊಡೆಯಲು ಕೈಯೆತ್ತಿದರೂ ಅದನ್ನು ಕಂಟ್ರೋಲ್ ಮಾಡಿ ಮತ್ತೆ ಆತನಿಗೆ ಮುದ್ದಿಸುತ್ತಿದ್ದಾನೆ. ಅಣ್ಣ ತಮ್ಮರ ಪ್ರೀತಿ ಮತ್ತು ಜಗಳದ ಈ ವಿಡಿಯೋ ನೋಡುಗರಿಗೆ ತುಂಬಾ ಇಷ್ಟವಾಗಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 1.7 ಮಿಲಿಯನ್ ಜನ ಲೈಕ್ಸ್ ಮಾಡಿದ್ದಾರೆ.